ವಿಡಿಯೋ: ಶಿವಭಕ್ತರ ಗೂಂಡಾಗಿರಿಗೆ ಕಾರು ಜಖಂ

ನವದೆಹಲಿ, ಆಗಸ್ಟ್ 08: ಶಿವಭಕ್ತರ ಗುಂಪೊಂದು ದೆಹಲಿಯ ಮೋತಿ ನಗರದಲ್ಲಿ ಕಾರೊಂದರ ಮೇಲೆ ದಾಳಿ ಮಾಡಿ ದೊಣ್ಣೆ, ಕಬ್ಬಿಣದ ಸರಳುಗಳಿಂದ ಹೊಡೆದು ಜಖಂಗೊಳಿಸಿದೆ.

'ಕನ್ವರಿಯಾ' ಎಂದು ಕರೆಯುವ ಶಿವಭಕ್ತರ ಗುಂಪಿನ ಒಬ್ಬ ವ್ಯಕ್ತಿಗೆ ಕಾರು ತಾಗಿದ್ದಕ್ಕೆ ಕಾರಿನಲ್ಲಿದ್ದ ದಂಪತಿಯೊಂದಿಗೆ ವಾಗ್ವಾದ ನಡೆಸಿದ ಕನ್ವರಿಯಾಗಳು ಆ ನಂತರ ದೊಣ್ಣೆ, ಕಬ್ಬಿಣದ ಸರಳುಗಳಿಂದ ಹೊಡೆದು ಕಾರನ್ನು ಸಂಪೂರ್ಣ ಜಖಂ ಗೊಳಿಸಿದ್ದಾರೆ. ಅಲ್ಲದೆ ಎಲ್ಲರೂ ಸೇರಿ ಕಾರನ್ನು ತಳ್ಳಿ ಕೆಡವಿದ್ದಾರೆ.

ಕನ್ವರಿಯಾಗಳು ಕಾರಿನ ಮೇಲೆ ದಾಳಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಘಟನೆಯ ಬಗ್ಗೆ ಬಗೆ -ಬಗೆ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

A group of kanwariyas vandalise a car in Delhi

ಕಾರು ಜಖಂ ಮಾಡಿ ಸುಮ್ಮನಾಗದ ಕನ್ವರಿಯಾಗಳು, ಕಾರಿಗೆ ಬೆಂಕಿ ಹಚ್ಚಲು ಸಹ ಪ್ರಯತ್ನಿಸಿದ್ದಾರೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ದಂಪತಿಗಳಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಆ ದಂಪತಿ ಈವರೆಗೆ ಪೊಲೀಸರಿಗೆ ದೂರು ನೀಡಿಲ್ಲ.

ದೆಹಲಿ ಪೊಲೀಸರೆ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+