ಗುಜರಾತ್‌ಗೆ ಗುಡ್‌ಬೈ ಹೇಳಿದ ಬಿಜೆಪಿ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ

ನವದೆಹಲಿ, ಫೆಬ್ರವರಿ 10: ಗುಜರಾತ್‌ನೊಂದಿಗಿನ ಮೂರು ದಶಕಗಳ ರಾಜಕೀಯ ನಂಟನ್ನು ಬಿಜೆಪಿ ನಾಯಕ ಮತ್ತು ಮಾಜಿ ಉಪಪ್ರಧಾನಿ ಎಲ್‌ಕೆ ಅಡ್ವಾಣಿ ಅಂತ್ಯಗೊಳಿಸಿದ್ದಾರೆ. ಶನಿವಾರ ನವದೆಹಲಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಡ್ವಾಣಿ ಮತ ಚಲಾಯಿಸಿದರು. ಇದರಿಂದ ಅವರ ಮತದಾನದ ಕ್ಷೇತ್ರ ಗುಜರಾತ್‌ನಿಂದ ದೆಹಲಿಗೆ ವರ್ಗಾವಣೆಯಾಗಿದೆ.

1991ರಿಂದಲೂ ಅಡ್ವಾಣಿ ಅವರು ಗುಜರಾತ್‌ನ ಮತದಾರರಾಗಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕೂಡ ಅವರು ಗುಜರಾತ್‌ನಲ್ಲಿಯೇ ಮತ ಚಲಾಯಿಸಿದ್ದರು. 20 ವರ್ಷಗಳಲ್ಲಿಯೇ ಮೊದಲ ಬಾರಿಗೆ ಅವರು ಅಭ್ಯರ್ಥಿಯಾಗಿರದೆ ಸಾಮಾನ್ಯ ಪ್ರಜೆಯಾಗಿ ಅಹಮದಾಬಾದ್‌ನ ಸ್ಥಳೀಯ ಶಾಲೆಯೊಂದರಲ್ಲಿ ಮತ ಚಲಾಯಿಸಿದ್ದರು.

92 ವರ್ಷದ ಅಡ್ವಾಣಿ, ಅಹಮದಾಬಾದ್‌ನ ಜಮಲ್ಪುರ-ಖಾಡಿಯಾ ವಿಧಾನಸಭೆ ಕ್ಷೇತ್ರದಲ್ಲಿನ ಮತದಾರರಾಗಿದ್ದರು. ಇನ್ನು ಮುಂದೆ ಅವರು ದೆಹಲಿಯ ಮತದಾರರಾಗಿರಲಿದ್ದು, ಗುಜರಾತ್ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರುವುದಿಲ್ಲ. ಅವರ ಹೆಸರನ್ನು ಗುಜರಾತ್ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಇನ್ನು ದೆಹಲಿಯಲ್ಲಿಯೇ ಮತದಾನ

ಇನ್ನು ದೆಹಲಿಯಲ್ಲಿಯೇ ಮತದಾನ

'ನಮ್ಮ ದಾಖಲೆಗಳಲ್ಲಿ ಎಲ್‌ಕೆ ಅಡ್ವಾಣಿ ಅವರ ಹೆಸರು ಅಳಿಸಲಾಗಿರುವ ಮತದಾರರ ಪಟ್ಟಿಯಲ್ಲಿ ತೋರಿಸುತ್ತಿದೆ. ಅವರು ಅಹಮದಾಬಾದ್ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕಿಸಿ ದೆಹಲಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದರೆ, ಇನ್ನು ಅವರು ನವದೆಹಲಿ ಮಾತ್ರ ಮತ ಚಲಾಯಿಸಲು ಸಾಧ್ಯ' ಎಂದು ಗುಜರಾತ್ ಮುಖ್ಯ ಚುನಾವಣಾಧಿಕಾರಿ ಎಸ್. ಮುರಳಿಕೃಷ್ಣ ಹೇಳಿದರು.

ಕಳೆದ ಬಾರಿ ಗುಜರಾತ್‌ನಲ್ಲಿ ಮತ

ಕಳೆದ ಬಾರಿ ಗುಜರಾತ್‌ನಲ್ಲಿ ಮತ

ಎಲ್ ಕೆ ಅಡ್ವಾಣಿ ಅವರು ನವದೆಹಲಿಯನ್ನು ತಮ್ಮ ಕಾಯಂ ನಿವಾಸವಾಗಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಡ್ವಾಣಿ ಅವರು ಕೆಲವು ವರ್ಷಗಳಿಂದ ನವದೆಹಲಿಯಲ್ಲಿ ಪುತ್ರಿಯೊಂದಿಗೆ ನೆಲೆಸಿದ್ದಾರೆ. ಆದರೆ ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಗುಜರಾತ್‌ಗೆ ತೆರಳಿದ್ದರು.

1989ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿದಿದ್ದ ಅಡ್ವಾಣಿ ಅವರು ದೆಹಲಿಯಿಂದ ಸ್ಪರ್ಧಿಸಿ ಜಯಗಳಿಸಿದ್ದರು.

ಗಾಂಧಿನಗರವೇ ಅಡ್ವಾಣಿ ಕ್ಷೇತ್ರ

ಗಾಂಧಿನಗರವೇ ಅಡ್ವಾಣಿ ಕ್ಷೇತ್ರ

1991ರಲ್ಲಿ ಮೊದಲ ಬಾರಿಗೆ ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ಆಗಲೂ ಅವರು ನವದೆಹಲಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಗುಜರಾತ್‌ನ ಗಾಂಧಿನಗರ ಕ್ಷೇತ್ರವನ್ನೇ ಉಳಿಸಿಕೊಂಡಿದ್ದರು. ದೆಹಲಿಯಲ್ಲಿ ಬಾಲಿವುಡ್ ಸ್ಟಾರ್ ರಾಜೇಶ್ ಖನ್ನಾ ವಿರುದ್ಧ ಕೇವಲ 1,500 ಮತಗಳಿಂದ ಜಯಸಾಧಿಸಿದ್ದರು.

ನಂತರ ಅವರು ತಮ್ಮ ನಿವಾಸವನ್ನು ಅಹಮದಾಬಾದ್‌ನ ಗಾಂಧಿನಗರಕ್ಕೆ ಸ್ಥಳಾಂತರಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿಯ ಮಾಜಿ ಅಧ್ಯಕ್ಷ ಅಮಿತ್ ಶಾ ಸ್ಪರ್ಧೆಗೆ ಇಳಿಯುವವರೆಗೂ ಈ ಕ್ಷೇತ್ರದಿಂದ ಸತತ ಆರು ಬಾರಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದರು.

ಮಗಳ ಜತೆ ವಾಸವಿರುವ ಅಡ್ವಾಣಿ

ಮಗಳ ಜತೆ ವಾಸವಿರುವ ಅಡ್ವಾಣಿ

ಶನಿವಾರ ನಡೆದ ದೆಹಲಿ ವಿಧಾನಸಭೆ ಚುನಾವಣೆ ವೇಳೆ ಅಡ್ವಾಣಿ ಅವರು ನವದೆಹಲಿ ವಿಧಾನಸಭೆ ಕ್ಷೇತ್ರದ ದೆಹಲಿಯ ಔರಂಗಜೇಬ್ ರಸ್ತೆಯ ಅಟಲ್ ಆದರ್ಶ್ ವಿದ್ಯಾಲಯದಲ್ಲಿ ಮತ ಚಲಾಯಿಸಿದರು. ಅವರೊಂದಿಗೆ ಅವರ ಮಗಳು ಪ್ರತಿಭಾ ಅಡ್ವಾಣಿ ಕೂಡ ಮತ ಚಲಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+