ಮತದಾರರ ನಂಬಿಕೆ ಕಳೆದುಕೊಂಡಿದ್ದಾರೆ ಮೋದಿ: ಮನಮೋಹನ್ ಸಿಂಗ್
Recommended Video

ನವದೆಹಲಿ, ಅಕ್ಟೋಬರ್ 27: "ಪ್ರಧಾನಿ ನರೇಂದ್ರ ಮೋದಿಯವರು ತಮಗೆ ಮತ ಹಾಕಿದ ಜನರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ" ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನವದೆಹಲಿಯಲ್ಲಿ ಶುಕ್ರವಾರ ಹೇಳಿದರು.
ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ 'The Paradoxical Prime Minister: Narendra Modi and His India' ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
"ಪ್ರಧಾನಿ ಮೋದಿ ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡುತ್ತಾರೆ. ಆದರೆ ಕೋಮು ಗಲಭೆ, ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯ ಬಗ್ಗೆ ಮಾತ್ರ ಮೌನ ಮುರಿಯುವುದಿಲ್ಲ" ಸಿಂಗ್ ದೂರಿದರು.

'ದೇಶದಲ್ಲಿ ಅರಾಜಕತೆ ತಲೆದೋರಿದೆ. ಸಿಬಿಐ ನಂಥ ಸಂಸ್ಥೆಗಳ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ' ಎಂದು ವಿಷಾದ ವ್ಯಕ್ತಪಡಿಸಿದರು.
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಬಗ್ಗೆಯೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಅಪನಗದೀಕರಣ ಮತ್ತು ಜಿಎಸ್ಟಿ(ಸರಕು ಮತ್ತು ಸೇವಾ ತೆರಿಗೆ) ಗಳು ಅರ್ಥವ್ಯವಸ್ಥೆಯ ದುರಂತ ಎಂದರು.
'ಎಲ್ಲವನ್ನೂ ಮಾಡಿದ್ದೇನೆ ಎಂದು ಪೋಸ್ ಕೊಡುವುದನ್ನು ಬಿಟ್ಟು ಈ ಸರ್ಕಾರ ಇನ್ನೇನನ್ನೂ ಸಾಧಿಸಿಲ್ಲ' ಎಂದು ಸಿಂಗ್ ಹೇಳಿದರು.












Click it and Unblock the Notifications