ಏಮ್ಸ್ ಸಿಬ್ಬಂದಿ ಮೇಲೆ ಹಲ್ಲೆ: ಎಎಪಿ ಶಾಸಕ ಸೋಮನಾಥ್ ಭಾರ್ತಿಗೆ 2 ವರ್ಷ ಜೈಲು

ನವದೆಹಲಿ, ಜನವರಿ 23: ಅಖಿಲ ಭಾರತ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್) ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿ ಅವರಿಗೆ ದೆಹಲಿ ನ್ಯಾಯಾಲಯವೊಂದು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಜತೆಗೆ ಸೋಮನಾಥ್ ಭಾರ್ತಿ ಅವರಿಗೆ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಅವರು ಒಂದು ಲಕ್ಷ ರೂ ದಂಡವನ್ನು ಕೂಡ ವಿಧಿಸಿದ್ದಾರೆ. 2016ರಲ್ಲಿ ಭಾರ್ತಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಆದರೆ ತಮ್ಮ ವಿರುದ್ಧದ ಪ್ರಕರಣ ಮತ್ತು ಜೈಲು ಶಿಕ್ಷೆ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಅವಕಾಶವಾಗುವಂತೆ ಭಾರ್ತಿ ಅವರಿಗೆ ಜಾಮೀನು ನೀಡಲಾಗಿದೆ. 2016ರ ಸೆಪ್ಟೆಂಬರ್ 9ರಂದು ಸುಮಾರು 300 ಇತರರೊಂದಿಗೆ ಸೋಮನಾಥ್ ಭಾರ್ತಿ ಅವರು ಜೆಸಿಬಿ ಆಪರೇಟರ್ ಸಹಾಯದಿಂದ ಏಮ್ಸ್ ಗಡಿ ಗೋಡೆಯ ಬೇಲಿಯನ್ನು ಉರುಳಿಸಿದ್ದರು ಎಂದು ಆರೋಪಿಸಲಾಗಿದೆ.

AIIMS Staff Assaulting Case: AAP MLA Somnath Bharti Sentenced To 2 Years In Jail

'ಸೋಮನಾಥ್ ಭಾರ್ತಿ ಅವರ ವಿರುದ್ಧದ ಎಲ್ಲ ಸಕಾರಣ ಅನುಮಾನಗಳಾಚೆ ಅವರ ಕೈವಾಡ ಇರುವುದು ವಿಚಾರಣೆ ವೇಳೆ ದೃಢಪಟ್ಟಿದೆ' ಎಂದು ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

ಐಪಿಸಿ ಸೆಕ್ಷನ್ 323, 353 ಮತ್ತು 147ರ ಅಡಿ ಸೋಮನಾಥ್ ಭಾರ್ತಿ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಜತೆಗೆ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಯ ಸೆಕ್ಷನ್ 3ಅಡಿ ಕೂಡ ಅವರನ್ನು ತಪ್ಪಿತಸ್ಥ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಆದರೆ ಭಾರ್ತಿ ಅವರ ಸಹವರ್ತಿಗಳಾದ ಜಗತ್ ಸೈನಿ, ದಿಲೀಪ್ ಝಾ, ಸಂದೀಪ್ ಸೋನು ಮತ್ತು ರಾಕೇಶ್ ಪಾಂಡೆ ಅವರನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+