ಪ್ರಮಾಣವಚನ ಸ್ವೀಕರಿಸಲು ಸೈಕಲ್ ನಲ್ಲಿ ಬಂದ ಸಚಿವ ಸಚಿವ
ನವದೆಹಲಿ, ಮೇ 31: ಹಲವು ಅಚ್ಚರಿಗಳಿಗೆ ಕಾರಣವಾದ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಮನ್ಶುಖ್ ಲಾಲ್ ಮಾಂಡವೀಯ ಅವರು ಪ್ರಮಾಣ ವಚನಕ್ಕೆ ಸೈಕಲ್ ಏರಿ ಬರುವ ಮೂಲಕ ಗಮನ ಸೆಳೆದರು.
ಮೇ 30 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಿದ ಗುಜರಾತ್ ರಾಜ್ಯ ಸಭಾ ಸದಸ್ಯ ಮನ್ಶುಖ್ ಲಾಲ್ ಮಾಂಡವೀಯ ಅವರನ್ನು ಬಂದರು, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವರನ್ನಾಗಿ ನೇಮಿಸಲಾಗಿದೆ.
ಪ್ರಮಾಣ ವಚನಕ್ಕೆ ಸೈಕಲ್ ನಲ್ಲಿ ಬಂದಿದ್ದ ಅವರು, "ಸೈಕಲ್ ಪ್ರಯಾಣ ನನಗೆ ಫ್ಯಾಶನ್ ಅಲ್ಲ, ಅದು ಪ್ಯಾಶನ್. ನಾನು ಯಾವಾಗಲೂ ಪಾರ್ಲಿಮೆಂಟಿಗೆ ಸೈಕಲ್ ನಲ್ಲೇ ಹೋಗುತ್ತಿದ್ದೆ" ಎಂದು ಪತ್ರಕರ್ತರಿಗೆ ಅವರು ಹೇಳಿದರು.

"ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ನನ್ನ ಮೇಲೆ ಮತ್ತೊಮ್ಮೆ ನಂಬಿಕೆ ಇಟ್ಟು ಈ ಸ್ಥಾನವನ್ನು ನನಗೆ ನೀಡಿದ್ದಾರೆ. ನಾನು ಅವರಿಗೆ ಚಿರಋಣಿ" ಎಂದು ಮಾಂಡವೀಯ ಸಂತಸ ವ್ಯಕ್ತಪಡಿಸಿದರು.
"ಸೈಕಲ್ ಪರಿಸರ ಸ್ನೇಹಿ. ಸೈಕಲ್ ಚಲಾಯಿಸುವುದು ಆರೋಗ್ಯಕ್ಕೂ ಒಳ್ಳೆಯದು" ಎಂದು ಮಾಂಡವೀಯ ಹೇಳಿದರು. ಅವರು ಕಳೆದ ಐದು ವರ್ಷಗಳಿಂದಲೂ ಸಂಸತ್ತಿಗೆ ಸೈಕಲ್ ನಲ್ಲಿಯೇ ಬರುತ್ತಿದ್ದಾರೆ!












Click it and Unblock the Notifications