ಸೇನೆಯಲ್ಲಿ ಮಹಿಳೆಯರ ಸಾಧನೆ ಬಗ್ಗೆ ಏಕಿಷ್ಟು ನಿರ್ಲಕ್ಷ್ಯ?; ಸುಪ್ರೀಂ
ನವದೆಹಲಿ, ಮಾರ್ಚ್ 25: ಸೇನೆಯಲ್ಲಿ ಕಾಯಂ ಸೇವೆ ಹುದ್ದೆ ಕಲ್ಪಿಸುವಲ್ಲಿ ತಾರತಮ್ಯವಾಗಿದೆ ಹಾಗೂ ಸೇನೆಯ ವಾರ್ಷಿಕ ವರದಿ ಮೌಲ್ಯಮಾಪನಾ ಪ್ರಕ್ರಿಯೆ ದೋಷಪೂರಿತವಾಗಿದೆ ಎಂದು ಆರೋಪಿಸಿ ಎಸ್‌ಎಸ್‌ಸಿಯ (ಶಾರ್ಟ್ ಸರ್ವೀಸ್ ಕಮಿಷನ್) ಹಲವು ಮಹಿಳಾ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರ ನೇತೃತ್ವದ ಪೀಠವು, ಈ ಅರ್ಜಿಯ ಆರೋಪವನ್ನು ಸಮರ್ಥಿಸಿಕೊಂಡಿದೆ. ಸೇನೆಯಲ್ಲಿ ವಾರ್ಷಿಕ ವರದಿ ಸಿದ್ಧಪಡಿಸುವಾಗ ಮಹಿಳಾ ಅಧಿಕಾರಿಗಳ ಸಾಧನೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಹೇಳಿದೆ.
ಸಂವಿಧಾನ ಪ್ರತಿಪಾದಿಸಿರುವ ಸಮಾನತೆಯು ಮೇಲ್ನೋಟಕ್ಕಷ್ಟೆ ಇದೆ. ಸಮಾನ ಅವಕಾಶ ಕಲ್ಪಿಸುವ ಪ್ರಯತ್ನಗಳು ಇನ್ನೂ ನಡೆಯುತ್ತಿವೆ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಸೇನೆಯಲ್ಲಿನ ಎಲ್ಲಾ ಮಹಿಳಾ ಅಧಿಕಾರಿಗಳಿಗೆ ಕಾಯಂ ಸೇವೆಯ ಹುದ್ದೆಗಳನ್ನು ಕಲ್ಪಿಸಬೇಕು ಎಂದು ಕಳೆದ ಫೆ.17ರಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ ನೀಡಿ ಮೂರು ತಿಂಗಳಿನಲ್ಲಿ ಈ ಆದೇಶವನ್ನು ಜಾರಿಗೊಳಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿತ್ತು. ಈ ಬಗ್ಗೆ ಲಿಂಗ ತಾರತಮ್ಯದ ಕುರಿತು ಉಲ್ಲೇಖಿಸಿತ್ತು.

ಹೀಗಾಗಿ ಸೇನೆಯ ಹಲವು ಮಹಿಳಾ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ಇಷ್ಟಾಗಿಯೂ ಮಹಿಳಾ ಅಧಿಕಾರಿಗಳ ಕಾರ್ಯನಿರ್ವಹಣೆಯ ಮೌಲ್ಯಮಾಪನದ ಸಂದರ್ಭ ಅವರ ಸಾಧನೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಿದೆ. ಸೇನೆಯಲ್ಲಿ ಮಹಿಳಾ ಅಧಿಕಾರಿಗಳ ಪರಿಸ್ಥಿತಿ ಭಿನ್ನವಾಗಿದೆ. ಮಹಿಳೆಯರು ತಮ್ಮ ಹಕ್ಕುಗಳಿಗಾಗ ಇದೀಗ ನ್ಯಾಯಾಲಯದ ಮುಂದೆ ಬಂದಿದ್ದಾರೆ ಎಂದು ಪೀಠ ತರಾಟೆಗೆ ತೆಗೆದುಕೊಂಡಿದೆ.
ಕಾಯಂ ಸೇವೆಯ ಹುದ್ದೆಗಳನ್ನು ಒದಗಿಸುವ ಪ್ರಕ್ರಿಯೆ ನ್ಯಾಯಯುತವಾಗಿಲ್ಲ ಎಂದು ಸುಮಾರು ಎಂಬತ್ತು ಮಹಿಳಾ ಅಧಿಕಾರಿಗಳು ಅರ್ಜಿಯಲ್ಲಿ ದೂರಿದ್ದಾರೆ.












Click it and Unblock the Notifications