ಆರ್‌ಸಿಬಿ ಪಂದ್ಯದ ವೇಳೆ 'ಚೂ ಮಂತರ್' ಮಂತ್ರ ಪಠಿಸಿ ಪೂರನ್‌ ವಿಕೆಟ್‌ ಕೆಡವಿದ ಬಿಗ್‌ಬಾಸ್‌ ಜಾಹ್ನವಿ; ವಿಡಿಯೋ ವೈರಲ್‌

ಬೆಂಗಳೂರು, ಏಪ್ರಿಲ್‌ 16: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್‌ 15ರಂದು ನಡೆದ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವಿನ ರೋಚಕ ಪಂದ್ಯದ ವೇಳೆ ಬಿಗ್‌ಬಾಸ್ ಖ್ಯಾತಿಯ ಸ್ಪರ್ಧಿ ಜಾಹ್ನವಿ ಅವರು ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಅವರು ಲಕ್ನೋ ಸೂಪರ್ ಜೈಂಟ್ಸ್‌ ತಂಡದ ವಿಕೆಟ್‌ ಬೀಳಲಿ ಎಂದು ಮಂತ್ರ ಮಾಡಿದ ಬಳಿಕವೇ ಜೋಶ್‌ ಹ್ಯಾಜಲ್‌ವುಡ್‌ ಎಸೆದ ಓವರ್‌ನಲ್ಲಿ ನಿಕೋಲಸ್‌ ಪೂರನ್‌ ಬೌಲ್ಡ್‌ ಆಗಿ ಪೆವಿಲಿಯನ್‌ನತ್ತ ತೆರಳಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಅಜೇಯ ಓಟವನ್ನು ಮುಂದುವರೆಸಿದೆ. ಆರ್‌ಸಿಬಿ ಪಂದ್ಯದ ವೇಳೆ ಚಿನ್ನಸ್ವಾಮಿ ಮೈದಾನದಲ್ಲಿ ಗಣ್ಯರ ದಂಡೇ ಕಾಣಿಸಿಕೊಳ್ಳುತ್ತಿದೆ. ಇನ್ನೂ ಬುಧವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಬಿಗ್‌ಬಾಸ್ ಕನ್ನಡ ಸೀಸನ್-11ರ ಸ್ಪರ್ಧಿ ಜಾಹ್ನವಿ ಅವರು ಕ್ರೀಡಾಂಗಣದಲ್ಲಿ ಹಾಜರಿದ್ದು ತಂಡಕ್ಕೆ ಬೆಂಬಲ ಸೂಚಿಸಿದರು.

RCB vs LSG match Bigg Boss Jahnavi s Magic Moment Goes Viral After Nicholas Pooran s Dismissal

ಮಂತ್ರ ಪಠಿಸಿದ ಜಾಹ್ನವಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯವು ಕೇವಲ ಆಟಗಾರರ ನಡುವಿನ ಕಾಳಗವಾಗಿ ಉಳಿಯದೆ, ಗ್ಯಾಲರಿಯಲ್ಲಿದ್ದ ಬಿಗ್‌ಬಾಸ್ ಸ್ಪರ್ಧಿ ಜಾಹ್ನವಿ ಅವರ ವಿಚಿತ್ರ ನಡೆಯಿಂದಾಗಿ ಈಗ ಸುದ್ದಿಯಾಗಿದೆ. ಪಂದ್ಯದ ವೇಳೆ, ಎಲ್‌ಎಸ್‌ಜಿ ತಂಡದ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ಕ್ರೀಸ್‌ನಲ್ಲಿದ್ದರು. ಈ ವೇಳೆ ಗ್ಯಾಲರಿಯಲ್ಲಿದ್ದ ಜಾಹ್ನವಿ, ಅವರ ವಿಕೆಟ್ ಬೀಳಲಿ ಎಂದು ಕಣ್ಣು ಮುಚ್ಚಿ ಮಂತ್ರ ಪಠಿಸುತ್ತಿರುವಂತೆ ಆಕ್ಷನ್ ಮಾಡಿದ್ದಾರೆ. ಅಚ್ಚರಿಯೆಂದರೆ, ಅವರು ಮಂತ್ರ ಮಾಡಿದ ಬೆನ್ನಲ್ಲೇ ವೇಗಿ ಜೋಶ್ ಹ್ಯಾಜಲ್‌ವುಡ್ ಎಸೆದ ಚೆಂಡಿಗೆ ನಿಕೋಲಸ್ ಪೂರನ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು.

ಜಾಹ್ನವಿ ವಿಡಿಯೋ ವೈರಲ್‌

ಜಾಹ್ನವಿ ಮಂತ್ರ ಪಠಿಸಿದ ತಕ್ಷಣವೇ ವಿಕೆಟ್ ಬಿದ್ದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, "ಆರ್‌ಸಿಬಿ ಗೆಲುವಿಗೆ ಜಾಹ್ನವಿ ಅವರ ಮಂತ್ರವೂ ಕೆಲಸ ಮಾಡಿದೆ" ಎಂದು ಅಭಿಮಾನಿಗಳು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ತಮ್ಮ ವಿಭಿನ್ನ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದ ಜಾಹ್ನವಿ, ಈಗ ಮೈದಾನದಲ್ಲೂ ತಮ್ಮದೇ ಶೈಲಿಯಲ್ಲಿ ತಂಡವನ್ನು ಹುರಿದುಂಬಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ.

ಮ್ಯಾಚ್ ಎಂಜಾಯ್ ಮಾಡಿದ ಜಾಹ್ನವಿ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್‌ಗಳು ಬೌಂಡರಿ-ಸಿಕ್ಸರ್‌ಗಳ ಮಳೆ ಸುರಿಸುತ್ತಿದ್ದಾಗ, ಗ್ಯಾಲರಿಯಲ್ಲಿದ್ದ ಜಾಹ್ನವಿ ಅವರು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದರು. ಆರ್‌ಸಿಬಿ ಜಯಗಳಿಸುತ್ತಿದ್ದಂತೆ ಅವರ ಖುಷಿ ಇಮ್ಮಡಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಜಾಹ್ನವಿ ಅವರು ಮೈದಾನದಲ್ಲಿ ಪಂದ್ಯ ವೀಕ್ಷಿಸುತ್ತಿರುವ ಮತ್ತು ಆರ್‌ಸಿಬಿ ಪರ ಘೋಷಣೆ ಕೂಗುತ್ತಿರುವ ವೀಡಿಯೋ ಕೂಡ ಹರಿದಾಡುತ್ತಿದೆ. ಬಿಗ್‌ಬಾಸ್ ಮನೆಯಿಂದ ಹೊರಬಂದ ನಂತರ ಅವರು ಸಾರ್ವಜನಿಕವಾಗಿ ಇಷ್ಟೊಂದು ಲವಲವಿಕೆಯಿಂದ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

ಒಂದು ಕಡೆ ಸಿಎಸ್‌ಕೆ ವಿರುದ್ಧದ ಪಂದ್ಯದ ವೇಳೆ ನಡೆದ 'ಡಿಜೆ ಹಾಡಿನ' ವಿವಾದ ಚರ್ಚೆಯಾಗುತ್ತಿದ್ದರೆ, ಇನ್ನೊಂದೆಡೆ ಎಲ್‌ಎಸ್‌ಜಿ ವಿರುದ್ಧದ ಗೆಲುವನ್ನು ಅಭಿಮಾನಿಗಳು ಮತ್ತು ಸ್ಯಾಂಡಲ್‌ವುಡ್ ತಾರೆಯರು ಸಂಭ್ರಮಿಸುತ್ತಿದ್ದಾರೆ. ಅದರಲ್ಲೂ ಜಾಹ್ನವಿ ಅವರು ತಮ್ಮ ಸ್ನೇಹಿತರೊಂದಿಗೆ ಪಂದ್ಯವನ್ನು ವೀಕ್ಷಿಸುತ್ತಾ, ಚಪ್ಪಾಳೆ ತಟ್ಟಿ ತಂಡವನ್ನು ಹುರಿದುಂಬಿಸುತ್ತಿದ್ದ ದೃಶ್ಯಗಳು ವೈರಲ್‌ ಆಗಿವೆ. ಒಟ್ಟಿನಲ್ಲಿ ಆರ್‌ಸಿಬಿ ತಂಡವು ಮೈದಾನದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದರೆ, ಗ್ಯಾಲರಿಯಿಂದ ಜಾಹ್ನವಿ ಅವರಂತಹ ಅಭಿಮಾನಿಗಳು ನೀಡುತ್ತಿರುವ ಇಂತಹ ಸ್ಪೆಷಲ್ ಸಪೋರ್ಟ್ ಅಭಿಮಾನಿಗಳ ಮನಸ್ಸನ್ನ ಗೆದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+