ಆರೋಗ್ಯ, ಐಶ್ವರ್ಯ ತರುತ್ತವೆ ಎನ್ನಲಾದ ಈ 5 ಗಿಡಗಳನ್ನು ಮನೆಯಲ್ಲಿ ಇಟ್ಟರೆ ಅದೃಷ್ಟ ಖುಲಾಯಿಸಬಹುದಂತೆ!

ಮನೆಯ ಸೌಂದರ್ಯವನ್ನು ಹೆಚ್ಚಿಸಲು ಗಿಡಗಳನ್ನು ಇಡುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಟ್ರೆಂಡ್ ಆಗಿದ್ದರೂ, ಅನೇಕ ಸಂಸ್ಕೃತಿಗಳಲ್ಲಿ ಸಸ್ಯಗಳಿಗೆ ವಿಶೇಷ ಆಧ್ಯಾತ್ಮಿಕ ಮಹತ್ವವಿದೆ. ಫೆಂಗ್ ಶೂಯಿಯಿಂದ ಹಿಡಿದು ಮೆಡಿಟರೇನಿಯನ್ ಮತ್ತು ಮಧ್ಯಪ್ರಾಚ್ಯದ ಸಂಪ್ರದಾಯಗಳವರೆಗೆ ಕೆಲವು ಗಿಡಗಳು ಆರೋಗ್ಯ, ಐಶ್ವರ್ಯ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಎಂಬ ನಂಬಿಕೆ ಇದೆ. ಅದೇ ವೇಳೆ, ಕೆಲವು ಸಸ್ಯಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತರಬಹುದು ಎಂಬ ನಂಬಿಕೆಯೂ ಇದೆ. ಹಾಗಾದರೆ ಯಾವ ಗಿಡಗಳನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ? ಯಾವ ಗಿಡಗಳನ್ನು ಮನೆಯೊಳಗೆ ಇಡುವುದನ್ನು ಕೆಲ ಸಂಪ್ರದಾಯಗಳು ತಪ್ಪಿಸಲು ಹೇಳುತ್ತವೆ? ಇಲ್ಲಿದೆ ಮಾಹಿತಿ.

ಆರೋಗ್ಯ ಮತ್ತು ಐಶ್ವರ್ಯ ತರುತ್ತವೆ ಎನ್ನಲಾದ 5 ಅದೃಷ್ಟದ ಗಿಡಗಳು

5 Lucky Plants

1. ಲಕ್ಕಿ ಬಿದಿರು(Lucky Bamboo)

ಹೆಸರಿನಲ್ಲಿ ಲಕ್ಕಿ ಬ್ಯಾಂಬೂ ಇದ್ದರೂ ಇದು ನಿಜವಾದ ಬಿದಿರಿನ ಗಿಡವಲ್ಲ. ಆದರೂ ಏಷ್ಯಾದ ಸಂಪ್ರದಾಯಗಳಲ್ಲಿ ಇದು ಅದೃಷ್ಟದ ಸಂಕೇತವಾಗಿ ಪ್ರಸಿದ್ಧವಾಗಿದೆ. ಮೂರು ಕಾಂಡಗಳು ಸಂತೋಷವನ್ನು, ಐದು ಕಾಂಡಗಳು ಸಂಪತ್ತನ್ನು ಮತ್ತು ಏಳು ಕಾಂಡಗಳು ಉತ್ತಮವಾದ ಆರೋಗ್ಯವನ್ನು ಸೂಚಿಸುತ್ತವೆ ಎನ್ನಲಾಗುತ್ತದೆ. ಈ ಗಿಡವನ್ನು ನೀರಿನಲ್ಲಿ ಅಥವಾ ಮಣ್ಣಿನಲ್ಲಿ ಬೆಳೆಸಬಹುದು. ನೇರ ಸೂರ್ಯನ ಬೆಳಕಿಗಿಂತ ಪರೋಕ್ಷವಾದ ಬೆಳಕಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.

5 Lucky Plants

2. ಮನಿ ಟ್ರೀ (Money Tree)

ಇದರ ಹಿಂದೆ ಒಂದು ಸ್ವಾರಸ್ಯಕರ ಕಥೆಯಿದೆ. ಬಡತನದಲ್ಲಿದ್ದ ಒಬ್ಬ ರೈತ ತನಗೆ ಸಿಕ್ಕ ಈ ಅಪರೂಪದ ಗಿಡವನ್ನು ಶ್ರದ್ಧೆಯಿಂದ ಬೆಳೆಸಿದನಂತೆ. ಅಚ್ಚರಿಯೆಂಬಂತೆ, ಆ ಗಿಡದ ಪ್ರಭಾವದಿಂದ ಅವನು ವ್ಯವಹಾರದಲ್ಲಿ ಅಪಾರ ಯಶಸ್ಸು ಗಳಿಸಿ, ದೊಡ್ಡ ಶ್ರೀಮಂತನಾದನೆಂಬ ನಂಬಿಕೆ ಜನಪ್ರಿಯವಾಗಿದೆ. ಹೆಣೆದ ಕಾಂಡ ಮತ್ತು ಹಸಿರು ಎಲೆಗಳಿಂದ ಇದು ಆಕರ್ಷಕವಾಗಿ ಕಾಣುತ್ತದೆ. ಮನೆಯ ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ಧನಲಾಭ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.

ಮನೆಯಲ್ಲಿ ತುಳಸಿ ಗಿಡವಿದ್ದರೆ ಈ 5 ವಿಷಯಗಳೂ ನೆನಪಿರಲಿ! ಹಣ ಉಳಿಯಬೇಕಾದರೆ ಇದು ಬಹಳ ಮುಖ್ಯ
ಮನೆಯಲ್ಲಿ ತುಳಸಿ ಗಿಡವಿದ್ದರೆ ಈ 5 ವಿಷಯಗಳೂ ನೆನಪಿರಲಿ! ಹಣ ಉಳಿಯಬೇಕಾದರೆ ಇದು ಬಹಳ ಮುಖ್ಯ

3. ಜೇಡ್ ಪ್ಲಾಂಟ್ (Jade Plant)

ನಾಣ್ಯದ ಆಕಾರದ ಎಲೆಗಳನ್ನು ಹೊಂದಿರುವ ಜೇಡ್ ಪ್ಲಾಂಟ್ ಅನ್ನು ಚೀನೀ ಸಂಸ್ಕೃತಿಯಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಹೇಳಲಾಗುತ್ತದೆ. ತುಂಬಾ ಕಡಿಮೆ ಆರೈಕೆ ಕೇಳುವ ಈ ಸುಂದರ ಗಿಡವನ್ನು ಮನೆಯ ಮುಖ್ಯ ಪ್ರವೇಶ ದ್ವಾರದ ಬಳಿ ಇಡುವುದರಿಂದ, ಮನೆಗೆ ಸಕಾರಾತ್ಮಕ ಶಕ್ತಿ ಮತ್ತು ಆರ್ಥಿಕ ಪ್ರಗತಿ ಒದಗಿಬರುತ್ತದೆ ಎಂಬ ಬಲವಾದ ನಂಬಿಕೆ ಇದೆ.

5 Lucky Plants

4. ನಿಂಬೆ ಅಥವಾ ಕಿತ್ತಳೆ ಗಿಡ (Citrus Trees)

ಮನೆಯಲ್ಲಿ ನಿಂಬೆ ಅಥವಾ ಕಿತ್ತಳೆ ಜಾತಿಯ ಸಣ್ಣ ಸಿಟ್ರಸ್ ಗಿಡಗಳನ್ನು ಬೆಳೆಸುವುದು ಸಮೃದ್ಧಿ ಮತ್ತು ರಕ್ಷಣೆಯ ಸಂಕೇತವಾಗಿದೆ. ಇವುಗಳಿಂದ ಹೊರಹೊಮ್ಮುವ ಸುಗಂಧಭರಿತ ಹೂವಿನ ಪರಿಮಳ ಮತ್ತು ಕಣ್ಣು ಸೆಳೆಯುವ ಹಣ್ಣುಗಳು ಇಡೀ ಮನೆಯನ್ನು ಸದಾ ಉಲ್ಲಾಸದಿಂದಿಡುತ್ತವೆ. ಕಿಟಕಿಯ ಬಳಿ ಸಾಕಷ್ಟು ನೈಸರ್ಗಿಕ ಬೆಳಕು ಬೀಳುವ ಜಾಗದಲ್ಲಿ ಇಟ್ಟರೆ ಇವು ಅತ್ಯಂತ ಆರೋಗ್ಯಕರವಾಗಿ ಬೆಳೆಯುತ್ತವೆ.

ಮನೆಯಲ್ಲಿ ಈ ಗಿಡಗಳನ್ನು ಇಡಬೇಡಿ! ಇದರಿಂದಾಗುವ ಆರ್ಥಿಕ ತೊಂದರೆಗಳ ಬಗ್ಗೆ ವಾಸ್ತು ಏನು ಹೇಳುತ್ತದೆ?
ಮನೆಯಲ್ಲಿ ಈ ಗಿಡಗಳನ್ನು ಇಡಬೇಡಿ! ಇದರಿಂದಾಗುವ ಆರ್ಥಿಕ ತೊಂದರೆಗಳ ಬಗ್ಗೆ ವಾಸ್ತು ಏನು ಹೇಳುತ್ತದೆ?

5. ಬಾಂದಳಿಕೆ ಸಸ್ಯ (Mistletoe)

ಮಿಸ್ಟಲ್‌ಟೋ(ಬಾಂದಳಿಕೆ) ಸಸ್ಯವನ್ನು ಜಗತ್ತಿನಾದ್ಯಂತ ಪ್ರೀತಿ ಮತ್ತು ಹಬ್ಬಗಳ ಶುಭ ಸಂಕೇತವಾಗಿ ನೋಡಲಾಗುತ್ತದೆ. ಆದರೆ ಸಸ್ಯಶಾಸ್ತ್ರದ ಇತಿಹಾಸದಲ್ಲಿ ಇದು ಇತರ ಮರಗಳ ಮೇಲೆ ಆಶ್ರಯ ಪಡೆದು ಬೆಳೆಯುವ ಪರಾವಲಂಬಿ ಸಸ್ಯವಾಗಿದೆ. ಹಳೆಯ ಜನಪದ ಕಥೆಗಳು ಇದನ್ನು ದ್ರೋಹ ಮತ್ತು ನಕಾರಾತ್ಮಕತೆಯ ಸಂಕೇತವಾಗಿಯೂ ಬಿಂಬಿಸುತ್ತವೆ. ಇದರ ಹಣ್ಣುಗಳಲ್ಲಿ ವಿಷದ ಅಂಶ ಇರುವುದರಿಂದ, ಸುರಕ್ಷತೆಯ ದೃಷ್ಟಿಯಿಂದ ಅನೇಕರು ಮನೆಯ ಅಲಂಕಾರಕ್ಕೆ ಕೃತಕ ಮಿಸ್ಟಲ್‌ಟೋಗಳನ್ನು ಬಳಸುತ್ತಾರೆ.

ಗಮನಿಸಿ: ಈ ಲೇಖನದಲ್ಲಿನ ಮಾಹಿತಿಯು ವಿವಿಧ ಸಂಸ್ಕೃತಿಗಳ ನಂಬಿಕೆಗಳು, ಫೆಂಗ್ ಶೂಯಿ ಮತ್ತು ಜನಪದ ಸಂಪ್ರದಾಯಗಳನ್ನು ಆಧರಿಸಿದ್ದು, ಇವುಗಳಿಗೆ ವೈಜ್ಞಾನಿಕ ದೃಢೀಕರಣ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+