ಅಗಲಿದ ಅಹ್ಮದ್ ಪಟೇಲ್ ಸೇವೆಯನ್ನು ಸ್ಮರಿಸಿದ ಕಾಂಗ್ರೆಸ್

ನವದೆಹಲಿ, ನವೆಂಬರ್.25: ಗುಜರಾತ್ ನ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರು ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭವಾಗಿದ್ದರು. ನಮ್ಮ ಪಕ್ಷದ ಅಮೂಲ್ಯವಾದ ಆಸ್ತಿ ಎಂದು ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ನಿಧನಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸಿದ ನಾಯಕನನ್ನು ರಾಹುಲ್ ಗಾಂಧಿಯವರು ಸ್ಮರಿಸಿಕೊಂಡಿದ್ದಾರೆ.

"ಇದು ನಮ್ಮ ಪಾಲಿಗೆ ದುಃಖದ ದಿನ. ಅಹ್ಮದ್ ಪಟೇಲ್ ಅವರು ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭವಾಗಿದ್ದರು. ಕಾಂಗ್ರೆಸ್ಸಿನ ಕಷ್ಟದ ಸಮಯದಲ್ಲಿ ಪಕ್ಷಕ್ಕಾಗಿಯೇ ಉಸಿರಾಡಿದ ಪಕ್ಷಕ್ಕಾಗಿ ಶ್ರಮವಹಿಸಿ ದುಡಿದ ಅಮೂಲ್ಯ ಆಸ್ತಿ ಎನಿಸಿದ್ದಾರೆ. ನಾವು ಅವರನ್ನು ತುಂಬಾ ಸ್ಮರಿಸಿಕೊಳ್ಳುತ್ತೇವೆ. ಅಹ್ಮದ್ ಪಟೇಲ್ ಅವರ ಪುತ್ರ ಫೈಜಲ್ ಮತ್ತು ಪುತ್ರಿ ಮಮ್ತಾಜ್ ಸೇರಿದಂತೆ ಅವರ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

AICC Chief Sonia Gandhi And Rahul Gandhi Deep Condolences For Ahmad Patel Death


ಸೋನಿಯಾ ಗಾಂಧಿ ಸಂತಾಪ:

"ಅಹ್ಮದ್ ಪಟೇಲ್ ಅವರ ಸಾವಿನಿಂದ ತುಂಬಲಾರದ ನಷ್ಟವಾಗಿದ್ದು, ಆಪ್ತ ಒಡನಾಡಿ, ನಿಷ್ಠಾವಂತ ಸಹೋದ್ಯೋಗಿ ಹಾಗೂ ಸ್ನೇಹಿತನನ್ನು ಕಳೆದುಕೊಂಡಂತೆ ಆಗಿದೆ" ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ. ತನ್ನ ಇಡೀ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕಾಗಿ ಮುಡಿಪಾಗಿಟ್ಟ ಸಹೋದ್ಯೋಗಿಯನ್ನು ನಾವು ಕಳೆದುಕೊಂಡಿದ್ದೇವೆ. ಅವರ ಪ್ರಾಮಾಣಿಕತೆ, ವಸ್ತುನಿಷ್ಠತೆ, ಕರ್ತವ್ಯದಲ್ಲಿ ತೋರುವ ಬದ್ಧತೆಯ ಲಕ್ಷಣಗಳು ಅಹ್ಮದ್ ಪಟೇಲೆ ಎಲ್ಲರಂತೆ ಅಲ್ಲ ಎನ್ನುವುದನ್ನು ತೋರುತ್ತಿದ್ದವು.

ಗುಜರಾತ್ ನ ರಾಜ್ಯಸಭಾ ಸದಸ್ಯರಾಗಿದ್ದ ಅಹ್ಮದ್ ಪಟೇಲ್ ಅವರಿಗೆ ಬಹುಅಂಗಾಂಗ ವೈಫಲ್ಯ ಸಮಸ್ಯೆಯಿದ್ದು, ಇತ್ತೀಚಿಗೆ ಕೊವಿಡ್-19 ಸೋಂಕು ತಗುಲಿರುವ ಪತ್ತೆ ದೃಢಪಟ್ಟಿತ್ತು. ಈ ಹಿನ್ನೆಲೆ ಗುರುಗ್ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬುಧವಾರ ಬೆಳಗಿನ ಜಾವ 3.30ರ ವೇಳೆಗೆ ಮೃತಪಟ್ಟಿರುವ ಬಗ್ಗೆ ಪುತ್ರ ಫೈಜಲ್ ಮಾಹಿತಿ ನೀಡಿದ್ದಾರೆ. "ನಮ್ಮ ತಂದೆ ಅಹ್ಮದ್ ಪಟೇಲ್ ಅವರು 25/11/2020ರ ಬುಧವಾರ ಬೆಳಗಿನ ಜಾವ 3.30ರ ವೇಳೆ ನಮ್ಮನ್ನೆಲ್ಲ ಅಗಲಿ ಹೋಗಿದ್ದಾರೆ ಎಂದು ತಿಳಿಸುವುದಕ್ಕೆ ವಿಷಾದಿಸುತ್ತೇನೆ. ಕಳೆದ ಒಂದು ತಿಂಗಳ ಹಿಂದೆ ಅವರಿಗೆ ಕೊರೊನಾವೈರಸ್ ತಗುಲಿರುವುದು ದೃಢಪಟ್ಟಿದ್ದು, ಅಂದಿನಿಂದ ಅವರ ಆರೋಗ್ಯ ಬಹಳಷ್ಟು ಹದಗೆಟ್ಟಿತ್ತು. ಅವರ ಆತ್ಮಕ್ಕೆ ಅಲ್ಲಾ ಶಾಂತಿ ನೀಡಲಿ" ಎಂದು ಪುತ್ರ ಫೈಜಲ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+