ಜ್ವರವೇ ಕೊವಿಡ್ 19 ರೋಗದ ಪ್ರಧಾನ ಲಕ್ಷಣ ಅಲ್ಲ: ಏಮ್ಸ್ ಅಧ್ಯಯನ

ನವದೆಹಲಿ, ಜುಲೈ 25: ಕೊವಿಡ್ 19 ರೋಗಕ್ಕೆ ಜ್ವರವೇ ಪ್ರಧಾನ ಲಕ್ಷಣಗಳೆಂದು ಆಸ್ಪತ್ರೆಗೆ ಹೋಗುವುದರಿಂದ ಹಲವು ಲಕ್ಷಣವಿಲ್ಲದ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ.

Recommended Video

      48 ನಿಮಿಷದಲ್ಲಿ 5 Km ಆಟೋ ಎಳೆದ ಭೂಪ | Oneindia Kannada

      ಹೌದು ಕೊರೊನಾ ಸೋಂಕಿನ ಲಕ್ಷಣ ಕೇವಲ ಜ್ವರ ಮಾತ್ರ ಪ್ರಧಾನ ಲಕ್ಷಣ ಅಲ್ಲವೇ ಅಲ್ಲ. ದೆಹಲಿ ಏಮ್ಸ್ ಆಸ್ಪತ್ರೆ ಈ ಅಧ್ಯಯನವನ್ನು ಮಾಡಿದ್ದು, 144 ಆಸ್ಪತ್ರೆಯಲ್ಲಿರುವ ರೋಗಿಗಳ ಅಧ್ಯಯನ ಮಾಡಿದೆ.

      29 ಮಂದಿ ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದಾರೆ. ಮಾರ್ಚ್ 23 ರಿಂದ ಏಪ್ರಿಲ್ 15ರವರೆಗಿನ ಡಾಟಾವನ್ನು ಬಳಕೆ ಮಾಡಲಾಗಿದೆ. 144 ರೋಗಿಗಳಲ್ಲಿ ಶೇ.93ರಷ್ಟು ಮಂದಿ ಪುರುಷರಿದ್ದಾರೆ. 10 ಮಂದಿ ವಿದೇಶದವರಿದ್ದಾರೆ.

      AIIMS Study Says Fever Not Predominant Covid Symptom

      ಅದರಲ್ಲಿ ಕೇವಲ 17ರಷ್ಟು ಮಂದಿಗೆ ಮಾತ್ರ ಜ್ವರ ಕಾಣಿಸಿಕೊಂಡಿತ್ತು. ಚೀನಾದಲ್ಲಿ ಶೇ.44 ರಷ್ಟು ಮಂದಿಯಲ್ಲಿ ಜ್ವರ ಇತ್ತು. ಶೇ.88ರಷ್ಟು ಮಂದಿಗೆ ಆಸ್ಪತ್ರೆಯಲ್ಲಿ ದಾಖಲಾದ ಬಳಿಕ ಜ್ವರ ಕಾಣಿಸಿಕೊಂಡಿತ್ತು.

      ಕೆಲವರಲ್ಲಿ ಸಣ್ಣ ಪ್ರಮಾಣದ ಉಸಿರಾಟದ ತೊಂದರೆ, ಕಫ, ಗಂಟಲಿನಲ್ಲಿ ಕಿರಿಕಿರಿ ರೀತಿಯ ಸಣ್ಣ ಪ್ರಮಾಣದ ಲಕ್ಷಣಗಳೂ ಕೂಡ ಇರಬಹುದು.ಶೇ.44 ರಷ್ಟು ಮಂದಿಗೆ ಯಾವುದೇ ಲಕ್ಷಣಗಳಿಲ್ಲ. ಈ ಲಕ್ಷಣವಿಲ್ಲದವರು ಮತ್ತಷ್ಟು ಸೋಂಕನ್ನು ಹರಡುವ ಎಲ್ಲಾ ಸಾಧ್ಯತೆ ಇರುತ್ತದೆ.

      144 ಮಂದಿ ರೋಗಿಗಳಲ್ಲಿ ನಾಲ್ಕು ಮಂದಿಯಲ್ಲಿ ಅಂದರೆ ಶೇ.2.8ರಷ್ಟು ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿತ್ತು. ದಾಖಲಾಗುವ ಸಂದರ್ಭದಲ್ಲಿ ಕೇವಲ 16 ಮಂದಿಗೆ ಮಾತ್ರ ಜ್ವರವಿತ್ತು.

      ಇದು ವಯಸ್ಸಿನ ಮೇಲೆ ನಿರ್ಧರಿತವಾಗಿಲ್ಲ, ಇದರಲ್ಲಿ ಎಲ್ಲಾ ವಯಸ್ಸಿನವೂ ಇದ್ದರು. 144 ರೋಗಿಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅವರಲ್ಲಿ ಅತಿಯಾದ ಸೋಂಕು ಕಾಣಿಸಿಕೊಂಡಿತ್ತು. ರೋಗಿಗಳಿಗೆ ಪ್ಯಾರಾಸಿಟಮೋಲ್, ವಿಟಮಿನ್ ಸಿ, ಆಂಟಿ ಹಿಸ್ಟಮೈನ್ಸ್‌ ನೀಡಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+