ಕರ್ನಾಟಕ, ಕೇರಳ ಕಾಂಗ್ರೆಸ್ ವಶ : ಐಬಿಎನ್ ಸಮೀಕ್ಷೆ
ಬೆಂಗಳೂರು, ಏ.2: ಲೋಕಸಭೆಗೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿರುವ ಸಿಎನ್ ಎನ್ ಐಬಿಎನ್-ಲೋಕ್ ನೀತಿ-ಸಿಎಸ್ ಡಿಎಸ್ ಸಂಸ್ಥೆ ತನ್ನ ಇತ್ತೀಚಿನ ವರದಿಯನ್ನು ನೀಡಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಕರ್ನಾಟಕ, ಕೇರಳದಲ್ಲಿ ತನ್ನ ಪ್ರಭುತ್ವ ಸಾಧಿಸಲಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಯುಪಿಎ ಸ್ಥಾನ ಕಳೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.
ಕಳೆದ ಜನವರಿಯಲ್ಲಿ 18 ರಾಜ್ಯಗಳಲ್ಲಿ ಸಿಎನ್ ಎನ್ ಐಬಿಎನ್ ನಡೆಸಿದ್ದ ಸಮೀಕ್ಷಾ ವರದಿಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ 221-231 ಸ್ಥಾನಗಳನ್ನು ಗಳಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ 107-127 ಸೀಟು ಪಡೆಯಲಿದೆ ಎಂದು ಹೇಳಲಾಗಿತ್ತು. ಈಗ ಮಾರ್ಚ್ ತಿಂಗಳಲ್ಲಿ ದಕ್ಷಿಣ ಭಾರತದಲ್ಲಿ ಸಮೀಕ್ಷೆ ನಡೆಸಿ ವರದಿಯನ್ನು ಪ್ರಕಟಿಸಲಾಗಿದೆ.
ಎಬಿಪಿ ವರದಿ: ಬಿಜೆಪಿ ನೇತೃತ್ವದ ಎನ್ ಡಿಎಗೆ 236 ಸ್ಥಾನಗಳು ದೊರೆಯಲಿದೆ. ಕಾಂಗ್ರೆಸ್ ನೇತೃತ್ವ ಯುಪಿಎ ಈ ಬಾರಿ ಚುನಾವಣೆಯಲ್ಲಿ ನೆಲಕಚ್ಚಲಿದ್ದು, ಕೇವಲ 92 ಸ್ಥಾನಕ್ಕೆ ತೃಪ್ತಿ ಹೊಂದಬೇಕಾಗುತ್ತದೆ ಎಂದು ಎಬಿಸಿ-ನೆಲ್ಸನ್ ಸಂಸ್ಥೆ ವರದಿ ನೀಡಿತ್ತು. ಸಮೀಕ್ಷಾ ವರದಿಗಳು ದೊಡ್ಡ ಜೋಕ್ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದರು. ಈಗ ದಕ್ಷಿಣದಲ್ಲಿ ಫಲಿತಾಂಶ ಕಾಂಗ್ರೆಸ್ ಪರ ಎಂದು ಐಬಿಎನ್ ವರದಿ ಬಂದಿರುವಾಗ ರಾಹುಲ್ ಹೇಗೆ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಸಿಎನ್ ಎನ್ ಐಬಿಎನ್ ಲೈವ್ ಸುದ್ದಿ ವಾಹಿನಿ ಇತ್ತೀಚಿನ ವರದಿಯಂತೆ ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ 7-13 ಸ್ಥಾನ), ಕಾಂಗ್ರೆಸ್ 12-18 ಸ್ಥಾನ ಹಾಗೂ ಜೆಡಿಎಸ್ ಹಾಗೂ ಇತರೆ 1-4 ಗಳಿಸಲಿದೆ. ಇನ್ನಷ್ಟು ವಿವರ ಮುಂದೆ ಓದಿ...

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಪತ್ಯ
ಕರ್ನಾಟಕ (28) : ಬಿಜೆಪಿ 7-13 (2009ರಲ್ಲಿ 19), ಕಾಂಗ್ರೆಸ್ 12-18 (6), ಜೆಡಿಎಸ್ ಹಾಗೂ ಇತರೆ 1-4 (3)
ಆಮ್ ಆದ್ಮಿ ಪಕ್ಷ ಒಂದೇ ಒಂದು ಸ್ಥಾನ ಗಳಿಸುವುದಿಲ್ಲ ಎಂದು ಚೆನ್ನೈನ ಮ್ಯಾಥಮೆಟಿಕಲ್ ಇನ್ಸ್ಟಿಟ್ಯೂಟ್ ನಿರ್ದೇಶಕ ರಾಜೀವ ಕರಾಡಿಕರ್ ಅವರು ನೀಡಿದ ಅಂಕಿ ಅಂಶದ ಆಧಾರದ ಮೇಲೆ ಸಮೀಕ್ಷೆ ವರದಿ ತಯಾರಿಸಲಾಗಿದೆ.
ದಕ್ಷಿಣ ಭಾರತದ ಇತರೆ ರಾಜ್ಯಗಳಲ್ಲಿ ಹೇಗೆ?
* ಆಂಧ್ರಪ್ರದೇಶ: ಟಿಡಿಪಿ 13-19, ವೈಎಸ್ಸಾರ್ ಕಾಂಗ್ರೆಸ್ 9-15, ಕಾಂಗ್ರೆಸ್ 4, ಟಿಆರ್ ಎಸ್ 8
* ತಮಿಳುನಾಡು : ಎಐಎಡಿಎಂಕೆ: 15-21, ಡಿಎಂಕೆ 10-16, ಎನ್ ಡಿಎ 6-10
* ಕೇರಳ: ಆಡಳಿತಾರೂಢ ಯುಡಿಎಫ್ 11-17, ಎಲ್ ಡಿಎಫ್ 4-8

ರಾಜ್ಯದಲ್ಲಿ ಜಾತಿವಾರು ಸಮೀಕ್ಷೆಯಂತೆ
ಮೇಲ್ಜಾತಿ ವರ್ಗ
* ಬಿಜೆಪಿ ಪರ ಶೇ 63
* ಕಾಂಗ್ರೆಸ್ ಪರ ಶೇ 28
* ಜೆಡಿಎಸ್ ಪರ ಶೇ 13
ಒಕ್ಕಲಿಗ
ಬಿಜೆಪಿ ಶೇ 37
ಕಾಂಗ್ರೆಸ್ ಶೇ 28
ಜೆಡಿಎಸ್ ಶೇ 32

ಮಹಿಳೆಯರು ಕಾಂಗ್ರೆಸ್ ಪರ
* ಶೇ 51ರಷ್ಟು ಮಹಿಳಾ ಮತದಾರರು ಕಾಂಗ್ರೆಸ್ ಪರ ಇದ್ದರೆ ಶೇ 33ರಷ್ಟು ಮಾತ್ರ ಬಿಜೆಪಿ ಪರ ಇದ್ದಾರೆ.
* ಶೇ 41 ರಷ್ಟು ಪುರುಷ ಮತದಾರರು ಬಿಜೆಪಿ ಪರ ಇದ್ದರೆ ಶೇ 39 ರಷ್ಟು ಪುರುಷ ಮತದಾರರು ಕಾಂಗ್ರೆಸ್ ಪರ ಇದ್ದಾರೆ.

ಪ್ರಧಾನಿ ಪಟ್ಟ ಮೋದಿಗೆ ಬೆಂಬಲ
ಪ್ರಧಾನಿ ಹುದ್ದೆಯ ದೃಷ್ಟಿಯಿಂದ ಕೇಳಿದ ಪ್ರಶ್ನೆಗೆ ಶೇ. 32ರಷ್ಟು ಮಂದಿ ಮೋದಿ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿಗೆ ಶೇ.27ರಷ್ಟು ಮಂದಿ ಬೆಂಬಲ ಇದೆ. ಇನ್ನು ದೇವೇಗೌಡರಿಗೆ ಶೇ. 7ರಷ್ಟು ಮಂದಿಯಷ್ಟೆ ಬೆಂಬಲ ಸೂಚಿಸಿದ್ದಾರೆ.ಸೋನಿಯಾ ಗಾಂಧಿ ಅವರಿಗೆ ಶೇ 8 ರಷ್ಟು ಜನ ಬೆಂಬಲ ಸೂಚಿಸಿದ್ದಾರೆ.












Click it and Unblock the Notifications