ಹಣ ನೀಡದ ತಾಯಿಯನ್ನು ಕಬ್ಬಿಣ ಸಲಾಕೆಯಿಂದ ಬಡಿದು ಕೊಂದ ಮಗ
ನವದೆಹಲಿ, ಅಕ್ಟೋಬರ್ 23: ಇಪ್ಪತ್ತೆರಡು ವರ್ಷದ ವ್ಯಕ್ತಿಯೊಬ್ಬ ತನ್ನ್ ತಾಯಿಯನ್ನು ಬಡಿದು ಕೊಂದಿದ್ದಾನೆ. ಪದೇ ಪದೇ ಹಣ ಕೇಳಿದ ನಂತರವೂ ಕೊಡಲಿಲ್ಲ ಎಂಬ ಕಾರಣಕ್ಕೆ ಆತ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆಯು ಈಶಾನ್ಯ ದೆಹಲಿಯ ಜ್ಯೋತಿನಗರ್ ನಲ್ಲಿ ಕಳೆದ ವಾರ ನಡೆದಿದೆ.
ಗುರು ತೇಗ್ ಬಹಾದೂರ್ ಆಸ್ಪತ್ರೆಯವರು ಅಕ್ಟೋಬರ್ ಹದಿನೇಳನೇ ತಾರೀಕು ಮಾಹಿತಿ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಶಿಕ್ಷಾದೇವಿ ಅವರನ್ನು ಮಗ ಮುಕುಲ್ ಆಸ್ಪತ್ರೆಗೆ ದಾಖಲು ಮಾಡಿದ್ದ. ಆದರೆ ಸಿಸಿಟಿವಿ ಫೂಟೇಜ್ ಗಳಲ್ಲಿ ದಾಖಲಾಗಿದ್ದ ದೃಶ್ಯಗಳಲ್ಲಿ ಇದ್ದ ಅಶುತೋಷ್ ಆ ಘಟನೆ ನಂತರ ನಾಪತ್ತೆಯಾಗಿದ್ದ.
ಗಾಯಗೊಂಡಿದ್ದ ಆಕೆ ಸಾವನ್ನಪ್ಪಿದ್ದು, ಕೊಲೆ ಪ್ರಕರಣ ದಾಖಲಾಗಿದೆ. ಖಚಿತ ಮಾಹಿತಿ ಆಧರಿಸಿ, ಉತ್ತರಪ್ರದೇಶದ ಮೋದಿ ನಗರ್ ನಲ್ಲಿ ಅಶುತೋಷ್ ನನ್ನು ಬಂಧಿಸಲಾಗಿದೆ. ಕಬ್ಬಿಣದ ಸಲಾಕೆಯಿಂದ ಶಿಕ್ಷಾ ದೇವಿ ಅವರ ತಲೆಗೆ ಆತ ಹಲವು ಬಾರಿ ಹೊಡೆದಿದ್ದಾನೆ. ಆಕೆ ಪೂಜೆ ಮಾಡುತ್ತಿದ್ದ ವೇಳೆಯಲ್ಲಿ ದಾಳಿ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಏಳೆಂಟು ಬಾರಿ ಕೇಳಿದ ನಂತರವೂ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಸಿಟ್ಟಾದ ಆತ ಕಬ್ಬಿಣದ ಸಲಾಕೆಯಿಂದ ಬಡಿದು ಕೊಂದು, ಸ್ಥಳದಿಂದ ಪರಾರಿಯಾಗಿದ್ದಾನೆ ಅಶುತೋಷ್. ಹಾಗೆ ಓಡಿಹೋದವನು ಸಹರಾನ್ ಪುರ್, ಶಾಮ್ಲಿ, ಹರಿದ್ವಾರ್, ಲೋನಿ ಮತ್ತು ಬೆಹ್ತ ರೈಲು ನಿಲ್ದಾಣಗಳಲ್ಲಿ ಉಳಿದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications