ಐದು ರಾಜ್ಯಗಳಲ್ಲಿ ಮುಂದೇನು ಎಂಬ ಚರ್ಚೆಯಲ್ಲಿ ತೊಡಗಿದ ಅಮಿತ್ ಶಾ

Recommended Video

      ಐದು ರಾಜ್ಯಗಳಲ್ಲಿ ಮುಂದೇನು ಎಂಬ ಚರ್ಚೆಯಲ್ಲಿ ತೊಡಗಿದ ಅಮಿತ್ ಶಾ | Oneindia Kannada

      ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ವಿಧಾನಸಭಾ ಚುನಾವಣೆ ನಡೆದ ಐದು ರಾಜ್ಯಗಳಲ್ಲಿನ ಪಕ್ಷದ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದಾರೆ. ಚುನಾವಣೋತ್ತರ ಸಮೀಕ್ಷೆಯು ಬಿಜೆಪಿಗೆ ಪೂರಕವಾಗಿಲ್ಲ. ಆ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಮಹತ್ವದ ಜವಾಬ್ದಾರಿ ವಹಿಸಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದಾರೆ.

      ಆದರೆ, ಈಗಲೂ ಬಿಜೆಪಿಯು ಈ ರಾಜ್ಯಗಳಲ್ಲಿ ಉತ್ತಮ ಸಾಧನೆ ಮಾಡಲಿದೆ ಎಂಬ ನಂಬಿಕೆಯಲ್ಲೇ ಇದೆ. ಸಮೀಕ್ಷೆಗೆ ಹತ್ತಿರಲ್ಲೇ ಫಲಿತಾಂಶ ಬಂದರೂ ಬಹುತೇಕ ಕಡೆ ಬಿಜೆಪಿಯೇ ಸರಕಾರ ರಚನೆಗೆ ಹತ್ತಿರ ಇರುತ್ತದೆ ಎಂಬ ಆತ್ಮವಿಶ್ವಾಸದಲ್ಲಿದೆ.

      ಇನ್ನು ಸಭೆಯಲ್ಲಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನಾ) ರಾಮ್ ಲಾಲ್ ಮತ್ತು ಇತರ ಪ್ರಧಾನ ಕಾರ್ಯದರ್ಶಿಗಳಾದ ಭೂಪೇಂದ್ರ ಯಾದವ್, ಅರುಣ್ ಸಿಂಗ್ ಹಾಗೂ ಅರುಣ್ ಜೈನ್ ಪ್ರತಿ ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ.

      Amit Shah

      ಇದೇ ವೇಳೆ ಆಯಾ ರಾಜ್ಯಗಳಲ್ಲಿ ಸರಕಾರ ರಚನೆಗೆ ಕೇಸರಿ ಪಕ್ಷಕ್ಕೆ ಅಲ್ಪ ಮತದ ಅಗತ್ಯ ಬಂದಲ್ಲಿ ಯಾರ ಜತೆಗೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಸಾಧ್ಯತೆಯನ್ನು ಕೂಡ ಚರ್ಚಿಸಲಾಗಿದೆ. ಮಾಧ್ಯಮಗಳ ಸಮೀಕ್ಷೆಗಳ ಪ್ರಕಾರ ಐದೂ ರಾಜ್ಯಗಳಲ್ಲಿ ಬಿಜೆಪಿಗೆ ಯಾವುದೇ ಅನುಕೂಲ ಸ್ಥಿತಿ ಇಲ್ಲದ ಹಿನ್ನೆಲೆಯಲ್ಲಿ ಅಮಿತ್ ಶಾ ಈ ಸಭೆಯನ್ನು ಕರೆದು ಚರ್ಚೆ ನಡೆಸಿದ್ದಾರೆ.

      ತಳ ಮಟ್ಟದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ನೆರವಿನೊಂದಿಗೆ ಐದು ರಾಜ್ಯಗಳ ಬೂತ್ ಮಟ್ಟದ ನಿರ್ವಹಣೆ ಮಾಡಿದ್ದವರು ರಾಮ್ ಲಾಲ್. ಇನ್ನು ಪಕ್ಷದ ಅಧ್ಯಕ್ಷರ ಚುನಾವನೆ ಸಭೆಗಳ ಉಸ್ತುವಾರಿಯನ್ನು ನಿರ್ವಹಿಸಿದವರು ಅನಿಲ್ ಜೈನ್. ಭೂಪೇಂದ್ರ ಯಾದವ್ ಅವರು ಅಮಿತ್ ಶಾ ವಿಶ್ವಾಸಿಗಳಲ್ಲಿ ಒಬ್ಬರು. ಆದ್ದರಿಂದ ಸಭೆಯಲ್ಲಿ ಹಾಜರಿದ್ದರು.

      ಈ ಚುನಾವಣೆಯಲ್ಲಿ ಬಿಜೆಪಿಗೆ ಇಂಥ ಸ್ಥಿತಿ ಬರಲು ಕಾರಣ ಏನು ಎಂದು ಕ್ಷೇತ್ರವಾರು ಮಾಹಿತಿಯನ್ನು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಸಮೀಕ್ಷೆಗಳಲ್ಲಿ ಬಿಜೆಪಿಗೆ ಪ್ರತಿಕೂಲವಾದ ಪರಿಸ್ಥಿತಿ ಉದ್ಭವ ಆಗಬಹುದು ಎಂದು ಬಂದಿದ್ದರೂ ಸರಕಾರ ರಚನೆ ಬಗ್ಗೆ ಅಮಿತ್ ಶಾ ಅವರು ಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+