Tour Package: ರಾಯರ ಭಕ್ತರಿಗೆ ಶುಭ ಸುದ್ದಿ, ಬೆಂಗಳೂರು-ಮಂತ್ರಾಲಯ ಟೂರ್ ಪ್ಯಾಕೇಜ್, ಬುಕಿಂಗ್ ಹೇಗೆ?
ಸಾಕಷ್ಟು ಪ್ರಸಿದ್ಧ ಇರುವ ಮತ್ತು ಕೋಟ್ಯಾಂತರ ಭಕ್ತರ ಆರಾಧ್ಯ ಧೈವವಾದ ಶ್ರೀ ರಾಘವೇಂದ್ರ ಸ್ವಾಮಿಗಳ ದಿವ್ಯ ಸ್ಥಳ ಶ್ರೀ ಮಂತ್ರಾಲಯಕ್ಕೆ ತೆರಳುವವರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಕರ್ನಾಟಕದ ರಾಯಚೂರು ಜಿಲ್ಲೆಗೆ ಹತ್ತಿರುವ ಈ ಸ್ಥಳ ಮೂಲತಃ ಆಂಧ್ರಪ್ರದೇಶದ ಕರ್ನೂಲ ಜಿಲ್ಲೆಯ ವ್ಯಾಪ್ತಿಗೆ ಸೇರುತ್ತದೆ. ಇಲ್ಲಿಗೆ ಕರ್ನಾಟಕದಿಂದ ತೆರಳುವ ಜನರೇ ಹೆಚ್ಚು. ಅದರಲ್ಲೂ ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗದಿಂದ ಮಂತ್ರಾಲಯ ತೆರಳುವುದು ಇದೀಗ ಮತ್ತಷ್ಟು ಸುಲಭವಾಗಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ (KSTDC) ವತಿಯಿಂದ ರಾಜಧಾನಿ ಬೆಂಗಳೂರಿನಿಂದ ವಿಶೇಷ ಟೂರ್ ಪ್ಯಾಕೇಜ್ ಘೊಷಿಸಲಾಗಿದೆ. ನಗರದ ಯಶವಂತಪುರದಿಂದ ನೇರವಾಗಿ ಎಸಿ ಡಿಲೆಕ್ಸ್ ಬಸ್ ನಲ್ಲಿ ಪ್ರಯಾಣಿಸಬಹುದಾಗಿದೆ. ಟಿಕೆಟ್ ಶುಲ್ಕ, ದೂರು, ಮಾರ್ಗ, ಸಮಯ ಸೇರಿದಂತೆ ಬೆಂಗಳೂರು-ಮಂತ್ರಾಲಯ (KSTDC Bengaluru-Mantralaya Tour Package) ಟೂರ್ ಪ್ಯಾಕೇಜ್ ಸಂಪೂರ್ಣ ವಿವರ ಇಲ್ಲಿದೆ.

ಈಗಾಗಲೇ ಮಂತ್ರಾಲಯಕ್ಕೆ ಭೇಟಿ ನೀಡಿ ಪುನಃ ಮತ್ತೆ ಹೋಗಬೇಕೆನ್ನುವವರು ಮತ್ತು ಹೊಸದಾಗಿ ಭೇಟಿ ನೀಡುವವರಿಗೆ ಕೈಗೆಟುಕುವೆ ಬೆಲೆಗೆ ನೇರ ಸಾರಿಗೆ ಸೇವೆಯನ್ನು ಪ್ರವಾಸೋದ್ಯಮ ಇಲಾಖೆ ನೀಡಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಉತ್ತೇಜಿಸುವ ನಿಟ್ಟಿನಲ್ಲಿ ಈ ಪ್ಯಾಕೇಜ್ ಆರಂಭಿಸಿದ್ದು, ಇದು ಬಹುತೇಕ ವರ್ಷದ ಎಲ್ಲ ದಿನಗಳಲ್ಲಿ ಲಭ್ಯವಿರುವ ವಿಶೇಷ ಟೂರ್ ಪ್ಯಾಕೇಜ್ ಆಗಿದೆ.
ಬಸ್ ಹೊರಡುವ ಸಮಯ, ಸ್ಥಳ
ಒಟ್ಟು 2 ದಿನದ ಟೂರ್ ಪ್ಯಾಕೇಜ್ ಇದಾಗಿದೆ. ಬೆಂಗಳೂರಿನ ಯಶವಂತಪುರ ಇಲಾಖೆ ಕಚೇರಿ, ಬಿಎಂಟಿಸಿ ಬಸ್ ನಿಲ್ದಾಣದಿಂದ ನೇರ ಮಂತ್ರಾಲಯಕ್ಕೆ ಭಕ್ತರನ್ನು ಕರೆದೊಯ್ಯಲಾಗುತ್ತದೆ. ಸುವ್ಯವಸ್ಥಿತವಾದ ಡಿಲೆಕ್ಸ್ ಬಸ್ ಪ್ರತಿ ಬುಧವಾರ ಮತ್ತು ಶುಕ್ರವಾರ ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಹೊರಟು ಮಾರನೇ ದಿನ ಬೆಳಗ್ಗೆ ಮಂತ್ರಾಲಯವನ್ನು ತಲುಪುತ್ತದೆ.
ರಾಯರ ದರ್ಶನ ಯಾವಾಗ?, ಟೂರ್ ಸಮಯ ಹೀಗಿದೆ?
* ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ನಿರ್ಗಮನ
* ಮಾರನೇ ದಿನ ಬೆಳಗ್ಗೆ 4.30ಕ್ಕೆ ಮಂತ್ರಾಲಯ ತಲುಪುವುದು
* ಬೆಳಗ್ಗೆ 6 ಗಂಟೆ ಒಳಗೆ ಪ್ರಯಾಣಿಕರಿಗೆ ಫ್ರೆಶ್ ಅಪ್ ಆಗಲು ಅವಕಾಶ
* 6.30 ರಿಂದ 10ಗಂಟೆ ಹೊತ್ತಿಗೆ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ
* ಬೆಳಗ್ಗೆ 11 ರಿಂದ 12 ಗಂಟೆವರೆಗೆ ಪಂಚಮುಖಿ ಆಂಜನೇಯ ದೇವರ ದರ್ಶನ
* ದರ್ಶನ ಬಳಿಕ ಮಧ್ಯಾಹ್ನ 1 ರಿಂದ 2 ಗಂಟೆ ವೇಳೆಗೆ ಇಲಾಖೆಯಿಂದಲೇ ಊಟದ ವ್ಯವಸ್ಥೆ
* ರಾತ್ರಿ 09 ಗಂಟೆ ಸುಮಾರಿಗೆ ಮಂತ್ರಾಲಯದಿಂದ ಹೊರಟು ಬೆಂಗಳೂರಿಗೆ ಬರುತ್ತದೆ.
ಟಿಕೆಟ್ ದರವೆಷ್ಟು?
ಬೆಂಗಳೂರು-ಮಂತ್ರಾಲಯ ಪ್ರತಿ ಪ್ಯಾಕೇಜ್ ಬುಕ್ ಮಾಡಲು ಒಬ್ಬರಿಗೆ ತಲಾ 2780 ರೂಪಾಯಿ ದರ ನಿಗದಿಪಡಿಸಲಾಗಿದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
ಟಿಕೆಟ್ ಬುಕ್ ಮಾಡುವ ಭಕ್ತರು, ಪ್ರವಾಸಿಗರು ಇಲ್ಲಿ ನೀಡಲಾಗಿರುವ ಅಧಿಕೃತ ಜಾಲತಾಣ https://kstdc.co/tour_packages/mantralaya-tour/ ಕ್ಕೆ ಭೇಟಿ ನೀಡಿ ಮಾಹಿತಿ ತಿಳಿದು ಬುಕ್ ಮಾಡಬಹುದು.
ಕರೆ ಮಾಡಿ ಟಿಕೆಟ್ ಬುಕ್ ಮಾಡಿ
ಹೆಚ್ಚಿನ ಮಾಹಿತಿಗೆ ನೀವು 080 43344334 ಇಲ್ಲವೇ ಮೊಬೈಲ್ ಸಂಖ್ಯೆ 8970650070 ಗೆ ಕರೆ ಮಾಡಬಹುದು. ಕರೆ ಮಾಡಿ ಸಹ ನೀವು ಟಿಕೆಟ್ ಬುಕ್ ಮಾಡಲು ಅವಕಾಶ ಇದೆ.
ಈ ಪ್ಯಾಕೇಜ್ ಬುಕ್ ಮಾಡದೇ ಇತರ ಬಸ್‌ಗಳಿಗೆ ತೆರಳಿದರೆ ಹೆಚ್ಚಿನ ಸಮಯ ಬೇಕಾಗಬಹುದು. ಫ್ರೆಶ್ ಅಪ್ ಆಗಲು, ಊಟ ಇನ್ನಿತರ ವ್ಯವಸ್ಥೆ ಸರಿ ಇಲ್ಲದೇ ತೊಂದರೆ ಎದುರಿಸಬಹುದು. ಪ್ರಯಾಣಿಕರಿಗೆ ಇದ್ಯಾವ ತೊಂದರೆ ಆಗದಂತೆ ಆರಾಮದಾಯಕ ಪ್ರಯಾಣದೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಬೆಕೆನ್ನುವವರಿಗೆ ಇದೊಂದು ಉತ್ತಮ ಪ್ಯಾಕೇಜ್ ಎಂದು ಕೆಎಸ್‌ಡಿಟಿಸಿ ತಿಳಿಸಿದೆ.














Click it and Unblock the Notifications