ಸಿಬಿಐನಲ್ಲಿ 974 ವಿವಿಧ ಉದ್ಯೋಗ ಖಾಲಿ : ಕೇಂದ್ರ ಸರ್ಕಾರ
ನವದೆಹಲಿ, ಡಿ. 18: ದೇಶದ ಪ್ರಮುಖ ತನಿಖಾ ಸಂಸ್ಥೆಯಾದ ಕೇಂದ್ರೀಯ ತನಿಖಾ ದಳದಲ್ಲಿ 974 ವಿವಿಧ ಉದ್ಯೋಗಗಳು ಖಾಲಿ ಇವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಸ್ತುತ ಇರುವ ಸಿಬ್ಬಂದಿಯನ್ನು ಸೂಕ್ತವಾಗಿ ನಿಯೋಜಿಸಿಲಾಗುತ್ತಿದೆ. ಅವರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ ಕಾರಣ ಸಿಬ್ಬಂದಿ ಕೊರತೆಯು ಕಾರ್ಯನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. [ಹೈಕೋರ್ಟ್ ನಲ್ಲಿ ಟೈಪಿಸ್ಟ್ ಹುದ್ದೆ ಖಾಲಿ]

ಈ ಕುರಿತು ಕೇಳಿದ ಲಿಖಿತ ಪ್ರಶ್ನೆಯೊಂದಕ್ಕೆ ಲೋಕಸಭೆಯಲ್ಲಿ ಸಚಿವರು ಉತ್ತರ ನೀಡಿದ್ದಾರೆ. ಪ್ರಸ್ತುತ ಕೇಂದ್ರೀಯ ತನಿಖಾ ದಳಕ್ಕೆ 6,676 ಹುದ್ದೆಗಳು ಮಂಜೂರಾಗಿವೆ. ಪ್ರಸ್ತುತ 5,702 ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. [ಹಾಸನ ಕಂದಾಯ ಇಲಾಖೆಯಲ್ಲಿ ಲಭ್ಯ ಹುದ್ದೆ]
- ಕಾರ್ಯನಿರ್ವಾಹಕರ ವರ್ಗಕ್ಕೆ 4,544 ಹುದ್ದೆಗಳು ಮಂಜೂರಾಗಿದ್ದು, 3,891 ಸ್ಥಾನ ಭರ್ತಿಯಾಗಿವೆ. ಇನ್ನೂ 653 ಹುದ್ದೆಗಳು ಖಾಲಿ ಇವೆ.
- ಕಾನೂನು ವರ್ಗದಲ್ಲಿ 340 ಹುದ್ದೆಗಳು ಮಂಜೂರಾಗಿದ್ದರೂ 77 ಸ್ಥಾನಗಳು ಮಾತ್ರ ಭರ್ತಿಯಾಗಿವೆ.
- ತಾಂತ್ರಿಕ ವರ್ಗದಲ್ಲಿ 162 ಹುದ್ದೆಗಳು ಮಂಜೂರಾಗಿದ್ದರೂ 97 ಸ್ಥಾನಗಳು ಭರ್ತಿಯಾಗಿವೆ. [ಉಡುಪಿ ಕಂದಾಯ ಇಲಾಖೆಯಲ್ಲಿ ಹುದ್ದೆಗಳು]
- ಸಚಿವ ವರ್ಗದಲ್ಲಿ ಮಂಜಾರಾದ ಹುದ್ದೆಗಳು 1,560 ಹಾಗೂ ಪ್ರಸ್ತುತ ಭರ್ತಿಯಾಗಿರುವ ಹುದ್ದೆ 1,405 ಮಾತ್ರ.
- ಕ್ಯಾಂಟೀನ್ ಸಿಬ್ಬಂದಿ ವರ್ಗದಲ್ಲಿ 70 ಹುದ್ದೆಗಳ ಮಂಜೂರಿ ಇದ್ದರೂ 46 ಸ್ಥಾನಗಳು ಮಾತ್ರ ಭರ್ತಿಯಾಗಿವೆ. [ಕೆಪಿಸಿಎಲ್ ನಲ್ಲಿ 359 ಹುದ್ದೆಗಳು ಖಾಲಿ]












Click it and Unblock the Notifications