ಅಪಾರ್ಟ್‌ಮೆಂಟ್‌ ಬಾಲ್ಕನಿಯಿಂದ ಜಿಗಿದು ಏಮ್ಸ್ ವೈದ್ಯ ಆತ್ಮಹತ್ಯೆ

ನವದೆಹಲಿ, ಡಿಸೆಂಬರ್ 27: ವೈದ್ಯನೊಬ್ಬ ಪತ್ನಿಯ ಜೊತೆ ಜಗಳವಾಡಿ ಬಾಲ್ಕನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಮನೀಶ್ ಶರ್ಮಾ ಮೃತರು, ಅವರು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಮ್ಸ್‌)ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ದಕ್ಷಿಣ ದೆಹಲಿಯ ಗೌತಮ್ ನಗರದಲ್ಲಿ ಅವರು ಪತ್ನಿಯೊಂದಿಗೆ ವಾಸವಿದ್ದರು.

ಮಂಗಳವಾರ ರಾತ್ರಿ 11.30ರ ಸುಮಾರಿಗೆ ಪತ್ನಿ ತೃಪ್ತಿ ಚೌಧರಿ ಜೊತೆ ಜಗಳವಾಡಿ ಕೋಪದಲ್ಲಿ ಹೋಗಿ ಬಾಲ್ಕನಿಯಿಂದ ಹಾರಿ ಮೃತಪಟ್ಟಿದ್ದಾರ. ಏಮ್ಸ್‌ನಲ್ಲಿ ಹಿರಿಯ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

AIIMS doctor jumps to death after fight with wife in Delhi’s Gautam Nagar

ಇಬ್ಬರ ಜಗಳ ಎಲ್ಲಿಯವರೆಗೂ ಹೋಗಿತ್ತೆಂದರೇ ಇಬ್ಬರೂ ಸದಾ ಮೊಬೈಲ್​ಗಳನ್ನು ಪರಿಶೀಲಿಸಿ ಯಾರ ಜತೆ ಚಾಟ್​ ಮಾಡುತ್ತಿದ್ದರೆಂಬುದನ್ನು ತಿಳಿದುಕೊಳ್ಳುತ್ತಿದ್ದರು. ಮಂಗಳವಾರವೂ ದಂಪತಿ ಜಗಳವಾಡಿಕೊಂಡಿದ್ದಾರೆ. ಜಗಳದ ತೀವ್ರತೆ ಹೆಚ್ಚಾದಾಗ ರೂಮ್​ಮೇಟ್​ ಮತ್ತು ನೆರೆಮನೆಯವರು ಜಗಳ ಬಿಡಿಸಲು ಮುಂದಾಗಿದ್ದಾರೆ.

ಆ ನಂತರ ಕೋಪದಲ್ಲಿ ಶರ್ಮ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಯಾವ ಕೈವಾಡವೂ ಇಲ್ಲದಿರುವುದು ತನಿಖೆ ವೇಳೆ ದೃಢಪಟ್ಟಿದೆ.

ರಾಜಸ್ಥಾನ ಮೂಲದವರಾದ ಶರ್ಮ, ಗೌತಮ್​ ನಗರ ವಸತಿ ಸಂಕೀರ್ಣದಲ್ಲಿ ತನ್ನ ಸಹೋದ್ಯೋಗಿಗಳ ಜತೆ ವಾಸವಿದ್ದರು. ಆರು ತಿಂಗಳ ಹಿಂದೆ ಮದುವೆಯಾಗಿದ್ದ ಶರ್ಮ ಅವರನ್ನು ಪತ್ನಿ ಆಗಾಗ್ಗೆ ಬಂದು ಭೇಟಿಯಾಗುತ್ತಿದ್ದರು. ಆದರೆ, ಇಬ್ಬರ ದಾಂಪತ್ಯ ಜೀವನ ಜಗಳದಿಂದ ಕೂಡಿತ್ತು ಎಂದು ಡಿಸಿಪಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+