Gruhalakshmi Scheme: Airtel ಸಿಮ್ ಬಳಸುವವರಿಗೆ ಗ್ರಹಲಕ್ಷ್ಮಿ ಖೋತಾನ? ಏನಿದು ಸತ್ಯಾ ಸತ್ಯತೆ?
'ಏರ್‌ಟೆಲ್ ಸಿಮ್ ಇದ್ದರೆ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಖೋತಾ?' ಎಂಬ ಶಿರ್ಷಿಕೆಯಡಿಯಲ್ಲಿ ಕೆಲವೊಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎರ್‌ಟೆಲ್ ಸಿಮ್ ಬಳಸುವ ಗೃಹಲಕ್ಷ್ಮಿ ಫಲಾನುಭವಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ಇದು ಏರ್‌ಟೆಲ್ ಸಿಮ್ ಬಳಸೋರಿಗೆ ಅಲ್ಲ. ಎರ್‌ಟೆಲ್ ಯುಪಿಐ ಬ್ಯಾಂಕ್ ಖಾತೆ ಬಳಸುವವರಿಂದ ಯೋಜನೆಯ ದುರುಪಯೋಗವಾಗುತ್ತಿದ್ದು, ಅದನ್ನು ತಡೆಗಟ್ಟಲು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದು ಎಲ್ಲಿಯೋ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ.
ಇತ್ತೀಚೆಗೆ ಗೃಹಲಕ್ಷ್ಮಿ ಸೇರಿ ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ದುರುಪಯೋಗವಾಗುತ್ತಿದ್ದು, ಇದನ್ನು ಕಟ್ಟು ನಿಟ್ಟಾಗಿ ತಡೆಯಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ. ಕರ್ನಾಟಕದ ಮತದಾರರಿಗೆ ಮಾತ್ರ ಯೋಜನೆಯ ಫಲ ದೊರೆಯಬೇಕಾಗಿದ್ದು, ಕೆವೈಸಿ ಸೇರಿ ಸೂಕ್ತ ದಾಖೆಲಗಳ ಮರುಪರಿಶೀಲನೆ ನಡೆಯುತ್ತಿದೆ. ಈ ಬಗ್ಗೆ ಡಿಕೆಶಿ ಅಧಿಕಾರಗಳೊಂದಿಗೆ ಸಭೆ ನಡೆಸುವಾಗ, ಕೆಲವರು ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗುವ ಪ್ರಕ್ರಿಯೆಯಲ್ಲಿ ಕೆಲವು ಅಕ್ರಮಗಳು ಬೆಳಕಿಗೆ ಬಂದಿವೆ. ಅದರಲ್ಲಿಯೂ ಏರ್‌ಟೆಲ್ ಆ್ಯಪ್ ಬ್ಯಾಂಕ್ ಮೂಲಕ ನಡೆಯುತ್ತಿರುವ ವಹಿವಾಟುಗಳಲ್ಲಿ ಲೋಪಗಳು ಹೆಟ್ಟಿವೆ, ಎಂಬುದನ್ನು ಗಮನಕ್ಕೆ ತಂದಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಎಂ ಆದೇಶಿಸಿದ್ದಾರೆಯೋ ಹೊರತು, ಏರ್‌ಟೆಲ್ ಸಿಮ್ ಬಳಸುವ ಎಲ್ಲರಿಗೂ ಈ ಯೋಜನೆ ರದ್ದಾಗುವುದಿಲ್ಲ. ಸಿಎಂ ಸೂಚನೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಆದರೆ, ಯುಪಿಐ ಖಾತೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅಕ್ರಮ ಪ್ರಕರಣಗಳಿಗೆ ಮಾತ್ರ ಸೂಕ್ತ ಕಡಿವಾಣ ಬೀಳಲಿದೆ.
ಏನಿದು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್?
ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಎಂಬುದು ದೈನಂದಿನ ವಹಿವಾಟುಗಳಿಗೆ ಬಳಸಬಹುದಾದ ಸುರಕ್ಷಿತ ಎರಡನೇ ಬ್ಯಾಂಕ್ ಖಾತೆ. ಏರ್‌ಟೆಲ್ ಸಿಮ್ ಬಳಕೆದಾರರು ತಮ್ಮ ಮೊಬೈಲ್ ಆ್ಯಪ್ ಮೂಲಕವೇ ಡಿಜಿಟಲ್ ಆಗಿ ಈ ಖಾತೆಯನ್ನು ಅತ್ಯಂತ ಸುಲಭವಾಗಿ ತೆರೆಯಲು ಅವಕಾಶವಿದೆ. ಇದೊಂದು ಪೂರ್ಣ ಪ್ರಮಾಣದ ಭೌತಿಕ ಬ್ಯಾಂಕ್ ಅಲ್ಲದಿದ್ದರೂ, ಯುಪಿಐ ಮತ್ತು ಸಣ್ಣಪುಟ್ಟ ಪಾವತಿಗಳಿಗಾಗಿ ಇದನ್ನು ಬಳಸಲಾಗುತ್ತದೆ.

ಆದರೆ, ಕೆಲವು ವಂಚಕರು ಏರ್‌ಟೆಲ್ ಆ್ಯಪ್‌ನಲ್ಲಿ ಯುಪಿಐ ಖಾತೆಗಳನ್ನು ತೆಗೆದು, ಗೃಹಲಕ್ಷ್ಮಿ ಹಣವನ್ನು ಜಮಾ ಮಾಡಿಸಿಕೊಳ್ಳುತ್ತಿದ್ದಾರೆ ಎಂಬುವುದು ವಿಧಾನಸೌಧದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಬಹಿರಂಗವಾಗಿದೆ.
ಅರ್ಹರಿಗೆ ತಪ್ಪಲ್ಲ, ಅನರ್ಹರಿಗೆ ಬಿಡಲ್ಲ: ಡಿಕೆಶಿ
"ಒಬ್ಬೇ ಒಬ್ಬ ಅರ್ಹ ಫಲಾನುಭವಿಗೆ ತೊಂದರೆಯಾಗಬಾರದು, ಆದರೆ ಅನರ್ಹರು ಮತ್ತು ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರಿಗೆ ಬ್ರೇಕ್ ಹಾಕಲೇಬೇಕು" ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹಲವು ಮಹಿಳೆಯರು ಬ್ಯಾಂಕ್ ಸಾಲ ಪಡೆದಿರುತ್ತಾರೆ. ಗೃಹಲಕ್ಷ್ಮಿ ಹಣ ಖಾತೆಗೆ ಬಿದ್ದ ತಕ್ಷಣ ಆ ಹಣ ಸಾಲದ ಕಂತಿಗೆ ಜಮೆಯಾಗಿ ಬಿಡುತ್ತದೆ. ಇದನ್ನು ತಪ್ಪಿಸಲು ಫಲಾನುಭವಿಗಳು ತಮ್ಮ ಖಾತೆಯನ್ನು ಬದಲಾಯಿಸಿರುತ್ತಾರೆ. ಇಂತಹ ನೈಜ ಸಮಸ್ಯೆಗಳಿರುವ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮೃತಪಟ್ಟವರ ಖಾತೆಗೂ ಹಣ ಜಮೆ: ಎಜಿ ವರದಿಯ ಆಘಾತಕಾರಿ ಅಂಶಗಳು
ಆಡಿಟರ್ ಜನರಲ್ (ಎಜಿ) ವರದಿಯ ಪ್ರಕಾರ, ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಮಟ್ಟದ ಲೋಪಗಳು ಪತ್ತೆಯಾಗಿವೆ. ಒಂದೇ ಖಾತೆಯಲ್ಲಿ ಹಲವು ಫಲಾನುಭವಿಗಳು ಹಣ ಪಡೆಯುತ್ತಿದ್ದಾರೆ. ಮೂರು ಲಕ್ಷ ಕಂತುಗಳಲ್ಲಿ ಬರೋಬ್ಬರಿ 60 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಹೀಗೆ ದುರ್ಬಳಕೆಯಾಗಿದೆ. ಒಬ್ಬರೇ ಹಲವು ಖಾತೆಗಳನ್ನು ನೋಂದಾಯಿಸಿಕೊಂಡಿರುವುದು ಹಾಗೂ ಮೃತಪಟ್ಟಿರುವ ಫಲಾನುಭವಿಗಳಿಗೂ ಗೃಹಲಕ್ಷ್ಮಿ ಹಣ ಹೋಗುತ್ತಿರುವುದು ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸಿದೆ.
ಇದಲ್ಲದೆ, ನಮ್ಮ ರಾಜ್ಯದ ಯೋಜನೆಗಳು ನಮ್ಮ ರಾಜ್ಯದ ಫಲಾನುಭವಿಗಳಿಗೆ ಮಾತ್ರ ಸಿಗಬೇಕು. ಆದರೆ, ಇತರೆ ರಾಜ್ಯಗಳಲ್ಲಿರುವ ಖಾತೆಗಳಿಗೂ ಹಣ ಹೋಗುತ್ತಿರುವುದು ಪತ್ತೆಯಾಗಿದ್ದು, ಇವುಗಳಿಗೆ ತಕ್ಷಣವೇ ತಡೆ ಹಾಕಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಾಯ್ಸ್ ಮೆಸೇಜ್ ವ್ಯವಸ್ಥೆ
ಇನ್ನು ಮುಂದೆ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾದ ತಕ್ಷಣ ಅವರ ಮೊಬೈಲಿಗೆ ವಾಯ್ಸ್ ಮೆಸೇಜ್ ಬರುವ ಮೂಲಕ ಖಚಿತಪಡಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಗೃಹಜ್ಯೋತಿ ಯೋಜನೆಯ ಮಾದರಿಯಲ್ಲಿಯೇ ಇತರ ಯೋಜನೆಗಳಲ್ಲೂ ಮೊದಲೇ ಎಚ್ಚರಿಕೆ ವಹಿಸಿದ್ದರೆ ಈ ಮಟ್ಟದ ದುರುಪಯೋಗ ತಪ್ಪಿಸಬಹುದಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಕೇಂದ್ರದ ನೀತಿಗಳಿಂದಾಗಿ ಬೆಲೆ ಏರಿಕೆ ಹಾಗೂ ತಲಾ ಆದಾಯ ಕುಸಿಯುತ್ತಿರುವ ಈ ಸಂದರ್ಭದಲ್ಲಿ, ಅನುಕೂಲಸ್ಥರು ಯಾರಾದರೂ ಸ್ವಯಂಪ್ರೇರಿತವಾಗಿ ಗ್ಯಾರಂಟಿ ಯೋಜನೆಗಳನ್ನು ಬಿಟ್ಟುಕೊಟ್ಟರೆ, ಅಂಥವರನ್ನು ಪ್ರೋತ್ಸಾಹಿಸಲು ಸರ್ಕಾರ ನಿರ್ಧರಿಸಿದೆ. ಇ-ಕೆವೈಸಿ ಹಾಗೂ ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳ ಕುರಿತಂತೆಯೂ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.














Click it and Unblock the Notifications