ಮೋದಿ ವಿರುದ್ಧ ಮತ್ತೆ ಹಿರಿಯ ಸಾಹಿತಿ ಗುಡುಗು

90 percent Indians oppose BJP PM nominee Narendra Modi tweets Javed Akhtar,
ನವದೆಹಲಿ, ನ. 7: ಖ್ಯಾತ ಸಾಹಿತಿ, ಸಂಸದ ಜಾವೇದ್ ಅಖ್ತರ್ ಅವರು ಮೋದಿ ವಿರುದ್ಧ ಮತ್ತೆ ಗುಡುಗಿದ್ದಾರೆ. 'ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಶೇ. 90ರಷ್ಟು ಜನರು ಒಪ್ಪಿಕೊಳ್ಳುತ್ತಾರೆ' ಎಂದು ಸಾಹಿತಿ, ರಾಜ್ಯಸಭೆ ಸದಸ್ಯ ಜಾವೇದ್ ಅಖ್ತರ್ ಗುರುವಾರ ಟ್ವೀಟ್ ಮಾಡಿದ್ದಾರೆ.

ಮೋದಿ ವಿರುದ್ಧ ಪದೇ ಪದೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ಬಂದಿರುವ ಪದ್ಮಭೂಷಣ ವಿಜೇತ ಅಖ್ತರ್, ಇದೀಗ ಮತ್ತೂ ಒಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

'ಮೋದಿ ಅವರು ದೇಶ ವಿರೋಧಿ ಚಟುವಟಿಗಳಲ್ಲಿ ತೊಡಗಿರುವುದನ್ನು ಶೇ. 90 ರಷ್ಟು ಜನರು ಒಪ್ಪಿಕೊಳ್ಳುತ್ತಾರೆ. ಅಲ್ಲದೆ ದೇಶದ ಪ್ರಧಾನಿಯಾಗಿ ಮೋದಿ ಅವರನ್ನು ನೋಡಲು ಜನತೆ ಇಷ್ಟಪಡುವುದಿಲ್ಲ. ಆದರೆ ಕೆಲವು 'ಈಡಿಯಟ್ಸ್‌' ಮೋದಿ ಅಭಿಮಾನಿಗಳು ಮಾತ್ರ ಮೋದಿ ಅವರು ದೇಶ ವಿರೋಧಿ ಚಟುವಟಿಗಳಲ್ಲಿ ತೊಡಗಿರುವುದನ್ನು ಒಪ್ಪಿಕೊಳ್ಳುವುದಿಲ್ಲ' ಎಂದು ಹೇಳಿದ್ದಾರೆ.

Akhtar tweet: Some idiots imply that opposing Modi is an anti national activity. Are they suggesting that we, the 90 % Indians are anti nationals

ಹೋದ ತಿಂಗಳಿನಲ್ಲಿ ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ಅಖ್ತರ್ 'ಮೋದಿ ಅಭಿಮಾನಿಗಳಿಂದ ಕೆಲವೊಂದು ಸಂದೇಶಗಳನ್ನು ನಾನು ಸ್ವೀಕರಿಸಿದ್ದೇನೆ. ಅವರು ಕಳಿಸುವ ಸಂದೇಶಗಳು ಅಸಭ್ಯವಾಗಿರುತ್ತವೆ. ಈ ಸಂದೇಶಗಳು ಮೋದಿ ಅವರ ಅಭಿಮಾನಿಗಳ ಕೀಳು ಅಭಿರುಚಿಯನ್ನು ತೊರಿಸುತ್ತದೆ' ಎಂದಿದ್ದರು.

ಈ ಮಧ್ಯೆ 'ಮೋದಿ ದೇಶದ ಉತ್ತಮ ಪ್ರಧಾನಿಯಾಗಲಾರರು. ಮೋದಿ ಕೋಮುವಾದಿ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾದ ಕೆಲಸಗಳನ್ನು ಮಾಡುತ್ತಾರೆ' ಎಂಬ ಹೇಳಿಕೆ ನೀಡಿ ವಿವಾದಕ್ಕೆ ತುತ್ತಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+