ತಾಂತ್ರಿಕ ದೋಷ: ಕೊಲ್ಕತ್ತಾಕ್ಕೆ ತೆರಳುತ್ತಿದ್ದ ವಿಮಾನ ದೆಹಲಿಗೆ ವಾಪಸ್
ನವದೆಹಲಿ, ಮೇ 30: ನವದೆಹಲಿಯಿಂದ ಕೋಲ್ಕತಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಪರಿಣಾಮ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(ಐಜಿಐಎ) ಹಿಂದಿರುಗಿದೆ.
ಬೆಳಗ್ಗೆ 7.10ಕ್ಕೆ ಮೇಲೀರಿದ ಡ್ರೀಮ್‌ಲೈನರ್ ಬಿ 787-800 ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ವಿಮಾನದ ಪೈಲೆಟ್‌ಗಳು ಬೆಳಗ್ಗೆ 8.50ಕ್ಕೆ ದೆಹಲಿಯಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಿದ್ದಾರೆ. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯಿಂದ ಈ ವಿಮಾನ ಬೆಳಗ್ಗೆ 6.50ಕ್ಕೆ ಮೇಲೇರಬೇಕಿತ್ತು. 20 ನಿಮಿಷಗಳ ತಡವಾಗಿ ಹಾರಾಟ ಆರಂಭಿಸಿದ ವಿಮಾನದಲ್ಲಿ 40 ನಿಮಿಷಗಳ ನಂತರ ತಾಂತ್ರಿಕ ದೋಷ ಕಾಣಿಸಿಕೊಂಡಿತು. ವಿಮಾನವನ್ನು ದೆಹಲಿಗೆ ಮತ್ತೆ ವಾಪಸ್ ಕೊಂಡೊಯ್ಯುತ್ತಿರುವಾಗಿ ಪೈಲೆಟ್ ಪ್ರಕಟಿಸಿದರು. ಬಳಿಕ ವಿಮಾನ ಸುರಕ್ಷಿತವಾಗಿ ಇಳಿಯಿತು ಎಂದು ಏರ್‌ಪೋರ್ಟ್ ಮೂಲಗಳು ತಿಳಿಸಿವೆ.

ಕಳೆದ ಒಂದು ತಿಂಗಳ ಹಿಂದಷ್ಟೇ ಅಮೃತಸರದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದ ವಿಮಾನ ವಿಪರೀತ ಹೊಯ್ದಾಟಕ್ಕೆ ಗುರಿಯಾಗಿತ್ತು. ಪರಿಣಾಮ ಮೂವರು ಗಾಯಗೊಂಡಿದ್ದರು. ಗಾಳಿಯಲ್ಲಿ ವಿಮಾನ ಹೊಯ್ದಾಟದಿಂದಾಗಿ ವಿಮಾನದ ಒಂದು ಕಿಟಕಿಯ ಗಾಜು ಕಳಚಿ ಬಿದ್ದಿತ್ತು. ಇದೀಗ ಮತ್ತೊಂದು ದೋಷ ಕಾಣಿಸಿಕೊಂಡಿದೆ.












Click it and Unblock the Notifications