ಭಾರತದಲ್ಲಿ ಕೇವಲ 9 ದಿನಕ್ಕೆ 5 ಲಕ್ಷ ಕೊರೊನಾ ಪ್ರಕರಣ ದಾಖಲು

ದೆಹಲಿ, ಆಗಸ್ಟ್ 7: ಶುಕ್ರವಾರ ಬೆಳಗ್ಗೆ ಕೇಂದ್ರ ಆರೋಗ್ಯ ಇಲಾಖೆ ನೀಡಿದ ವರದಿಯಂತೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದೆ. ಗುರುವಾರ ಒಂದೇ ದಿನ ದೇಶದಲ್ಲಿ 62,538 ಮಂದಿಗೆ ಕೊವಿಡ್ ದೃಢವಾಗಿದೆ.

Recommended Video

      ವಿಜಯ್ ಮಲ್ಯಗೆ ಸಂಬಂಧಿಸಿದ ಮಹತ್ವದ ದಾಖಲೆ ಮಿಸ್ | Oneindia Kannada

      15 ಲಕ್ಷದಿಂದ 20 ಲಕ್ಷಕ್ಕೆ ಕೇಸ್ ಕೇವಲ 9 ದಿನದಲ್ಲಿ ವರದಿಯಾಗಿದೆ. ಅತಿ ವೇಗವಾಗಿ ಐದು ಲಕ್ಷ ಪ್ರಕರಣಗಳು ಭಾರತದಲ್ಲಿ ದಾಖಲಾಗಿದೆ.

      - ಭಾರತದಲ್ಲಿ ಒಂದು ಲಕ್ಷ ಕೇಸ್ ವರದಿಯಾಗಿದ್ದು 78 ದಿನದಲ್ಲಿ. ಮೇ 18ಕ್ಕೆ ದೇಶದಲ್ಲಿ ಒಂದು ಲಕ್ಷ ಸೋಂಕಿತರು ವರದಿಯಾಗಿದ್ದರು.

      15 Lakh To 20 Lakh Coronavirus Cases Taken In Just 9 Days

      - ಒಂದು ಲಕ್ಷದಿಂದ ಐದು ಲಕ್ಷ ಕೇಸ್ ವರದಿಯಾಗಿದ್ದು 39 ದಿನದಲ್ಲಿ. ಜೂನ್ 26ಕ್ಕೆ ಐದು ಲಕ್ಷ ಕೇಸ್ ದಾಖಲಾಗಿದೆ.

      - ಐದರಿಂದ ಹತ್ತು ಲಕ್ಷ ಪ್ರಕರಣ ದಾಖಲಾಗಲು ತೆಗೆದುಕೊಂಡ ಸಮಯ 20 ದಿನ.

      - ಹತ್ತರಿಂದ ಹದಿನೈದು ಲಕ್ಷ ಕೇಸ್ ವರದಿಯಾಗಲು ತೆಗೆದುಕೊಂಡ ಸಮಯ 12 ದಿನ

      - ಹದಿನೈದು ಲಕ್ಷದಿಂದ ಇಪ್ಪತ್ತು ಲಕ್ಷ ಕೇಸ್ ದಾಟಲು ತೆಗೆದುಕೊಂಡು ಸಮಯ 9 ದಿನ.

      ಅಮೆರಿಕದಲ್ಲಿ ಇದುವರೆಗೂ 50 ಲಕ್ಷ (5,032,547) ಸೋಂಕಿತರು ಪತ್ತೆಯಾಗಿದ್ದಾರೆ. ಬ್ರೆಜಿಲ್‌ನಲ್ಲಿ 29 ಲಕ್ಷ (2,917,562) ಮಂದಿಗೆ ಕೊರೊನಾ ದಾಖಲಾಗಿದೆ. ಭಾರತದಲ್ಲಿ 20 ಲಕ್ಷ (2,030,001) ಕೇಸ್ ವರದಿಯಾಗಿದ್ದು, ಇನ್ನು ಹೆಚ್ಚಾಗುವ ನಿರೀಕ್ಷೆ ಇದೆ.

      - ಆಂಧ್ರ ಪ್ರದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳು ಎರಡು ಲಕ್ಷ ದಾಟಿದೆ. ಒಂದು ಲಕ್ಷದಿಂದ ಎರಡು ಲಕ್ಷಕ್ಕೆ ಕೇಸ್ ವರದಿ ಮಾಡಲು ಆಂಧ್ರ ತೆಗೆದುಕೊಂಡ ಸಮಯ 11 ದಿನ ಮಾತ್ರ.

      - ಮಹಾರಾಷ್ಟ್ರದಲ್ಲಿ 2 ರಿಂದ 3 ಲಕ್ಷ ಪ್ರಕರಣಗಳ ವರದಿಯಾಗಲು 14 ದಿನಗಳು ಸಮಯ ತೆಗೆದುಕೊಂಡಿದೆ. 11 ದಿನಗಳಲ್ಲಿ 3 ರಿಂದ 4 ಲಕ್ಷ ಕೇಸ್ ದಾಖಲಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+