ಈ ಮರದ ಎಲೆಗಳು ಹೊರ ಹಾಕುತ್ತಿವೆ ಚಿನ್ನದ ಕಣ : ಸಸ್ಯ ಲೋಕದಲ್ಲೊಂದು ಅಚ್ಚರಿ

ಪ್ರಕೃತಿಯ ಗರ್ಭದಲ್ಲಿ ಅಡಗಿರುವ ರಹಸ್ಯಗಳು ಸದಾ ನಮ್ಮನ್ನು ಬೆರಗುಗೊಳಿಸುತ್ತವೆ. ಪ್ರಕೃತಿ ಅದೆಷ್ಟೋ ವೈಚಿತ್ರ್ಯಗಳನ್ನು ತನ್ನೊಡಲಲ್ಲಿ ಇರಿಸಿಕೊಂಡಿದೆ. ಇಂತಹದ್ದೇ ಒಂದು ನಂಬಲಸಾಧ್ಯವಾದ ವಿಸ್ಮಯವೊಂದು ಇದೀಗ ಬೆಳಕಿಗೆ ಬಂದಿದೆ. ದಟ್ಟ ಅರಣ್ಯದಲ್ಲಿರುವ ಸಾಮಾನ್ಯ ಮರಗಳ ಎಲೆಗಳ ಒಳಗೆ ಸೂಕ್ಷ್ಮಾತಿಸೂಕ್ಷ್ಮ ಚಿನ್ನದ ಕಣಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಮರದ ಎಲೆಗಳ ಮೇಲೆ ಚಿನ್ನ:

ಯುರೋಪ್‌ನ ಅತಿ ದೊಡ್ಡ ಚಿನ್ನದ ಗಣಿಗಾರಿಕೆ ಪ್ರದೇಶವಾದ ಉತ್ತರ ಫಿನ್‌ಲ್ಯಾಂಡ್‌ನ 'ಕಿತ್ತಿಲಾ' ಬಳಿ ಸಂಶೋಧನೆ ನಡೆಸುತ್ತಿದ್ದ ವಿಜ್ಞಾನಿಗಳಿಗೆ ಈ ಅಚ್ಚರಿಯ ಸತ್ಯ ತಿಳಿದುಬಂದಿದೆ. ಇಲ್ಲಿನ 'ನಾರ್ವೆ ಸ್ಪ್ರೂಸ್' ಜಾತಿಗೆ ಸೇರಿದ ಮರಗಳ ಎಲೆಗಳ ಮೇಲೆ ಘನ ರೂಪದ ಚಿನ್ನದ ಅತ್ಯಂತ ಸೂಕ್ಷ್ಮ ಕಣಗಳು ಪತ್ತೆಯಾಗಿವೆ. ಮರದ ಬೇರುಗಳು, ಸೂಕ್ಷ್ಮಜೀವಿಗಳು ಮತ್ತು ಭೂಗರ್ಭದ ರಾಸಾಯನಿಕ ಪ್ರಕ್ರಿಯೆಗಳ ನಡುವಿನ ನಿರಂತರ ಸಂಪರ್ಕದಿಂದಾಗಿ ಈ ವಿದ್ಯಮಾನ ನಡೆದಿದೆ ಎನ್ನುವುದು ಸಂಶೋಧಕರ ತರ್ಕ.

Tiny Gold Particles

ಮರಗಳು ಚಿನ್ನವನ್ನು ಸೃಷ್ಟಿಸುತ್ತವೆಯೇ?:

ವಿಜ್ಞಾನಿಗಳ ಪ್ರಕಾರ, ಮರಗಳು ಸ್ವತಃ ಚಿನ್ನವನ್ನು ಉತ್ಪಾದಿಸುತ್ತಿಲ್ಲ. ಭೂಗರ್ಭದ ಆಳದಲ್ಲಿ ಹುದುಗಿರುವ ಬಂಗಾರವನ್ನು ಹೊರತೆಗೆಯಲು ಗಣಿಗಾರಿಕೆ ಮೂಲಕ ಅಗೆಯಬೇಕಾಗುತ್ತದೆ. ಆದರೆ ಇಲ್ಲಿ ಹಾಗಲ್ಲ. ಇದು ಹೇಗೆ ಸಾಧ್ಯ ಎಂದು ನೋಡುವುದಾದರೆ ಭೂಮಿಯ ಆಳದಲ್ಲಿರುವ ಚಿನ್ನದ ನಿಕ್ಷೇಪಗಳ ಮೇಲ್ಭಾಗದಲ್ಲಿ ಬೆಳೆಯುವ ಈ ಮರಗಳು, ತಮ್ಮ ಬೇರುಗಳ ಮೂಲಕ ಅಂತರ್ಜಲವನ್ನು ಹೀರಿಕೊಳ್ಳುತ್ತವೆ. ಈ ಅಂತರ್ಜಲದಲ್ಲಿ ಕರಗಿರುವ ಚಿನ್ನದ ಅಂಶವೂ ಮರದ ದೇಹವನ್ನು ಪ್ರವೇಶಿಸುತ್ತದೆ.

ಮರಗಳ ಒಳಗೆ ಮತ್ತು ಬೇರುಗಳ ಸುತ್ತ ವಾಸಿಸುವ ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮಜೀವಿಗಳು ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವು ಚಿನ್ನದ ಸುತ್ತ ರಕ್ಷಣಾತ್ಮಕ ಪದರವನ್ನು ಸೃಷ್ಟಿಸುತ್ತವೆ. ಈ ಸೂಕ್ಷ್ಮ ಪರಿಸರದಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆಗಳಿಂದಾಗಿ, ಕರಗಿದ ರೂಪದಲ್ಲಿದ್ದ ಚಿನ್ನವು ಘನ ರೂಪದ ನ್ಯಾನೋ ಕಣಗಳಾಗಿ ಮಾರ್ಪಟ್ಟು ಎಲೆಗಳಲ್ಲಿ ಸಂಗ್ರಹಗೊಳ್ಳುತ್ತದೆ. ಈ ಕಣಗಳು ಮಾನವನ ತಲೆಗೂದಲಿಗಿಂತಲೂ ಸಾವಿರಾರು ಪಟ್ಟು ತೆಳುವಾಗಿದ್ದು, ಅತ್ಯಾಧುನಿಕ ಮೈಕ್ರೋಸ್ಕೋಪ್‌ಗಳ ಮೂಲಕ ಮಾತ್ರ ಇವುಗಳನ್ನು ನೋಡಲು ಸಾಧ್ಯವಾಗಿದೆ.

ಸಾವಿರಾರು ವರ್ಷಗಳ ಬಳಿಕ ಬಯಲಾಯ್ತು ಚಿನ್ನದ ನಿಧಿ; ಸೌದಿಯಲ್ಲಿ ಪತ್ತೆಯಾದ 100ಕ್ಕೂ ಹೆಚ್ಚು ಅಪರೂಪದ ಆಭರಣಗಳು!
ಸಾವಿರಾರು ವರ್ಷಗಳ ಬಳಿಕ ಬಯಲಾಯ್ತು ಚಿನ್ನದ ನಿಧಿ; ಸೌದಿಯಲ್ಲಿ ಪತ್ತೆಯಾದ 100ಕ್ಕೂ ಹೆಚ್ಚು ಅಪರೂಪದ ಆಭರಣಗಳು!

ಗಣಿಗಾರಿಕೆ ಕ್ಷೇತ್ರದಲ್ಲಿ ಹೊಸ ಕ್ರಾಂತಿ:

ಈ ಆವಿಷ್ಕಾರವು ಕೇವಲ ಒಂದು ಕುತೂಹಲವಾಗಿ ಉಳಿದಿಲ್ಲ. ಭವಿಷ್ಯದಲ್ಲಿ ಪರಿಸರ ಸ್ನೇಹಿ ಗಣಿಗಾರಿಕೆಗೆ ಇದು ದಾರಿದೀಪವಾಗಲಿದೆ ಎಂದು ವಿಜ್ಞಾನಿಗಳು ಭಾವಿಸಿದ್ದಾರೆ.

ನೈಸರ್ಗಿಕ ಸೂಚಕಗಳು: ಭೂಗರ್ಭದಲ್ಲಿ ಎಲ್ಲೆಲ್ಲಿ ಚಿನ್ನ ಅಥವಾ ಇತರೆ ಖನಿಜಗಳ ನಿಕ್ಷೇಪಗಳಿವೆ ಎಂಬುದನ್ನು ಪತ್ತೆಹಚ್ಚಲು ಈ ಮರಗಳು ನೈಸರ್ಗಿಕ ಸೂಚಕಗಳಾಗಿ ಕೆಲಸ ಮಾಡಬಲ್ಲವು.

ಪರಿಸರ ಸಂರಕ್ಷಣೆ: ಪ್ರಸ್ತುತ ಗಣಿಗಾರಿಕೆಗಾಗಿ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ಅಗೆದು ಡ್ರಿಲ್ಲಿಂಗ್ ಮಾಡಬೇಕಾಗುತ್ತದೆ. ಇದರಿಂದ ಪರಿಸರಕ್ಕೆ ಭಾರೀ ಹಾನಿಯಾಗುತ್ತದೆ. ಆದರೆ, ಇಲ್ಲಿ ಮರಗಳ ಎಲೆಗಳನ್ನು ವಿಶ್ಲೇಷಿಸುವ ಮೂಲಕವೇ ಭೂಮಿಯೊಳಗೆ ಚಿನ್ನವಿದೆ ಎನ್ನುವುದನ್ನು ಪತ್ತೆಹಚ್ಚಬಹುದು.

ಕಡಿಮೆ ವೆಚ್ಚ: ಈ ತಂತ್ರಜ್ಞಾನದಿಂದ ಗಣಿಗಾರಿಕೆ ಸಮೀಕ್ಷೆಯ ವೆಚ್ಚ ಗಣನೀಯವಾಗಿ ಕಡಿಮೆಯಾಗುವುದು. ದುರ್ಗಮ ಪ್ರದೇಶಗಳಲ್ಲೂ ಸುಲಭವಾಗಿ ಸಂಶೋಧನೆ ನಡೆಸಬಹುದು.

ಹೆದ್ದಾರಿ ನಿರ್ಮಾಣದ ಸಮಯದಲ್ಲಿ ಮೇಲೆದ್ದು ಬಂತು ಚಿನ್ನ, ಬೆಳ್ಳಿ !ಯಾವ ಕಾಲದ ಖಜಾನೆಯೋ ಇದು
ಹೆದ್ದಾರಿ ನಿರ್ಮಾಣದ ಸಮಯದಲ್ಲಿ ಮೇಲೆದ್ದು ಬಂತು ಚಿನ್ನ, ಬೆಳ್ಳಿ !ಯಾವ ಕಾಲದ ಖಜಾನೆಯೋ ಇದು

ಈ ಹಿಂದೆಯೂ ನಡೆದಿತ್ತು ಇಂತಹದ್ದೇ ಸಂಶೋಧನೆ:

ಸಸ್ಯಗಳಲ್ಲಿ ಚಿನ್ನದ ಕಣಗಳು ಪತ್ತೆಯಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಸಂಶೋಧನೆಯೊಂದರಲ್ಲಿ, ಚಿನ್ನದ ನಿಕ್ಷೇಪಗಳ ಮೇಲ್ಭಾಗದಲ್ಲಿ ಬೆಳೆದಿದ್ದ ನೀಲಗಿರಿ ಮರದ ಎಲೆಗಳಲ್ಲೂ ಚಿನ್ನದ ಕಣಗಳು ಪತ್ತೆಯಾಗಿದ್ದವು. ಆದರೆ, ಫಿನ್‌ಲ್ಯಾಂಡ್‌ನಲ್ಲಿ ಕರಗಿದ ಚಿನ್ನವನ್ನು ಘನ ಕಣಗಳನ್ನಾಗಿ ಪರಿವರ್ತಿಸುವಲ್ಲಿ ಸೂಕ್ಷ್ಮಜೀವಿಗಳು ವಹಿಸಿದ ಪಾತ್ರ ವಿಜ್ಞಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ವಿಜ್ಞಾನಿಗಳು ಹೇಳುವುದೇನು ?:

"ಚಿನ್ನವು ಸಸ್ಯಗಳಿಗಾಗಲಿ ಅಥವಾ ಪ್ರಾಣಿಗಳಿಗಾಗಲಿ ಯಾವುದೇ ಜೈವಿಕ ಪ್ರಯೋಜನವನ್ನು ನೀಡುವುದಿಲ್ಲ. ಆದರೂ ಪ್ರಕೃತಿಯು ಇಂತಹ ವಿಸ್ಮಯವನ್ನು ಸೃಷ್ಟಿಸಿರುವುದು ನಿಜಕ್ಕೂ ಅದ್ಭುತ. ಕಾಡುಗಳು ಕೇವಲ ಮರಗಳ ಸಮೂಹವಲ್ಲ, ಭೂಮಿಯ ಕೆಳಗೆ ನಿರಂತರವಾಗಿ ಜೈವಿಕ-ರಾಸಾಯನಿಕ ಬದಲಾವಣೆಗಳನ್ನು ತರುವ ಸಜೀವ ವ್ಯವಸ್ಥೆ ಎಂಬುದಕ್ಕೆ ಇದೇ ಸಾಕ್ಷಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+