ಎರಡು ವೋಟರ್ ಐಡಿ: ಗೌತಮ್ ಗಂಭೀರ್ ವಿರುದ್ಧ ಕ್ರಿಮಿನಲ್ ದೂರು
ನವದೆಹಲಿ, ಏಪ್ರಿಲ್ 26: ಪೂರ್ವ ದೆಹಲಿಯ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯ ಕಣದಲ್ಲಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ವಿರುದ್ಧ ಆಮ್ ಆದ್ಮಿ ಪಕ್ಷ ಕ್ರಿಮಿನಲ್ ದೂರು ನೀಡಿದೆ.
"ಗೌತಮ್ ಗಂಭೀರ್ ಅವರು ಎರಡು ವೋಟರ್ ಐಡಿಯನ್ನು ಹೊಂದಿದ್ದು, ಇದು ಕ್ರಿಮಿನಲ್ ಪ್ರಕರಣವಾಗಿದೆ. ಆದ್ದರಿಂದ ದಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ, ಅವರ ಸ್ಪರ್ಧೆಗೆ ತಡೆ ನೀಡಬೇಕು, ಅವರನ್ನು ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು" ಎಂದು ಎಎಪಿ ನಾಯಕಿ ಅತೀಶಿ ಆಗ್ರಹಿಸಿದ್ದಾರೆ.

ದೆಹಲಿಯ ಟಿಸ್ ಹಜಾರಿ ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಎಎಪಿ ಮುಖಂಡರು ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ಬಿಜೆಪಿ ಸೇರಿದ ಗೌತಮ್ ಗಂಭೀರ್ ಅವರನ್ನು ಬಿಜೆಪಿ ದೆಹಲಿ ಪೂರ್ವ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಕೇಂದ್ರಾಡಳಿತ ಪ್ರದೇಶವಾದ ರಾಜಧಾನಿ ದೆಹಲಿ ಒಟ್ಟು ಏಳು ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಮೇ 12 ರಂದು ಇಲ್ಲಿ ಚುನಾವಣೆ ನಡೆಯಲಿದೆ.












Click it and Unblock the Notifications