• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

30 ವರ್ಷಗಳ ಬಳಿಕ ಮತ್ತೆ ಮುಗಿಲಿಗೆ ಜಿಗಿದ ಡಕೋಟಾ ವಿಮಾನ

|

ನವದೆಹಲಿ, ಅಕ್ಟೋಬರ್ 8: ಪಾಕಿಸ್ತಾನದೊಂದಿಗೆ 1947ರಲ್ಲಿ ನಡೆದ ಯುದ್ಧದಲ್ಲಿ ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಉಳಿಯುವಂತೆ ಮಾಡಿದರಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಡಿಸಿ-3 ಡಕೋಟಾ ವಿಮಾನ ಇಂದು(ಅ.8)ರಂದು ಹಾರಾಟ ನಡೆಸಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಸೋಮವಾರ ನವದೆಹಲಿಯಲ್ಲಿ ನಡೆದ ವಾಯುಪಡೆ ದಿನಾಚರಣೆ ವೇಳೆ ಇದರ ಹಾರಾಟವನ್ನು ವೀಕ್ಷಿಸಲಾಯಿತು. ಹಾರಾಟಕ್ಕೆ ಅಸಮರ್ಥವಾಗಿ ಗುಜರಿ ಸೇರಿದ್ದ ವಿಮಾನ ಬ್ರಿಟನ್ ನಲ್ಲಿ ಇರುವುದನ್ನು ಕರ್ನಾಟಕದ ಸಂಸದ ರಾಜೀವ್ ಚಂದ್ರಶೇಖರ್ ಅವರು 2011ರಲ್ಲಿ ಪತ್ತೆ ಮಾಡಿದ್ದರು.

ವಾಯುಪಡೆಗೆ ಯುದ್ಧ ವಿಮಾನ ಉಡುಗೊರೆ ಕೊಟ್ಟ ರಾಜೀವ್ ಚಂದ್ರಶೇಖರ್

ವಾಯುಪಡೆಯಲ್ಲಿ ಕೆಲಸ ಮಾಡುವಾಗ ಈ ವಿಮಾನ ಹಾರಿಸಿದ್ದ ತಂದೆ, ಏರ್ ಕಮೊಡೋರ್ ಎಂಕೆ ಚಂದ್ರಶೇಖರ್ ಅವರಪರವಾಗಿ ಕಳೆದ ಫೆಬ್ರವರಿಯಲ್ಲಿ ವಾಯುಪಡೆಗೆ ಕಾಣಿಕೆಯಾಗಿ ನೀಡಿದ್ದರು. ಈ ನಡುವೆ ದುರಸ್ತಿಗೊಂಡ ಈ ವಿಮಾನವು ಕಳೆದ ಏಪ್ರಿಲ್ 25ರಂದು ಭಾರತಕ್ಕೆ ಆಗಮಿಸಿತ್ತು. ಇದಕ್ಕೆ ಪರಶುರಾಮ ಎಂದು ಹೆಸರಿಡಲಾಗಿದೆ.

ಆಧಾರ್ ತೀರ್ಪು ಭಷ್ಟಾಚಾರ ಮುಕ್ತ ಭಾರತಕ್ಕೆ ಪೂರಕ: ರಾಜೀವ್

ಕಾಶ್ಮೀರವು ಭಾರತದಲ್ಲೇ ಉಳಿಯುವಂತಾಗಲು ಡಕೋಟಾ ವಿಮಾನ ಪಟ್ಟ ಶ್ರಮ ಅಪಾರ, ಸಕಾಲದಲ್ಲಿ ಈ ವಿಮಾನದಲ್ಲಿ ಸೈನಿಕರು ದೆಹಲಿಯಿಂದ ಕಾಶ್ಮೀರಕ್ಕೆ ಆಗಮಿಸಿ, ಇಡೀ ಕಾಶ್ಮೀರ ಪಾಕಿಸ್ತಾನದ ಪಾಲಾಗುವುದನ್ನು ತಡೆದಿದ್ದರು.

English summary
The Indian Air Force is celebrating its 86th anniversary today when it will showcase it prowess and put its mainstream fighter jets on display. A grand parade-cum-investiture ceremony is being held at the Air Force Station at Hindon near Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X