ದೆಹಲಿಯ ಹೋಟೆಲ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತ ದೇಹ ಪತ್ತೆ
ನವದೆಹಲಿ, ಜನವರಿ 25: ದೆಹಲಿಯ ಹೋಟೆಲ್‌ವೊಂದರ ರೂಮಿನಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.
ಶುಕ್ರವಾರ ಸಂಜೆ 4.10ರ ವೇಳೆಗೆ ಘಟನೆ ಬಗ್ಗೆ ಮಾಹಿತಿ ಸ್ವೀಕರಿಸಿದೆವು. ಬಳಿಕ ಹೋಟೆಲ್ಗೆ ಧಾವಿಸಿದಾಗ ಕೊಠಡಿಯಿಂದ ದುರ್ವಾಸನೆ ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಪೊಲೀಸರು ಹಾಗೂ ಹೋಟೆಲ್ ಸಿಬ್ಬಂದಿ ಸಹಾಯದಿಂದ ರೂಮ್ ಬಾಗಿಲು ತೆಗೆದಾಗ ಕರಣ್ ದೇಹ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಮೃತನನ್ನು ಮಾಳವೀಯ ನಗರದ ನಿವಾಸಿ ಕರಣ್ ಚಂದ್ರ ಎಂದು ಗುರುತಿಸಲಾಗಿದೆ.

ಮೃತ ವ್ಯಕ್ತಿ ಜನವರಿ 19ರಿಂದ ಫೈವ್ ಸ್ಟಾರ್ ಹೋಟೆಲ್ನಲ್ಲೇ ಇದ್ದ. ಅಷ್ಟೇ ಅಲ್ಲದೆ ಯಾರು ತೊಂದರೆ ಕೊಡಬೇಡಿ ಎಂದು ರೂಮಿನ ಬಾಗಿಲಿಗೆ ಅಂಟಿಸಿದ್ದ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಮ ಮನೋಹರ್ ಲೋಹಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.












Click it and Unblock the Notifications