ಕೇಂದ್ರದ ಮಧ್ಯಂತರ ಬಜೆಟ್ ಫೆಬ್ರವರಿ 01 ಕ್ಕೆ ಮಂಡನೆ
ನವದೆಹಲಿ, ಜನವರಿ 09: ಕೇಂದ್ರ ಸರ್ಕಾರವು ತನ್ನ ಮಧ್ಯಂತರ ಬಜೆಟ್ ಅನ್ನು ಫೆಬ್ರವರಿ 01 ರಂದು ಮಂಡಿಸುವ ಸಾಧ್ಯತೆ ಇದೆ. ಬಜೆಟ್ ಅಧಿವೇಶನವು ಜನವರಿ 31 ರಿಂದ ಫೆಬ್ರವರಿ 13 ರ ವರೆಗೆ ನಡೆಯಲಿದೆ.
ಪ್ರತಿ ವರ್ಷ ಫೆಬ್ರವರಿ ಯಲ್ಲಿ ಮುಂದಿನ ವಾರ್ಷಿಕ ಸಾಲಿಗೆ ಪೂರ್ಣ ಬಜೆಟ್ ಮಂಡಿಸಲಾಗುತ್ತದೆ. ಆದರೆ ಈ ಬಾರಿ ಏಪ್ರಿಲ್ ಅಥವಾ ಮೇನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಕಾರಣ ಮಧ್ಯಂತರ ಬಜೆಟ್ ಅನ್ನು ಅವಧಿಗೆ ಕೊಂಚ ಮೊದಲೇ ಮಂಡಿಸಲಾಗುತ್ತಿದೆ.
ಹೊಸ ಸರ್ಕಾರ ಬಂದ ನಂತರ ಮತ್ತೆ ಹೊಸ ಬಜೆಟ್ ಮಂಡಿಸಿ ಅನುಮೋದನೆ ಪಡೆಯಬೇಕಾದ ಕಾರಣ ಕೇಂದ್ರವು ತನ್ನ ಕೊನೆಯ ಬಜೆಟ್ ಅನ್ನು ಮಧ್ಯಂತರ ಬಜೆಟ್ ಆಗಿಯಷ್ಟೆ ಮಂಡಿಸುತ್ತಿದೆ. ಬಹುತೇಕ ಸರ್ಕಾರಗಳು ಇದೇ ಕ್ರಮವನ್ನು ಅನುಸರಿಸುತ್ತಾ ಬಂದಿವೆ.

ಮಧ್ಯಂತರ ಬಜೆಟ್ ಇದಾಗಿದ್ದರೂ ಸಹ ಜನಪ್ರಿಯ ಯೋಜನೆಗಳು ಬಜೆಟ್‌ನಲ್ಲಿ ಹೊರಬೀಳಲಿವೆ ಎಂದು ನಿರೀಕ್ಷಿಸಲಾಗಿದೆ. ಮಧ್ಯಂತರ ಬಜೆಟ್ ಮಂಡಿಸಿದರೂ ಚುನಾವಣೆ ಬಳಿಕ ಬರುವ ಹೊಸ ಸರ್ಕಾರವೇ ಅದಕ್ಕೆ ಅನುಮೋದನೆ ನೀಡಬೇಕಾಗಿರುತ್ತದೆ.












Click it and Unblock the Notifications