ಈರುಳ್ಳಿ ಜೊತೆಗೆ 20 ಆಹಾರ ವಸ್ತುಗಳು ದುಬಾರಿ
ನವದೆಹಲಿ, ಡಿಸೆಂಬರ್ 12: ಕೇವಲ ಈರುಳ್ಳಿ ಒಂದೇ ಅಲ್ಲ ಅದರ ಜೊತೆ ಅದರ ಜೊತೆ ನಿತ್ಯ ಬಳಕೆಯ 20 ಆಹಾರ ಪದಾರ್ಥಗಳು ಈ ವರ್ಷದಲ್ಲಿ ದುಬಾರಿಯಾಗಿವೆ. ಈ ವರ್ಷದ ಆರಂಭ ಜನೆವರಿಯಿಂದ ಡಿಸೆಂಬರ್ ನಡುವಿನ ಅವಧಿಯಲ್ಲಿ ಈರುಳ್ಳಿ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಲೋಕ ಸಭೆಯಲ್ಲಿ ಹೇಳಿದ್ದಾರೆ.
ಈರುಳ್ಳಿಯ ಜೊತೆಗೆ ತೊಗರಿ ಬೆಳೆ, ಉದ್ದು, ಹೆಸರು ಬೆಳೆಗಳ ದರದಲ್ಲಿ ಏರಿಕೆ ಕಂಡಿವೆ. ಪೂರೈಕೆಯ ಕೊರತೆ ಮತ್ತು ಪ್ರತಿಕೂಲ ಹವಾಮಾನ ವೈಪರಿತ್ಯ, ಸಾಗಣೆಯ ವೆಚ್ಚದಲ್ಲಿ ಏರಿಕೆ, ಕಾಳಸಂತೆಯಲ್ಲಿ ಕೃತಕ ಅಭಾವ ಮತ್ತು ಇತರ ಕಾರಣಗಳಿಂದಾಗಿ ಬೆಲೆ ಏರಿಕೆಯಾಗಿದೆ ಎಂದು ತಿಳಿಸಿದರು.
ದಿನ ನಿತ್ಯ ಆಹಾರ ಬಳಕೆಯಲ್ಲಿ ಈರುಳ್ಳಿ ಹೆಚ್ಚು ಬಳಕೆಯಾಗಲಿದ್ದು, ಇದು ದೇಶದ ಕೆಲವು ಭಾಗಗಳಲ್ಲಿ 1 ಕೆ.ಜಿಗೆ 200 ರೂ, ವರೆಗೆ ಮಾರಾಟವಾಗುತ್ತಿದೆ. ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಸರಾಸರಿ ದರ 81 ರೂ, ಅಗಿದೆ ಎಂದರು.

ಉದ್ದಿನ ಬೆಳೆಯ ದರ ಕೆ.ಜಿಗೆ 72 ರೂ, ನಿಂದ 95 ರೂ, ಗೆ ಏರಿಕೆಯಾಗಿದೆ. ತೊಗರಿ ಮತ್ತು ಹೆಸರು ಬೆಳೆ ಶೇ, 15 ರಿಂದ 20 ರಷ್ಟು ಏರಿಕೆಯಾಗಿವೆ. ಆಲೂಗಡ್ಡೆ ಶೇ,40 ಹೆಚ್ಚಳವಾಗಿದೆ. ಅಕ್ಕಿ ಮತ್ತು ಗೋಧಿಯಲ್ಲಿ ಶೇ, 10 ವೃದ್ಧಿಸಿದೆ ಎಂದು ಮಾಹಿತಿ ನೀಡಿದರು.
ಕೆಲ ದಿನಗಳಿಂದ ಅಫ್ಘಾನಿಸ್ತಾನ ಮತ್ತು ಟರ್ಕಿಯಿಂದ ಈರುಳ್ಳಿ ಆಮದಾಗುತ್ತಿದ್ದು, ಗಗನಕ್ಕೇರಿದ್ದ ಈರುಳ್ಳಿ ದರವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿದೆ, ಅಟ್ಟಾರಿ ಗಡಿಯಲ್ಲಿ ಈರುಳ್ಳಿ ಸಾಗಣೆಯಾಗುತ್ತಿದ್ದು, ರಾಜಸ್ಥಾನದಲ್ಲಿ ಹೊಸ ಫಸಲು ಬರುತ್ತಿದೆ ಮುಂದಿನ ದಿನಗಳಲ್ಲಿ ದಿನನಿತ್ಯ ಬಳಕೆಯ ಆಹಾರ ಪದಾರ್ಥಗಳ ದರದಲ್ಲಿ ಇಳಿಕೆಯಾಗಬಹುದು ಎಂದು ತಿಳಿಸಿದರು.












Click it and Unblock the Notifications