ಬಜೆಟ್ 2019 ರಲ್ಲಿ ಮಹಿಳೆಯರಿಗೆ ಏನೇನು ದೊರಕಿದೆ, ಏನಿಲ್ಲ?
ನವದೆಹಲಿ, ಜುಲೈ 05: ಬಜೆಟ್ ಮಂಡಿಸಿದ ಪೂರ್ಣ ಪ್ರಮಾಣದ ಮೊದಲ ಮಹಿಳಾ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರಿಗೆ ಹೆಚ್ಚಿನ ಉಡುಗೊರೆ ನೀಡಬಹುದು ಎಂಬ ನಿರೀಕ್ಷೆಗೆ ನೀರು ಬಿದ್ದಿದೆ.
ಮಹಿಳೆಯರಿಗೆ ಅಷ್ಟೇನೂ ಪ್ರಮುಖವಲ್ಲದ, ಪ್ರೋತ್ಸಾಹಕವಲ್ಲದ ನಿರ್ಣಯಗಳು ಬಜೆಟ್‌ನಲ್ಲಿ ಇವೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.
ಪ್ರತಿ ಸ್ವ-ಸಹಾಯ ಗುಂಪುಗಳಲ್ಲಿ ಒಬ್ಬ ಮಹಿಳೆಗೆ ಮುದ್ರಾ ಯೋಜನೆಯಡಿ ಒಂದು ಲಕ್ಷ ರೂಪಾಯಿ ಸಾಲ ನೀಡುವ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಘೋಷಿಸಿದ್ದಾರೆ.

ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಎಲ್ಲ ಜಿಲ್ಲೆಗೂ ವಿಸ್ತರಣೆ ಮಾಡುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ. ಸ್ವ-ಸಹಾಯ ಸಂಘಗಳನ್ನು ಎಲ್ಲ ಜಿಲ್ಲೆಗೆ ವಿಸ್ತರಿಸುವ ನಿರ್ಣಯವನ್ನೂ ಪ್ರಕಟಿಸಲಾಗಿದೆ.
ಪ್ರಮಾಣೀಕೃತ ಜನಧನ್ ಖಾತೆಯುಳ್ಳ ಪ್ರತಿ ಸ್ವಸಹಾಯ ಸಂಘದ ಮಹಿಳೆಯೂ ತಮ್ಮ ಖಾತೆಯಿಂದ ಹೆಚ್ಚುವರಿ 5000 (ಓವರ್‌ಡ್ರಾಫ್ಟ್) ಪಡೆಯಬಹುದಾಗಿದೆ.












Click it and Unblock the Notifications