ರಫೇಲ್ ಒಪ್ಪಂದಕ್ಕೆ ಆಕ್ಷೇಪ, ಕಾಂಗ್ರೆಸ್ ಕಡೆಗೆ ಬಾಣ ತಿರುಗಿಸಿದ ಸಚಿವೆ

ನವದೆಹಲಿ, ಜುಲೈ 20: ಆಗಿನ ರಕ್ಷಣಾ ಸಚಿವರು ಸಹಿ ಮಾಡಿದ ಒಪ್ಪಂದದ ಪ್ರಕಾರ ಮಾಹಿತಿಯ ರಹಸ್ಯ ಕಾಪಾಡಿಕೊಳ್ಳಬೇಕು. ಜೆಟ್ ನ ಮೌಲ್ಯವನ್ನು ಬಹಿರಂಗ ಮಾಡುವಂತಿಲ್ಲ ಎಂದು ತುಂಬ ಸ್ಪಷ್ಟವಾಗಿ ಒಪ್ಪಂದದಲ್ಲಿ ನಮೂದಿಸಲಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದರು.

ರಫೇಲ್ ಒಪ್ಪಂದದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎತ್ತಿದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳ ವರದಿಯನ್ನು ಉದಾಹರಣೆಯಾಗಿ ನೀಡಿದರು. ಒಂದು ವೇಳೆ ಒಪ್ಪಂದದ ರಹಸ್ಯ ಬಯಲು ಮಾಡಿದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಫ್ರೆಂಚ್ ಅಧ್ಯಕ್ಷ ಹೇಳಿದ್ದನ್ನು ನೆನಪಿಸಿದರು.

Agreement clearly mentions the value of the jets cannot be disclosed, defence minister says

ಈ ಹಿಂದಿನ ರಕ್ಷಣಾ ಸಚಿವರ ಹೆಸರಿನ ಪ್ರಸ್ತಾವ ಮಾಡಿದ್ದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ, ಸಚಿವರು ತಮ್ಮ ವಾದಕ್ಕೆ ಸಮಜಾಯಿಷಿ ನೀಡುವಂಥ ದಾಖಲೆ ನೀಡಬೇಕು ಎಂದು ಹೇಳಿದರು. ಆಗ ನಿರ್ಮಲಾ ಸೀತಾರಾಮನ್, ಈಗಾಗಲೇ ಸಾಕ್ಷ್ಯ ನೀಡಿದ್ದೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+