ತಂಗಿಯೆಂದೂ ನೋಡದೆ ಅತ್ಯಾಚಾರ ಮಾಡಿದ ಪಾಪಿ ಅಣ್ಣ

ನವದೆಹಲಿ, ಜು.4: ಭಾರತದಲ್ಲಿ ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲ ಎನ್ನುವ ಮಾತುಗಳು ಎದ್ದಿರುವ ಹೊತ್ತಿನಲ್ಲೇ ಕೆಲವೊಂದು ಘಟನೆಗಳು ಬೆಚ್ಚಿಬೀಳುವಂತೆ ಮಾಡುತ್ತವೆ. ದೇಶ, ರಾಜ್ಯ, ಗಲ್ಲಿಗಳುಗಳು ಹಾಗಿರಲಿ ಮನೆಯಲ್ಲಿ ನಡೆಯುವ ಅತ್ಯಾಚಾರವನ್ನು ತಡೆಯುವುದು ಹೇಗೆ ಎನ್ನುವ ಪ್ರಶ್ನೆಗಳು ಉದ್ಭವವಾಗಿದೆ.

ದೆಹಲಿಯ ಆದರ್ಶನಗರದಲ್ಲಿ 8 ವರ್ಷದ ಬಾಲಕಿ ಮೇಲೆ ಆಕೆಯ ಸೋದರನಿಂದಲೇ ಅತ್ಯಾಚಾರಕ್ಕೊಳಗಾಗಿರುವ ಘಟನೆ ನಡೆದಿದೆ. ಬಾಲಕಿಗೆ ಅಧಿಕ ರಕ್ತಸ್ರಾವವಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಲಕರು ಹೊರಗಡೆ ಹೋಗಿದ್ದಾಗ ಈ ಕೃತ್ಯ ನಡೆದಿದೆ. ಆಕೆಯ ಅಪ್ರಾಪ್ತ ಸೋದರನಿಂದಲೇ ಈ ಕೃತ್ಯ ನಡೆದಿದೆ ಎಂದು ಬಾಲಕಿಯ ಕೌನ್ಸೆಲಿಂಗ್‌ ವೇಳೆ ಬಹಿರಂಗಗೊಂಡಿದೆ.

ದೆಹಲಿ ಪೊಲೀಸರ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯೊಂದರಲ್ಲೇ ಪ್ರತಿದಿನ ಮಕ್ಕಳ ಮೇಲಿನ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದ್ದು, ಈ ವರ್ಷದ ಏಪ್ರಿಲ್‌ ವರೆಗೆ 282 ಪ್ರಕರಣಗಳು ದಾಖಲಾಗಿವೆ. ಹಿಂದಿನ ವರ್ಷ ಇದೇ ವೇಳೆಯಲ್ಲಿ 278 ಪ್ರಕರಣಗಳು ದಾಖಲಾಗಿದ್ದವು. ಒಟ್ಟಾರೆ ಕಳೆದ ವರ್ಷ 894 ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು.

8-Year-Old Girl Allegedly Raped By Minor Brother In Delhi

ಸದ್ಯ ಬಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ದೆಹಲಿ ಮಹಿಳಾ ಆಯೋಗ(ಡಿಸಿಡಬ್ಲ್ಯು)ದ ಮುಖ್ಯಸ್ಥೆ ಸ್ವಾತಿ ಮಲಿವಾಳ್‌ ಸಂತ್ರಸ್ತೆಯನ್ನು ಭೇಟಿ ಮಾಡಿದ್ದಾರೆ. ಬಾಲಕಿ ಹಲವಾರು ಗಾಯಗಳಿಂದ ಬಳಲುತ್ತಿದ್ದು, ಆಪರೇಷನ್‌ ಮಾಡಲಾಗಿದೆ. ಸದ್ಯ ಆಕೆ ಗಂಭೀರ ಸ್ಥಿತಿಯಲ್ಲಿದ್ದಾಳೆ. ಬಾಲಕಿ ಪಾಲಕರಿಗೆ ಡಿಸಿಡಬ್ಲ್ಯು ಸಂಪೂರ್ಣ ಬೆಂಬಲ ನೀಡಲಿದ್ದು, ಪರಿಹಾರಕ್ಕಾಗಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+