ಒಂದೇ ದಿನ ದೇಶದಲ್ಲಿ 500 ಸಾವು, 28701 ಕೊರೊನಾ ಕೇಸ್ ಪತ್ತೆ

ದೆಹಲಿ, ಜುಲೈ 13: ಒಂದೇ ದಿನ ಭಾರತದಲ್ಲಿ 500 ಜನರು ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 23,174ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ 28,701 ಜನರಿಗೆ ಕೊವಿಡ್ ಸೋಂಕು ತಗುಲಿದೆ. ಇಂದಿನ ವರದಿ ಬಳಿಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,78,254ಕ್ಕೆ ಜಿಗಿದಿದೆ.

ಒಟ್ಟು ಸೋಂಕಿತರ ಪೈಕಿ ಈವರೆಗೂ 5,53,471 ಲಕ್ಷ ಜನರು ವೈರಸ್‌ನಿಂದ ಗುಣಮುಖರಾಗಿದ್ದಾರೆ. ಇನ್ನು 3,01,609 ಜನರು ಕೊವಿಡ್ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಜುಲೈ 12ರವರೆಗೂ ದೇಶದಲ್ಲಿ 1,18,06,256 ಜನರ ಸ್ಯಾಂಪಲ್ ಪರೀಕ್ಷೆ ಮಾಡಲಾಗಿದೆ. ನಿನ್ನೆ ಒಂದೇ ದಿನ 2,19,103 ಜನರ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ನಿನ್ನೆ ಸಂಜೆವರೆಗೂ ರಾಜ್ಯವಾರು ಅಂಕಿ ಅಂಶವನ್ನು ಗಮನಿಸಿದರೆ ಮಹಾರಾಷ್ಟ್ರದಲ್ಲಿ 7827 ಕೊರೊನಾ ಕೇಸ್ ದಾಖಲಾಗಿದೆ. ತಮಿಳುನಾಡಿನಲ್ಲಿ 4244 ಪ್ರಕರಣ ವರದಿಯಾಗಿದೆ. ದೆಹಲಿಯಲ್ಲಿ 1573 ಕೇಸ್, ಕರ್ನಾಟಕದಲ್ಲಿ 2627 ಕೇಸ್, ತೆಲಂಗಾಣದಲ್ಲಿ 1269, ಉತ್ತರ ಪ್ರದೇಶದಲ್ಲಿ 1384, ಪಶ್ಚಿಮ ಬಂಗಾಳದಲ್ಲಿ 1560 ಹಾಗೂ ಆಂಧ್ರ ಪ್ರದೇಶದಲ್ಲಿ 1933 ಕೇಸ್ ಪತ್ತೆಯಾಗಿದೆ.

28701 new COVID19 case reported in India in the last 24 hours

ಇದುವರೆಗೂ ಜಗತ್ತಿನಲ್ಲಿ ಒಟ್ಟು 1.3 ಕೋಟಿ (13,036,587) ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 571,574 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 7,582,426 ಜನರು ಈ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+