ಮಾಹಿತಿ ಹಕ್ಕಿನಡಿ ಪತಿ, ಪತ್ನಿಯ ಆದಾಯವೂ ಲಭ್ಯ
ನವದೆಹಲಿ, ಫೆ. 7: ನಿಮ್ಮ ಜೀವನ ಸಂಗಾತಿ ತಮ್ಮ ಸಂಪಾದನೆಯ ಕುರಿತು ನಿಮಗೆ ಹೇಳುತ್ತಿಲ್ಲವೇ? ಆತಂಕ ಬೇಡ. ನಿಮ್ಮ ಬೆಂಬಲಕ್ಕೆ ಕಾನೂನು ನಿಲ್ಲುತ್ತದೆ. ದೇಶದ ಅತ್ಯಂತ ಪ್ರಬಲ ಕಾನೂನುಗಳಲ್ಲಿ ಒಂದಾಗಿರುವ ಮಾಹಿತಿ ಹಕ್ಕು ಕಾಯ್ದೆಯಡಿ ಬಾಳಸಂಗಾತಿಯ ಆದಾಯವನ್ನೂ ತರಲಾಗಿದೆ.
ಹೌದು, ಅರ್ಜಿಯೊಂದರ ವಿಚಾರಣೆ ನಡೆಸಿದ ಸಮಯದಲ್ಲಿ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಈ ಕುರಿತು ಶುಕ್ರವಾರ ಆದೇಶ ಹೊರಡಿಸಿದೆ. [ಸೋನಿಯಾ, ಅನಂತ್ ಗೂ ಬಿಸಿ]

ಪ್ರಕರಣವೇನು? : ವ್ಯಕ್ತಿಯೋರ್ವ ತನ್ನ ಸಂಪಾದನೆಯು ತನ್ನ ವೈಯಕ್ತಿಕ ಹಕ್ಕು ಎಂದು ವಾದಿಸುತ್ತಿದ್ದ. ತನ್ನ ಪತ್ನಿಗೂ ವಿವರ ನೀಡಲು ಸಿದ್ಧನಿರಲಿಲ್ಲ. ಇದನ್ನು ಪ್ರಶ್ನಿಸಿ ಪತ್ನಿ ಮಾಹಿತಿ ಹಕ್ಕು ಕಾಯ್ದೆಯಡಿ ಪತಿಯ ಸಂಪಾದನೆಯ ವಿವರ ಕೇಳಿದ್ದಳು.
ಈ ಅರ್ಜಿಯ ವಿಚಾರಣೆ ನಡೆಸಿದ ಕೇಂದ್ರ ಮಾಹಿತಿ ಆಯೋಗ ಬಾಳ ಸಂಗಾತಿಯ ಆದಾಯದ ವಿವರ ತಿಳಿಯುವುದು ಪತ್ನಿಯ ಹಕ್ಕು ಎಂದು ತೀರ್ಪು ನೀಡಿದೆ. ಅಲ್ಲದೆ, ಈ ವಿವರವನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಬಹುದು ಎಂದು ತಿಳಿಸಿದೆ. [ಮೋದಿ ನಡೆ ಸೋನಿಯಾಗೂ ಅಚ್ಚರಿ]
ಈಚೆಗಷ್ಟೇ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ನವದೆಹಲಿ ನ್ಯಾಯಾಲಯವೊಂದು ಪತಿ ಹಾಗೂ ಪತ್ನಿ ಇಬ್ಬರಿಗೂ ತಮ್ಮ ಆದಾಯದ ವಿವರ ಕುರಿತು ಅಫಿಡವಿಟ್ ಸಲ್ಲಿಸುವಂತೆ ಸೂಚನೆ ನೀಡಿತ್ತು. ಅದುವರೆಗೆ ಸಂಪಾದನೆಯನ್ನು ವೈಯಕ್ತಿಕ ಎಂದು ಪರಿಗಣಿಸಲಾಗುತ್ತಿತ್ತು. ಈ ಪ್ರಕರಣದ ಆಧಾರದ ಮೇಲೆ ಸಿಐಸಿ ಈ ತೀರ್ಪು ನೀಡಿದೆ.












Click it and Unblock the Notifications