ಬಿಜೆಪಿ ಅಂತ್ಯಕಾಲದ ಆರಂಭವಾಗಿದೆ ಎಂದ ಮಮತಾ ಬ್ಯಾನರ್ಜಿ

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 14: "ಭಾರತೀಯ ಜನತಾ ಪಕ್ಷದ ಅಂತ್ಯ ಕಾಲದ ಆರಂಭವಾಗಿದೆ" ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದೇ ವೇಳೆ ಉತ್ತರಪ್ರದೇಶದಲ್ಲಿ ನಡೆದ ಎರಡು ಲೋಕಸಭಾ ಸ್ಥಾನಗಳ ಉಪ ಚುನಾವಣೆಯಲ್ಲಿ ಒಳ್ಳೆ ಸಾಧನೆ ಮಾಡಿದ್ದೀರಿ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಎಸ್ ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಉತ್ತರ ಪ್ರದೇಶದ ಗೋರಖ್ ಪುರ್ ಹಾಗೂ ಫುಲ್ ಪುರ್ ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದಲ್ಲಿ ಸಮಾಜವಾದಿ ಪಕ್ಷ ಭಾರೀ ಮುನ್ನಡೆ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಈ ಸಂದೇಶ ರವಾನಿಸಿದ್ದಾರೆ. ಇನ್ನು ಬಿಹಾರದ ಬಬುವಾದಲ್ಲಿ ರಾಷ್ತ್ರೀಯ ಜನತಾ ದಳ ಗೆಲುವು ಸಾಧಿಸಿದ್ದು, ಅರರಿಯಾ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸುವ ಹಾದಿಯಲ್ಲಿತ್ತು.

ಎಸ್ಪಿ, ಬಿಎಸ್ಪಿ ಮೈತ್ರಿಗೆ ಥಂಡಾ ಹೊಡೆದ ಬಿಜೆಪಿ

‘Beginning of the End Has Started for BJP,’ Says Mamata Banerjee

ಈ ಹಂತದಲ್ಲಿ ಸಾಲು ಸಾಲು ಟ್ವೀಟ್ ಮಾಡಿದ ಮಮತಾ ಬ್ಯಾನರ್ಜಿ ಬುಧವಾರದ ಫಲಿತಾಂಶದಿಂದ "ಬಿಜೆಪಿಯ ಅಂತ್ಯದ ಆರಂಭವಾಗಿದೆ" ಎಂದಿದ್ದಾರೆ. "ಇದು ಅಭೂತಪೂರ್ವ ಗೆಲುವು. ಮಾಯಾವತಿ ಜೀ ಹಾಗೂ ಅಖಿಲೇಶ್ ಯಾದವ್ ಗೆ ಅಭಿನಂದನೆಗಳು" ಎಂದಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ, "ಅರಾರಿಯಾ ಹಾಗೂ ಜೆಹನಾಬಾದ್ ನಲ್ಲಿ ಜಯ ಗಳಿಸಿದ ಲಾಲೂ ಪ್ರಸಾದ್ ಜೀ ಅಭಿನಂದನೆಗಳು. ಇದು ಅದ್ಭುತ ಗೆಲುವು" ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
West Bengal chief minister Mamata Banerjee tweeted congratulatory messages to Rashtriya Janata Dal chief Lalu Prasad Yadav, Bahujan Samaj Party chief Mayawati and Samajwadi Party president Akhilesh Yadav for their showing in the bypolls in Uttar Pradesh and Bihar.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ