ದರ ಏರಿಕೆ ಬೇಡ, ಪೆಟ್ರೋಲ್, ಡೀಸೆಲ್‌ನ್ನು ಜಿಎಸ್‌ಟಿಯಡಿ ತನ್ನಿ: ಕಾಂಗ್ರೆಸ್
ನವದೆಹಲಿ, ಜೂನ್ 15: ಪೆಟ್ರೋಲ್, ಡೀಸೆಲ್ ದರ ಏರಿಕೆ ಬೇಡ ಅವುಗಳನ್ನು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯಡಿಗೆ ತನ್ನಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಆಗಸ್ಟ್ 2004ರ ಮಟ್ಟಕ್ಕೆ ಪೆಟ್ರೋಲ್-ಡೀಸೆಲ್-ಅಡುಗೆ ಅನಿಲದ ದರವನ್ನು ಇಳಿಸಬೇಕೆಂದೂ ಸಹ ಕಾಂಗ್ರೆಸ್ ಆಗ್ರಹಿಸಿದೆ.
ಎಐಸಿಸಿ ಸಂವಹನ ವಿಭಾಗದ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿ, ಮೋದಿ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸರ್ಕಾರ 2014ರ ಮೇ ತಿಂಗಳಿನಿಂದ ಅಬಕಾರಿ ಸುಂಕವನ್ನು 12 ಬಾರಿ ಹೆಚ್ಚಿಸಿದೆ. ಇಂಧನವನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವವರೆಗೆ ದರ ಏರಿಕೆಯನ್ನು ನಿಲ್ಲಿಸಬೇಕು.

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯಡಿಗೆ ಇಂಧನಗಳನ್ನೂ ತರುವಂತೆ ಕೇಂದ್ರಕ್ಕೆ ಒತ್ತಾಯಿಸಿರುವ ಕಾಂಗ್ರೆಸ್, ಕಚ್ಚಾ ತೈಲಗಳ ಅಗ್ಗದ ಲಾಭವನ್ನು ಜನರಿಗೆ ತಲುಪಿಸುವಂತೆ ಆಗ್ರಹಿಸಿದೆ.
ಭಾರತಕ್ಕೆ ಲೀಟರ್‌ಗೆ 20 ರೂ.ಗಿಂತ ಕಡಿಮೆ ಬೆಲೆಗೆ ಸಿಗುತ್ತಿರುವ ಪೆಟ್ರೋಲ್ ಅನ್ನು ಲೀಟರ್ ಗೆ 75.78 ರೂ. ಮತ್ತು ಡೀಸೆಲ್ ಅನ್ನು 74.03 ರೂ.ಗೆ ಏಕೆ ಮಾರಾಟ ಮಾಡಲಾಗುತ್ತಿದೆ ಎನ್ನುವುದಕ್ಕೆ ಮೋದಿ ಸರ್ಕಾರ ಉತ್ತರಿಸಲೇಬೇಕು.
ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 40 ಡಾಲರ್‌ಗೆ ಇಳಿದರೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಹೆಚ್ಚಿನ ದರಕ್ಕೆ ಏಕೆ ಮಾರಾಟ ಮಾಡಲಾಗುತ್ತಿದೆ ಎಂದರು.












Click it and Unblock the Notifications