AI, ಡಿಜಿಟಲ್ ಕ್ಷೇತ್ರಗಳಲ್ಲಿ ಅಪಾರ ಉದ್ಯೋಗ ಅವಕಾಶ: ಪ್ರಶರ್ಸ್‌ಗೆ ಲಿಂಕ್ಡ್‌ಇನ್ ವರದಿ ದಾರಿ

ನವದೆಹಲಿ: ದೇಶದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಕಾರಣದಿಂದ ಉದ್ಯೋಗ ಕಡಿತಗೊಳ್ಳುತ್ತಿವೆ. ನೌಕರರು ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಮಧ್ಯೆ ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್‌ ಇನ್ (Linked in) ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಹೊಸ ಪದವೀಧರರಿಗೆ ಅವಕಾಶಗಳು ಎಲ್ಲಿವೆ? ಎಂದು ತಿಳಿಯಲು ಹಾಗೂ ಬದಲಾಗುತ್ತಿರುವ ಉದ್ಯೋಗದ ಸ್ವರೂಪವನ್ನು ಅಥೈಸಿಕೊಳ್ಳಲು ಸಹಾಯವಾಗುವ 'ಗ್ರಾಡ್ಸ್ ಗೈಡ್ 2026' ವರದಿ ಬಿಡುಗಡೆಗೊಳಿಸಿದೆ.

ದೇಶದ ವಿವಿಧ ವಲವಯಗಳಲ್ಲಿ 'ಎಐ ಸ್ಪೆಷಲಿಸ್ಟ್, ಜನರೇಟಿವ್ ಎಐ ಇಂಜಿನಿಯರ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್' ಹುದ್ದೆಗಳಿಗೆ ಯುವ ಪ್ರತಿಭೆಗಳು ಬೇಕಾಗಿದೆ. ಈ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು 'ಗ್ರಾಡ್ಸ್ ಗೈಡ್ 2026' ವರದಿಯಲ್ಲಿ ಅಂಕಿ ಅಂಶ ಕೊಡಲಾಗಿದೆ.

LinkedIn Grads Guide 2026

ವಿಫುಲ ಉದ್ಯೋಗ ಅವಕಾಶಗಳು ಇಲ್ಲಿವೆ

ಉದ್ಯಮ ಮತ್ತು ಜನಕೇಂದ್ರಿತ ವಲಯಗಳಲ್ಲಿ ಹೆಚ್ಚುತ್ತಿರುವ ಅವಕಾಶಗಳು ನವ ವೃತ್ತಿಪರರಿಗೆ ಕೇವಲ ತಂತ್ರಜ್ಞಾನ ಮಾತ್ರವಲ್ಲದೆ, ಉದ್ಯಮ ಅಭಿವೃದ್ಧಿ ಮತ್ತು ಜನಕೇಂದ್ರಿತ ಕೈಗಾರಿಕೆಗಳಲ್ಲೂ ಅವಕಾಶಗಳು ಲಭ್ಯವಾಗುತ್ತಿವೆ. ಶಿಕ್ಷಣ, ಸರ್ಕಾರಿ ಆಡಳಿತ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಹಾಗೂ ಎನರ್ಜಿ ಟೆಕ್ನಾಲಜಿ ಜೊತೆಗೆ 'ಯುಟಿಲಿಟಿಸ್' ಕ್ಷೇತ್ರವು ಹೊಸದಾಗಿ ವೃತ್ತಿಜೀವನ ಆರಂಭಿಸುವವರಿಗೆ ವೇಗವಾಗಿ ಬೆಳೆಯುತ್ತಿರುವ ವಿಭಾಗಗಳಲ್ಲಿ ಒಂದಾಗಿದೆ.

ವಾಯುಪಡೆಯ ತೇಜಸ್ ಎಂಜಿನ್‌ಗಳಿಗೆ ಭಾರತದಲ್ಲೇ ಡಿಪೋ: IAF ಜೊತೆ ಜಿಇ ಒಪ್ಪಂದ
ವಾಯುಪಡೆಯ ತೇಜಸ್ ಎಂಜಿನ್‌ಗಳಿಗೆ ಭಾರತದಲ್ಲೇ ಡಿಪೋ: IAF ಜೊತೆ ಜಿಇ ಒಪ್ಪಂದ

ಮಾನವ ಸಂಪನ್ಮೂಲ, ಕನ್ಸಲ್ಟಿಂಗ್, ಮಾಹಿತಿ ತಂತ್ರಜ್ಞಾನ (ಐಟಿ), ಮಾರ್ಕೆಟಿಂಗ್, ಪ್ರೋಗ್ರಾಂ ಮತ್ತು ಪ್ರಾಜೆಕ್ಟ್ ಮ್ಯಾನೇಜ್‌ ಮೆಂಟ್ ಹಾಗೂ ಬಿಸಿನೆಸ್ ಡೆವಲಪ್‌ ಮೆಂಟ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಆರಂಭಿಕ ಹಂತದ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ.

ಈ ಕುರಿತು ಲಿಂಕ್ಡ್‌ ಇನ್‌ ನ ಕರಿಯರ್ ಎಕ್ಸ್ ಪರ್ಟ್ ನಿರಾಜಿತಾ ಬ್ಯಾನರ್ಜಿ ಅವರು, "ತಮ್ಮ ವೃತ್ತಿಜೀವನ ಆರಂಭಿಸುತ್ತಿರುವ ಯುವ ವೃತ್ತಿಪರರಿಗೆ ನನ್ನ ಅತ್ಯುತ್ತಮ ಸಲಹೆ ಎಂದರೆ, ಅಸಾಂಪ್ರದಾಯಿಕ ಹಾದಿಗಳು ಮತ್ತು ಅನಿರೀಕ್ಷಿತ ಸ್ಥಳಗಳಲ್ಲಿ ಸಿಗುವ ಉದ್ಯೋಗ ಅವಕಾಶಗಳಿಗೆ ಮುಕ್ತವಾಗಿರಿ. ಸರಿಯಾದ ಅವಕಾಶವು ನೀವು ನಿರೀಕ್ಷಿಸಿದ ಕಡೆಯೇ ಇರಬೇಕೆಂದಿಲ್ಲ. ಅದು ಬೇರೆ ಯಾವುದೋ ಉದ್ಯಮದಲ್ಲಿರಬಹುದು, ಹೊಸ ನಗರದಲ್ಲಿರಬಹುದು ಅಥವಾ ನೀವು ಇದುವರೆಗೆ ಪರಿಗಣಿಸದ ಹುದ್ದೆಯೂ ಆಗಿರಬಹುದು.

ಕೌಶಲಗಳು ಒಂದು ವಲಯದಿಂದ ಇನ್ನೊಂದು ವಲಯಕ್ಕೂ ಹೊಂದಿಕೊಳ್ಳಬಲ್ಲ ಇಂದಿನ ಕ್ರಿಯಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ, ವೃತ್ತಿಪರರು ಬಹುಮುಖ ಕೌಶಲಗಳನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಆರಂಭಿಕ ವೃ ತ್ತಿಜೀವನವು ವಿವಿಧ ಹುದ್ದೆಗಳು ಮತ್ತು ಉದ್ಯಮಗಳ ಅನುಭವದಿಂದ ಹೆಚ್ಚು ಉತ್ತಮವಾಗಿ ರೂಪುಗೊಳ್ಳುತ್ತವೆ. ಆದರೆ ಮೊದಲ ಉದ್ಯೋಗದ ಹಾದಿಯು ಯಾವಾಗಲೂ ನೇರವಾಗಿರುವುದಿಲ್ಲ. ಹಾಗಾಗಿ ವೈವಿಧ್ಯಮಯ ಅನುಭವಗಳಿಗೆ ನೀವು ಮುಕ್ತವಾಗಿರಬೇಕು. ಆಗ ನಿಮ್ಮ ವೃತ್ತಿಜೀವನಕ್ಕೆ ವೇಗ ಗಿಸುತ್ತದೆ. ಉದ್ಯೋಗ ಕಂಡುಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಲಿಂಕ್ಡ್‌ ಇನ್ 'ಗ್ರಾಡ್ಸ್ ಗೈಡ್ 2026'ರ ಪ್ರಕಾರ ಪದವೀಧರರಿಗಾಗಿ ಈ ವರ್ಷದ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಉದ್ಯೋಗಗಳು, ವಲಯಗಳ ಮಾಹಿತಿ, ಪಟ್ಟಿ ನೀಡಲಾಗಿದೆ.

ವೇಗವಾಗಿ ಬೆಳೆಯುತ್ತಿರುವ ಉದ್ಯೋಗ (ವಲಯಗಳು)

* ಎಐ ಸ್ಪೆಷಲಿಸ್ಟ್ (ಯುಟಿಲಿಟಿಸ್)

* ಜನರೇಟಿವ್ ಎಐ ಇಂಜಿನಿಯರ್ (ಶಿಕ್ಷಣ ವಲಯ-ಕನ್ಸಲ್ಟಿಂಗ್)

* ಡಿಜಿಟಲ್ ಕಂಟೆಂಟ್ ಕ್ರಿಯೇಟರ್ (ಸರ್ಕಾರಿ ಆಡಳಿತ-ಐಟಿ)

* ಬ್ರ್ಯಾಂಡ್ ರೆಪ್ರೆಸೆಂಟೇಟಿವ್ ಟ್ರಾನ್ಸ್ ಪೋರ್ಟೇಷನ್ ಮತ್ತು ಲಾಜಿಸ್ಟಿಕ್ಸ್ ಮಾರ್ಕೆಟಿಂಗ್

* ಐಟಿ ಸ್ಪೆಷಲಿಸ್ಟ್ ಎನರ್ಜಿ ಟೆಕ್ನಾಲಜಿ ಪ್ರೋಗ್ರಾಮ್ ಮತ್ತು ಪ್ರೊಜೆಕ್ಟ್ ಮ್ಯಾನೇಜ್ ಮೆಂಟ್

* ಮೀಡಿಯಾ ಪ್ರೊಡಕ್ಷನ್ ಕ್ರೂ

* ಬಿಡ್ ಮ್ಯಾನೇಜರ್

* ಕೆಟಗರಿ ಮ್ಯಾನೇಜರ್

* ಟೆಕ್ನಿಕಲ್ ಸಪೋರ್ಟ್ ಕನ್ಸಲ್ಟೆಂಟ್

* ಸ್ಟೋರೇಜ್ ಇಂಜಿನಿಯರ್

ಸಣ್ಣ ಸಂಸ್ಥೆಗಳು ಮತ್ತು ಮಹಾನಗರವಲ್ಲದ ನಗರಗಳಲ್ಲಿ ಹೆಚ್ಚುತ್ತಿರುವ ನೇಮಕಾತಿ

ಸಣ್ಣ ಕಂಪನಿಗಳು ಉದ್ಯೋಗ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವೃತ್ತಿಜೀವನ ಆರಂಭಿಸುವವರು ಕೇವಲ ದೊಡ್ಡ ಕಂಪನಿಗಳ ಬಗ್ಗೆ ಮಾತ್ರ ಯೋಚಿಸದೆ ಸಣ್ಣ ಸಂಸ್ಥೆಗಳಲ್ಲಿನ ಅವಕಾಶಗಳನ್ನು ಪರಿಗಣಿಸುವುದು ಅನಿವಾರ್ಯ ಎಂದು ಅವರು ಸಲಹೆ ನೀಡಿದ್ದರೆ.

Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್‌ಗೆ‌ 38,000 ರೂ.
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್‌ಗೆ‌ 38,000 ರೂ.

ಸಣ್ಣ ಸಂಸ್ಥೆಗಳಲ್ಲಿನ ಉದ್ಯೋಗ ಶೇ.64 ಏರಿಕೆ

ಪದವೀಧರರಿಗೆ 1 ರಿಂದ 10 ಉದ್ಯೋಗಿಗಳಿರುವ ಸಣ್ಣ ಸಂಸ್ಥೆಗಳಲ್ಲಿನ ನೇಮಕಾತಿಯು 2023 ಮತ್ತು 2025ರ ನಡುವೆ ಶೇ.64 ರಷ್ಟು ಹೆಚ್ಚಾಗಿದೆ. ಇನ್ನು ಒಟ್ಟಾರೆ ಆರಂಭಿಕ ಹಂತದ ಉದ್ಯೋಗಿಗಳನ್ನು ಪರಿಗಣಿಸಿದರೆ, ಈ ಬೆಳವಣಿಗೆಯು ಶೇ.168 ರಷ್ಟಿದೆ. ಉದ್ಯೋಗ ಅವಕಾಶಗಳು ಈಗ ಭೌಗೋಳಿಕವಾಗಿ ಎಲ್ಲಾ ಕಡೆ ವ್ಯಾಪಿಸುತ್ತಿವೆ.

ಮಹಾನಗರಗಳ ಜೊತೆಗೆ ವಿಜಯವಾಡ, ಭೋಪಾಲ್, ಜೈಪುರ, ಇಂದೋರ್, ಗ್ವಾಲಿಯರ್ ಮತ್ತು ವಡೋದರಾ ಅಂತಹ ನಗರಗಳು ಈಗ ಭಾರತದ ಪ್ರಮುಖ ನೇಮಕಾತಿ ಕೇಂದ್ರಗಳಾಗಿ ಹೊರ ಹೊಮ್ಮುತ್ತಿವೆ. ಇದು ಯುವಕರಿಗೆ ಸಾಂಪ್ರದಾಯಿಕ ಉದ್ಯೋಗ ಕೇಂದ್ರಗಳ ಹೊರತಾಗಿ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿದೆ.

ಇಂಟರ್ನ್‌ ಶಿಪ್ ಮೂಲಕ ವೃತ್ತಿಜೀವನದತ್ತ ಹೆಜ್ಜೆ

2020-2022ಕ್ಕೆ ಹೋಲಿಸಿದರೆ 2023-2025ರ ಅವಧಿಯಲ್ಲಿ ಆರಂಭಿಕ ಹಂತದ ನೇಮಕಾತಿಗಳಲ್ಲಿ ಇಂಟರ್ನ್‌ ಶಿಪ್ ಪೂರ್ಣಗೊಳಿಸಿದವರ ಪ್ರಮಾಣ ಅಧಿಕ. ಕಾನೂನು, ಪ್ರಾಡಕ್ಟ್ ಮ್ಯಾನೇಜ್‌ ಮೆಂಟ್, ಕನ್ಸಲ್ಟಿಂಗ್, ಇಂಜಿನಿಯರಿಂಗ್ ಮತ್ತು ಬಿಸಿನೆಸ್ ಡೆವಲಪ್‌ ಮೆಂಟ್ ವಿಭಾಗಗಳಲ್ಲಿ ಇದು ಗಣನೀಯವಾಗಿ ಕಂಡು ಬಂದಿದೆ ಎಂದು ಲಿಂಕ್ಡ್‌ ಇನ್ ತಿಳಿಸಿದೆ.

ಈಗಷ್ಟೇ ವೃತ್ತಿಜೀವನ ಆರಂಭಿಸುತ್ತಿದ್ದರೆ, ಉದ್ಯೋಗ ಮಾರುಕಟ್ಟೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಲಿಂಕ್ಡ್‌ ಇನ್ ವೃತ್ತಿಜೀವನ ತಜ್ಞರಾದ ನಿರಾಜಿತಾ ಬ್ಯಾನರ್ಜಿ ಅವರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ.

* ಉದ್ಯೋಗ ಮಾಹಿತಿ ನೀಡುವ ವೇದಿಕೆಗಳನ್ನು ನಿರ್ಲಕ್ಷಿಸಬೇಡಿ

* ಹೆಚ್ಚು ಫಲಿತಾಂಶ ನೀಡುವ ಕಡೆ ಗಮನಹರಿಸಬೇಕು.

* ಅನುಭವ ಇಲ್ಲದಿದ್ದರೆ, ಕೌಶಲ್ಯ ಪ್ರದರ್ಶಿಶಬೇಕು

* ಸಂಘಟಿತರಾಗಿರುವ ಜೊತೆಗೆ ಸದಾ ಉತ್ಸಾಹದಿಂದ ಇರಬೇಕು

* ಅನುಭವಿಗಳನ್ನು ಅನುಸರಿಸಿ, ಅವರೊಂದಿಗೆ ಸಂಪರ್ಕದಲ್ಲಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+