ಬಿಜೆಪಿ ಸೇರಿದ ದಂಗಲ್ ಹುಡುಗಿ ಬಬಿತಾ ಪೋಗಟ್

ನವದೆಹಲಿ, ಆಗಸ್ಟ್ 12: ದಂಗಲ್ ಸಿನಿಮಾಕ್ಕೆ ಪ್ರೇರಣೆ ಆಗಿದ್ದ ಬಬಿತಾ ಪೋಗಟ್ ಅವರು ಇಂದು ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದಾರೆ. ಅವರ ತಂದೆ ಮಹಾವೀರ್ ಪೋಗಟ್ ಅವರೂ ಸಹ ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದಾರೆ.

ಹರಿಯಾಣದ ಬಿಜೆಪಿ ಉಸ್ತುವಾರಿ ಆಗಿರುವ ಸಚಿವ ಕಿರಣ್ ರಿಜುಜು ಅವರ ನೇತೃತ್ವದಲ್ಲಿ ಈ ಇಬ್ಬರೂ ಕುಸ್ತಿ ಪಟುಗಳು ಬಿಜೆಪಿ ಪಕ್ಷ ಸೇರ್ಪಡೆ ಆದರು.

ಬಬಿತಾ ಪೋಗಟ್ ಅವರು ಅಂತರರಾಷ್ಟ್ರೀಯ ಕುಸ್ತಿ ಪಟು ಆಗಿದ್ದಾರೆ. ಮಹಾವೀರ್ ಪೋಗಟ್ ಅವರು ತಮ್ಮ ಹೆಣ್ಣು ಮಕ್ಕಳಿಗೆ ಕುಸ್ತಿ ತರಬೇತಿ ನೀಡಿದ ಘಟನೆಯನ್ನು ಆಧರಿಸಿ ದಂಗಲ್ ಸಿನಿಮಾ ನಿರ್ಮಾಣವಾಗಿತ್ತು. ಅದರಲ್ಲಿ ಅಮೀತ್ ಖಾನ್ ಮಹಾವೀರ್ ಪೋಗಟ್ ಪಾತ್ರದಲ್ಲಿ ನಟಿಸಿದ್ದರು.

Babita Phogat and Mahaveer Phogat joins BJP

ಈ ವರ್ಷದ ಅಂತ್ಯಕ್ಕೆ ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಸಮಯದಲ್ಲಿ ಈ ಇಬ್ಬರೂ ಕ್ರೀಡಾಪಟುಗಳು ಬಿಜೆಪಿ ಸೇರಿರುವುದು ಪಕ್ಷಕ್ಕೆ ನೆರವಾಗಲಿದೆ ಎಂಬುದು ಬಿಜೆಪಿ ಅಭಿಪ್ರಾಯವಾಗಿದೆ.

ಬಿಜೆಪಿ ಸೇರ್ಪಡೆಯಾಗಿ ಮಾತನಾಡಿದ ಬಬಿತಾ ಪೋಗಟ್ ಅವರು, 'ನಾನು ಮೋದಿ ಅವರ ದೊಡ್ಡ ಅಭಿಮಾನಿ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದ 370ನೇ ವಿಧಿ ರದ್ದು ಮಾಡಿದ್ದು ಐತಿಹಾಸಿಕ ನಿರ್ಣಯವಾಗಿದೆ' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+