18 ವಿದ್ಯಾರ್ಥಿಗಳು UPSC ಪಾಸ್: ಬಳಿದಷ್ಟೂ ಮಸಿ, ಹೊಳೆಯುತ್ತಿದೆ JNU
ನವದೆಹಲಿ, ಜನವರಿ 15: ಪ್ರತಿಭಟನೆ, ಹಿಂಸಾಚಾರ ಪೊಲೀಸ್ ಪ್ರಕರಣಗಳು ವಿದ್ಯಾರ್ಥಿಗಳ ಮೇಲೆ ಎಫ್‌ಐಆರ್ ಹೀಗೆ ಹಲವು ಘಟನೆಗಳಿಂದ 'ದೇಶ ದ್ರೋಹಿ', 'ತುಕ್ಡೆ-ತುಕ್ಡೆ' ಗ್ಯಾಂಗ್ ಎಂದು ಕರೆಸಿಕೊಳ್ಳುತ್ತಿರುವ ಜೆಎನ್‌ಯು ತನ್ನ ಸಾಮರ್ಥ್ಯವನ್ನು ಶೈಕ್ಷಣಿಕವಾಗಿ ವಿರೋಧಿಗಳಿಗೆ ತೋರಿಸಿದೆ.
ಇಂದು ಪ್ರಕಟವಾದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 18 ಮಂದಿ ಜೆಎನ್‌ಯು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕೆಲವರು rank ಸಹ ಬಂದಿದ್ದಾರೆ.
ಯುಪಿಎಸ್‌ಸಿ ನಡೆಸುವ ಐಇಎಸ್ (ಇಂಡಿಯನ್ ಎಕಾನಮಿಕ್ ಸರ್ವೀಸ್) ಪರೀಕ್ಷೆ ತೆಗೆದುಕೊಂಡು ಪಾಸಾಗಿದ್ದೇ 32 ಮಂದಿ ಅದರಲ್ಲಿ 18 ಮಂದಿ ಜೆಎನ್‌ಯು ವಿದ್ಯಾರ್ಥಿಗಳೇ ಆಗಿದ್ದಾರೆ.

ಜೆಎನ್‌ಯು ನ ಯಶಸ್ವಿನಿ ಸರಸ್ವತ್ 8 rank ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆ ಬಗ್ಗೆ ಜೆಎನ್‌ಯು ನ ಉಪಪ್ರಾಚಾರ್ಯ ಜಗದೀಶ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಇದೇ ವೈಸ್ ಚಾನ್ಸಲರ್ ವಿದ್ಯಾರ್ಥಿಗಳನ್ನು ಗೂಂಡಾಗಳೆಂದಿದ್ದರು.
ಕಳೆದ ಒಂದು ತಿಂಗಳಿನಿಂದಲೂ ಜೆಎನ್‌ಯು ಚರ್ಚೆಯ ವಿಷಯವಾಗಿದೆ. ಶುಲ್ಕ ಏರಿಕೆ ವಿಚಾರವಾಗಿ ಪ್ರಾರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಹಂತಕ್ಕೆ ಹೋಗಿತ್ತು. ನಂತರ ಜೆಎನ್‌ಯುಗೆ ಮುಸುಕುಧಾರಿ ಗೂಂಡಾಗಳು ನುಗ್ಗಿ ಆಯುಧಗಳಿಂದ ಹಲ್ಲೆ ಮಾಡಿದರು. ಇದರ ವಿರುದ್ಧ ದೇಶದಾದ್ಯಂತ ವಿವಿಧ ನಗರಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟಿಸಿ ಜೆಎನ್‌ಯು ಹಿಂಸಾಚಾರ ವಿರೋಧಿಸಿದರು. ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಬಾಲಿವುಡ್ ಮಂದಿ ಜೆಎನ್‌ಯು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು.












Click it and Unblock the Notifications