ದೇಶದ 85 ಜಿಲ್ಲೆಗಳಲ್ಲಿ 14 ದಿನಗಳಿಂದ ಕೊರೊನಾ ಕೇಸ್ ಇಲ್ಲ

ನವದೆಹಲಿ, ಏಪ್ರಿಲ್ 27: ಕಳೆದ 14 ದಿನಗಳಿಂದ ದೇಶದ 85 ಜಿಲ್ಲೆಗಳಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಕೇಸ್‌ಗಳು ದಾಖಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ನವ ದೆಹಲಿಯಲ್ಲಿ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ದೇಶದ 85 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ವ್ಯಕ್ತಿಗೆ ಕೊರೊನಾ ಸೋಂಕು ಪತ್ತೆಯಾಗಿಲ್ಲ ಎಂದಿದ್ದಾರೆ.

ದೇಶದ 16 ಜಿಲ್ಲೆಗಳಲ್ಲಿ 28 ದಿನಗಳಿಂದ ಒಂದು ಕೊರೊನಾ ಪಾಸಿಟಿವ್ ಕೇಸ್‌ಗಳು ದಾಖಲಾಗಿಲ್ಲ. ಈ ಪೈಕಿ ಕರ್ನಾಟಕದ ಒಂದು ರಾಜ್ಯ ಇದು ಎನ್ನುವುದು ಮತ್ತೊಂದು ಖುಷಿಯ ವಿಷಯ. ದಾವಣಗೆರೆಯಲ್ಲಿ ಕಳೆದ 28 ದಿನಗಳಿಂದ ಕೊರೊನಾ ಪ್ರಕರಣಗಳು ದಾಖಲಾಗಿಲ್ಲ.

85 districts have not reported any new cases in the last 14 days

ಅಂದಹಾಗೆ, ದೇಶದ 85 ಜಿಲ್ಲೆಗಳು ಎಂದರೆ, ಇವು ಈಗಾಗಲೇ ಕೊರೊನಾ ಕೇಸ್ ದಾಖಲಾದ ಜಿಲ್ಲೆಗಳಾಗಿವೆ. ಈ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗದೆ, 14 ದಿನಗಳಿಂದ ನಿಯಂತ್ರಣದಲ್ಲಿ ಇದೆ ಎಂದು ತಿಳಿಸಲಾಗಿದೆ.

ಭಾರತದಲ್ಲಿ ಸೋಂಕಿತರ ಸಂಖ್ಯೆ 27,892ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಇಂದಿಗೆ 511 ಪಾಸಿಟಿವ್ ಕೇಸ್‌ಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+