• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದೇ ದಿನ 10,974 ಕೇಸ್ ಪತ್ತೆ, ಒಟ್ಟು ಸಾವಿನ ಸಂಖ್ಯೆ 11903

|

ದೆಹಲಿ, ಜೂನ್ 17: ದೇಶದಲ್ಲಿ ಹೊಸದಾಗಿ 10,974 ಜನರಿಗೆ ಕೊರೊನಾ ವೈರಸ್‌ ತಗುಲಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,54,065ಕ್ಕೆ ಏರಿಕೆಯಾಗಿದೆ.

   ಬೆಂಗಳೂರು ಪೊಲೀಸರಲ್ಲಿ ತೀವ್ರವಾಗಿ ಹರಡುತ್ತಿದೆ ಕೊರೋನಾ | Bengaluru | Oneindia Kannada

   ಕಳೆದ 24 ಗಂಟೆಯಲ್ಲಿ 2003 ಜನರು ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಇದುವರೆಗೂ ದಿನವೊಂದರಲ್ಲಿ ಅತಿ ಹೆಚ್ಚು ಜನರು ಮೃತಪಟ್ಟಿರುವುದು ಇದೇ ಮೊದಲು. ಇದುವರೆಗೂ ದೇಶದಲ್ಲಿ 11903 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

   ರಾಮನಗರದಲ್ಲಿ ಕೊರೊನಾ ವೈರಸ್ ಗೆ 2ನೇ ಬಲಿ; ಟೊಯೊಟಾ ಕಂಪನಿ ಸಿಬ್ಬಂದಿಗೂ ಸೋಂಕು‌

   3.5 ಲಕ್ಷ ಕೇಸ್‌ಗಳ ಪೈಕಿ ದೇಶದಲ್ಲಿ 1,86,935 ಜನರು ಕೊವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. 1,55,227 ಜನರು ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

   ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,13,445ಕ್ಕೆ ಏರಿಕೆಯಾಗಿದೆ. 50,004 ಕೇಸ್ ಸಕ್ರಿಯವಾಗಿದೆ. 57,851 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

   ತಮಿಳುನಾಡಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 48,019ಕ್ಕೆ ಏರಿಕೆಯಾಗಿದೆ. 20,709 ಕೇಸ್‌ಗಳು ಸಕ್ರಿಯವಾಗಿದೆ. 26,782 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

   ಕರ್ನಾಟಕದಲ್ಲಿ 317 ಸೋಂಕಿತ ಪ್ರಕರಣ ದಾಖಲಾದರೂ ಚಿಂತೆಯಿಲ್ಲ!

   ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ 44,688 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರಲ್ಲಿ 26,351 ಕೇಸ್ ಸಕ್ರಿಯವಾಗಿದೆ. 16,500 ಮಂದಿ ಚೇತರಿಸಿಕೊಂಡಿದ್ದಾರೆ.

   English summary
   2003 deaths and 10,974 new Covid19 cases in the last 24 hours. The total number of positive cases in the country now stands 3,54,065.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X