ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಎಪಿ ಕಾರ್ಯಕರ್ತೆ, ಲೈಂಗಿಕ ಕಿರುಕುಳ ಸಹಿಸಲಾರದೆ ಆತ್ಮಹತ್ಯೆ

By Mahesh
|
Google Oneindia Kannada News

ನವದೆಹಲಿ, ಜುಲೈ 20: ದೆಹಲಿಯ ಹೊರ ವಲಯದ ನೆರೆಲಾ ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷದ ಮಹಿಳಾ ಕಾರ್ಯಕರ್ತೆಯೊಬ್ಬರು ಮಂಗಳವಾರ ತಡರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಕ್ಷದ ಕಾರ್ಯಕರ್ತರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆಮ್ ಆದ್ಮಿ ಪಕ್ಷದ ಮುಖಂಡರೊಬ್ಬರನ್ನು ನಂಬಿ ಪಕ್ಷ ಸೇರಿದ್ದ ಮಹಿಳಾ ಕಾರ್ಯಕರ್ತೆ, ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮಂಗಳವಾರ ನೆರೆಲಾದಲ್ಲಿರುವ ತನ್ನ ಮನೆಯಲ್ಲಿ ವಿಷ ಸೇವಿಸಿದರು. ತಕ್ಷಣ ಆಕೆಯನ್ನು ಎಲ್ ಎನ್ ಜೆಪಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.[ಅಕ್ರಮ ಸಂಬಂಧ ಆರೋಪ, ಕುಮಾರ್ ವಿಶ್ವಾಸ್‌ಗೆ ನೋಟಿಸ್]

AAP

ರಮೇಶ್ ವಾಧ್ವಾ ಎಂಬ ಆಪ್ ಮುಖಂಡ ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತ ಕಾರ್ಯಕರ್ತೆ ಕಳೆದ ತಿಂಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿದ್ದ ಪೊಲೀಸರು ನಂತರ ಬಿಡುಗಡೆ ಮಾಡಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ವಿಷಯ ತಿಳಿದ ಮೇಲೆ ಸಂತ್ರಸ್ತ ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾದರು.[ಕೇಜ್ರಿ ಟೀಕಿಸಿ, ಮೋದಿ ಹೊಗಳಿದ 'ಎಎಪಿ' ಕುಮಾರ]

ಎಎಪಿ ಹೊಣೆ ಹೊರಬೇಕಿದೆ: ಆಮ್ ಆದ್ಮಿ ಪಕ್ಷದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ಕಿರುಕುಳ ಪ್ರಕರಣಗಳು ಕೇಳೀ ಬರುತ್ತಿವೆ. ಕಾರ್ಯಕರ್ತೆಯ ಸಾವಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಶಾಸಕ ಶರದ್ ಚೌಹಾನ್ ಹಾಗೂ ರಮೇಶ್ ವಾದ್ವಾ ಎಲ್ಲರೂ ಕಾರಣ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಸತೀಶ ಉಪಾಧ್ಯಾಯ ಆಪಾದಿಸಿದ್ದಾರೆ.[ಎಎಪಿಯ ಆಶಿಷ್ ವಿರುದ್ಧ ಎಫ್ ಐಆರ್]

ಆದರೆ, ಆರೋಪಿಗೂ ಪಕ್ಷಕ್ಕೂ ಸಂಬಂಧವಿಲ್ಲ. ಶಾಸಕರ ಹೆಸರು ಆರೋಪ ಪಟ್ಟಿಯಲ್ಲಿ ಇಲ್ಲ ಎಂದು ಎಎಪಿ ವಕ್ತಾರ ದೀಪಕ್ ಪ್ರತಿಕ್ರಿಯಿಸಿದ್ದಾರೆ. (ಪಿಟಿಐ)

English summary
A woman activist of AAP allegedly committed suicide in Narela area of outer Delhi today with her family members claiming that she had gone into depression after her alleged molester, a party colleague, was released on bail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X