ಬೇಸಿಗೆಯಲ್ಲಿ ಬಹಳ ಹೊತ್ತು ಮೇಕ್‌ಅಪ್‌ ಉಳಿಯಬೇಕಾದರೆ ಈ ಟಿಪ್ಸ್‌ ಅನುಸರಿಸಿ

ಬೇಸಿಗೆಯಲ್ಲಿ ಬಿಸಿಲು ಮತ್ತು ಬೆವರಿನಿಂದಾಗಿ ಚರ್ಮದ ಸಮಸ್ಯೆಗಳು ಎದುರಾಗುತ್ತವೆ. ಇದಲ್ಲದೆ, ಈ ಋತುವಿನಲ್ಲಿ ಅತ್ಯಂತ ಸವಾಲಿನ ವಿಷಯವೆಂದರೆ ಮೇಕಪ್. ಬೇಸಿಗೆಯ ಬಿಸಿಲಿನಲ್ಲಿ ಹೊರಗೆ ಹೋದ ತಕ್ಷಣ, ಮೇಕಪ್ ಬೆವರಿಗೆ ಕರಗಲು ಆರಂಭವಾಗುತ್ತದೆ.ಆಗ ಮುಖದ ಮೇಲೆ ಅಲ್ಲಲ್ಲಿ ತೇಪೆ ಹಾಕಿದಂತೆ ಕಾಣುತ್ತದೆ. ಇದೇ ಕಾರಣದಿಂದಾಗಿ ಅನೇಕರು ಬೇಸಿಗೆಯಲ್ಲಿ ಮೇಕಪ್ ಹಾಕಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಕೆಲವೊಂದು ಹಂತಗಳನ್ನು ಅನುಸರಿಸುವುದರಿಂದ ಬೇಸಿಗೆಯಲ್ಲಿಯೂ ಮೇಕಪ್‌ ಹಾಗೆಯೇ ಉಳಿಯುವಂತೆ ಮಾಡಬಹುದು.

ಮಾಯಿಶ್ಚರೈಸರ್‌ ಬಳಸಿ:

ಚಳಿಗಾಲವಿರಲಿ ಅಥವಾ ಬೇಸಿಗೆಯಾಗಿರಲಿ, ಪ್ರತಿ ಋತುವಿನಲ್ಲಿಯೂ ತ್ವಚೆಯನ್ನು ಮಾಯಿಶ್ಚರ್‌ ಆಗಿ ಉಳಿಸಿಕೊಳ್ಳುವುದು ಅಗತ್ಯ.ಅನೇಕ ಮಂದಿ ಬೇಸಿಗೆಯಲ್ಲಿ ಮಾಯಿಶ್ಚರೈಸರ್ ಇಲ್ಲದೆ ಮೇಕಪ್ ಹಚ್ಚುತ್ತಾರೆ. ಇದರಿಂದಾಗಿ ಅತಿಯಾದ ಬೆವರು ಕಾಣಿಸಿಕೊಳ್ಳುತ್ತದೆ.ಆಗ ಮೇಕಪ್ ಕರಗಲು ಶುರುವಾಗಬಹುದು. ಹೀಗಾಗದಂತೆ ತಡೆಯಲು ಬೇಸಿಗೆಯಲ್ಲಿ ಲೈಟ್‌ ಮಾಯಿಶ್ಚರೈಸರ್ ಬಳಸಿ.

Summer Makeup Tips

ಪ್ರೈಮರ್ ಬಳಸಿ:

ಬೇಸಿಗೆಯಲ್ಲಿ ಮೇಕಪ್ ಹೆಚ್ಚು ಕಾಲ ಉಳಿಯಬೇಕು ಎಂದಾದರೆ ಉತ್ತಮ ಪ್ರೈಮರ್ ಬಳಕೆ ಅತ್ಯಗತ್ಯ. ಇದು ಚರ್ಮದ ಹೆಚ್ಚುವರಿ ಆಯಿಲ್‌ ಅನ್ನು ಸಮತೋಲನಗೊಳಿಸುತ್ತದೆ. ಮೇಕಪ್ ಕರಗದಂತೆ ನೋಡಿಕೊಳ್ಳುತ್ತದೆ.

ಬೇಸಿಗೆಯಲ್ಲಿ ಕೂದಲು ಉದುರುವುದನ್ನು ತಡೆಯಲು ಆರೈಕೆ ಹೀಗಿರಲಿ: ಬಿಳಿ ಕೂದಲ ಸಮಸ್ಯೆಯೂ ನಿವಾರಣೆಯಾಗುವುದು
ಬೇಸಿಗೆಯಲ್ಲಿ ಕೂದಲು ಉದುರುವುದನ್ನು ತಡೆಯಲು ಆರೈಕೆ ಹೀಗಿರಲಿ: ಬಿಳಿ ಕೂದಲ ಸಮಸ್ಯೆಯೂ ನಿವಾರಣೆಯಾಗುವುದು

ಆಯಿಲ್‌ ಫ್ರೀ ಫೌಂಡೇಶನ್:

ಬೇಸಿಗೆಯಲ್ಲಿ ಫೌಂಡೇಶನ್ ವಿಶೇಷವಾಗಿ ಸ್ರವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಲೈಟ್‌ ಆಯಿಲ್‌ ಫ್ರೀ ಫೌಂಡೇಶನ್ ಅನ್ನು ಬಳಸಬೇಕು. ಇನ್ನು ಬೇಸಿಗೆಯಲ್ಲಿ ಫೌಂಡೇಶನ್‌ ಅನ್ನು ದಪ್ಪ ಪದರದಲ್ಲಿ ಹಚ್ಚುವ ಬದಲು ಸಾಧ್ಯವಾದಷ್ಟು ತೆಳುವಾಗಿದ್ದರೆ ಒಳ್ಳೆಯದು.

ವಾಟರ್‌ ಪ್ರೂಫ್ ಕಣ್ಣಿನ ಮೇಕಪ್‌:

ಬೇಸಿಗೆಯಲ್ಲಿ, ವಾಟರ್‌ ಪ್ರೂಫ್ ಕಣ್ಣಿನ ಮೇಕಪ್ ಅನ್ನೇ ಆರಿಸಿಕೊಳ್ಳಬೇಕು. ಕಣ್ಣಿನ ಮೇಕಪ್‌ಗಾಗಿ ಬಳಸುವ ಐಲೈನರ್ ಮತ್ತು ಮಸ್ಕರಾ ಎಲ್ಲವೂ ವಾಟರ್‌ ಪ್ರೂಫ್ ಆಗಿರಲಿ. ಇದು ಐ ಮೇಕಪ್‌ ಹೆಚ್ಚು ಕಾಲ ಉಳಿಯುವಂತೆ ಮಾಡುತ್ತದೆ.

ಬೇಸಿಗೆಯ ಸುಡುವ ಬಿಸಿಲಿಗೆ ಬಾಳೆಹಣ್ಣಿನ ಜ್ಯೂಸ್ ಅಮೃತ: 5 ನಿಮಿಷಗಳಲ್ಲಿ ಮನೆಯಲ್ಲೇ ತಯಾರಿಸಿ
ಬೇಸಿಗೆಯ ಸುಡುವ ಬಿಸಿಲಿಗೆ ಬಾಳೆಹಣ್ಣಿನ ಜ್ಯೂಸ್ ಅಮೃತ: 5 ನಿಮಿಷಗಳಲ್ಲಿ ಮನೆಯಲ್ಲೇ ತಯಾರಿಸಿ

ಮುಖಕ್ಕೆ ಪೌಡರ್ ಹಚ್ಚಿ:

ಬೇಸಿಗೆಯಲ್ಲಿ ಮೇಕಪ್ ಹೆಚ್ಚು ಕಾಲ ಉಳಿಯಬೇಕಾದರೆ ಫೇಸ್ ಪೌಡರ್ ಹಚ್ಚುವುದನ್ನು ಮಾತ್ರ ಮರೆಯಬೇಡಿ. ಇದು ಬೆವರಿನಿಂದಾಗಿ ನಿಮ್ಮ ಮೇಕಪ್ ಬೇಗನೆ ಕರಗದಂತೆ ತಡೆಯುತ್ತದೆ. ಮೇಕಪ್‌ ಲುಕ್‌ ಹೆಚ್ಚು ಕಾಲ ಹಾಗೆಯೇ ಉಳಿಯುತ್ತದೆ.

ಮ್ಯಾಟ್ ಲಿಪ್ಸ್ಟಿಕ್ ಹಚ್ಚಿ:

ಲಿಪ್ಸ್ಟಿಕ್ ಇಲ್ಲದೆ ಮೇಕಪ್ ಯಾವತ್ತಿದ್ದರೂ ಅಪೂರ್ಣ. ಬೇಸಿಗೆಯಲ್ಲಿ, ಲಿಕ್ವಿಡ್ ಲಿಪ್ಸ್ಟಿಕ್ ಬದಲಿಗೆ ಮ್ಯಾಟ್ ಲಿಪ್ಸ್ಟಿಕ್ ಅಥವಾ ಟಿಂಟೆಡ್ ಲಿಪ್ ಬಾಮ್ ಬಳಸಬೇಕು. ಲಿಕ್ವಿಡ್ ಲಿಪ್ಸ್ಟಿಕ್ ಬಳಸುವಾಗ ಬೆವರಿನಿಂದಾಗಿ ಕರಗುವ ಅಪಾಯವಿರುತ್ತದೆ.ಆದರೆ, ಮ್ಯಾಟ್ ಲಿಪ್ಸ್ಟಿಕ್ ಹೆಚ್ಚು ಕಾಲ ಹಾಗೆಯೇ ಇರುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+