ರಫೇಲ್ ಒಪ್ಪಂದಕ್ಕೆ ಎಚ್‌ಎಎಲ್‌ಅನ್ನು ಏಕೆ ಆಯ್ದುಕೊಳ್ಳಲಿಲ್ಲ: ಕಾರಣ ನೀಡಿದ ಕೇಂದ್ರ ಸರ್ಕಾರ

ನವದೆಹಲಿ, ನವೆಂಬರ್ 13: ತೀವ್ರ ವಿವಾದ ಸೃಷ್ಟಿಸಿರುವ ರಫೇಲ್ ಒಪ್ಪಂದದಲ್ಲಿ ಬೆಂಗಳೂರಿನಲ್ಲಿರವ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅನ್ನು ಮೊದಲ ಆಫ್‌ಸೆಟ್ ಪಾಲುದಾರನಾಗಿ ಏಕೆ ಆಯ್ದುಕೊಳ್ಳಲಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ವಿವರಿಸಿದೆ.

ಸುಪ್ರೀಂಕೋರ್ಟ್‌ಗೆ ಈ ಸಂಬಂಧ ದಾಖಲೆಗಳನ್ನು ಸಲ್ಲಿಸಿರುವ ಕೇಂದ್ರ ಸರ್ಕಾರ, ಎಚ್‌ಎಎಲ್ ಮತ್ತು ಯುದ್ಧ ವಿಮಾನ ತಯಾರಿಸುವ ಫ್ರಾನ್ಸ್ ಕಂಪೆನಿ ಡಸಾಲ್ಟ್ ಏವಿಯೇಷನ್ ನಡುವೆ ಸಾಮಾನ್ಯ ಹೊಂದಾಣಿಕೆಯ ಕೊರತೆಯಂತಹ ಸಮಸ್ಯೆಗಳು ಎದುರಾಗಿದ್ದವು ಎಂದು ತಿಳಿಸಿದೆ.

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್ ಕಂಪೆನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಡಸಾಲ್ಟ್ ಏವಿಯೇಷನ್ ಮತ್ತು ಫ್ರಾನ್ಸ್ ಸರ್ಕಾರದ ಮೇಲೆ ಒತ್ತಡ ಹೇರಿ ಎಚ್‌ಎಎಲ್ ಅದರ ಪ್ರಮುಖ ಆಫ್‌ಸೆಟ್ ಪಾಲುದಾರ ಆಗುವುದನ್ನು ತಪ್ಪಿಸಿದೆ.

ಈ ಮೂಲಕ ಭಾರತದ ಭವಿಷ್ಯದ ಯುದ್ಧ ವಿಮಾನ ತಯಾರಿಕಾ ಸಂಸ್ಥೆಯನ್ನು ನಾಶಪಡಿಸಲು ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅನಿಲ್ ಅಂಬಾನಿ ಅವರಿಗೆ ಇದರಿಂದ 30 ಸಾವಿರ ಕೋಟಿ ರೂ. ಲಾಭವಾಗಲಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಹೊಂದಾಣಿಕೆಯ ಕೊರತೆ

ಹೊಂದಾಣಿಕೆಯ ಕೊರತೆ

ಮುಖ್ಯವಾಗಿ ಭಾರತದಲ್ಲಿಯೇ 108 ಯುದ್ಧ ವಿಮಾನಗಳನ್ನು ತಯಾರಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಸಮಸ್ಯೆಗಳಿಗೆ ಪರಿಹಾರ ಸಿಗಲಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ವಿವರಿಸಿದೆ.

ಅದರ ಜತೆಗೆ ಎಚ್‌ಎಎಲ್ ಮತ್ತು ಡಸಾಲ್ಟ್ ಏವಿಯೇಷನ್‌ ನಡುವೆ ಸಾಮಾನ್ಯ ಹೊಂದಾಣಿಕೆಯೂ ಬರದೆ ಇರಲು ಈ ಸಮಸ್ಯೆಗಳು ಕಾರಣವಾದವು. ಹೀಗಾಗಿ ಒಪ್ಪಂದದ ವ್ಯವಹಾರವು ಕುದುರಲಿಲ್ಲ ಎಂದು ಹೇಳಿದೆ.

ಹೆಚ್ಚುವರಿ ಶಕ್ತಿ ಬೇಕು

ಹೆಚ್ಚುವರಿ ಶಕ್ತಿ ಬೇಕು

ಅಲ್ಲದೆ, ರಫೇಲ್ ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಲು ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್‌ಗೆ ಹೋಲಿಸಿದರೆ ಎಚ್‌ಎಎಲ್‌ಗೆ 2.7 ಪಟ್ಟು ಅಧಿಕ ಮಾನವಶಕ್ತಿಯ ಗಂಟೆಗಳು ಬೇಕಾಗುತ್ತಿತ್ತು ಎಂದು ಅದು ವಿವರಿಸಿದೆ.

ಮಾಹಿತಿಯ ದಾಖಲೆ

ಮಾಹಿತಿಯ ದಾಖಲೆ

'36 ಯುದ್ಧ ವಿಮಾನಗಳ ತಯಾರಿಕೆ ಒಪ್ಪಂದ ಮಾಡಿಕೊಳ್ಳಲು ದಾರಿಮಾಡಿದ ನಿರ್ಧಾರ ಕೈಗೊಳ್ಳುವಿಕೆ ಪ್ರಕ್ರಿಯೆಯ ಹೆಜ್ಜೆಗಳ ಮಾಹಿತಿ' ಎಂದು ಶೀರ್ಷಿಕೆಯಡಿ ಕೇಂದ್ರ ಸರ್ಕಾರ ಈ ದಾಖಲೆಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ.

ರಕ್ಷಣಾ ಖರೀದಿ ಪ್ರಕ್ರಿಯೆ (ಡಿಪಿಪಿ) -2013ಕ್ಕೆ ಅನುಗುಣವಾಗಿ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆಯನ್ನು ನಡೆಸಲಾಗದಿದೆ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.

2016ರ ಸೆಪ್ಟೆಂಬರ್ 23ರಂದು ಅಂತರ್ ಸರ್ಕಾರಿ ಒಪ್ಪಂದ (ಐಜಿಎ) ಉಭಯ ದೇಶಗಳ ರಕ್ಷಣಾ ಸಚಿವರ ನಡುವೆ ನಡೆದಿತ್ತು.

ಮುಚ್ಚಿದ ಲಕೋಟೆಯಲ್ಲಿ ನೀಡಿದ್ದ ಕೇಂದ್ರ

ಮುಚ್ಚಿದ ಲಕೋಟೆಯಲ್ಲಿ ನೀಡಿದ್ದ ಕೇಂದ್ರ

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಯುದ್ಧ ವಿಮಾನಗಳ ಬೆಲೆ ಮತ್ತು ತಾಂತ್ರಿಕ ವಿವರಗಳನ್ನೊಳಗೊಂಡ ಸೀಲ್ ಮಾಡಲಾದ ಲಕೋಟೆಯನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ನವೆಂಬರ್ 12ರಂದು ನೀಡಿತ್ತು.

ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಫ್ರಾನ್ಸ್ ಸರ್ಕಾರದ ಜೊತೆ ಮಾಡಿಕೊಳ್ಳಲಾದ ಒಪ್ಪಂದದ ಮಾಹಿತಿಗಳನ್ನು ಹತ್ತು ದಿನಗಳೊಳಗೆ ನೀಡುವಂತೆ ಅ.31 ರಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+