• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಚಿತ ವಿದ್ಯುತ್ ಆಯ್ತು ಇದೀಗ ಉಚಿತ ವೈಫೈ ಸೌಲಭ್ಯ ಘೋಷಣೆ

|

ನವದೆಹಲಿ, ಆಗಸ್ಟ್ 9: ಇತ್ತೀಚೆಗಷ್ಟೇ 200 ಯೂನಿಟ್ ವರೆಗೆ ವಿದ್ಯುತ್ ಬಳಕೆ ಉಚಿತ ಎಂದು ಘೋಷಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಉಚಿತ ವೈಫೈ ಸೌಲಭ್ಯವನ್ನು ನೀಡುವ ಭರವಸೆಯನ್ನೂ ಕೂಡ ನೀಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರದಂದು ರಾಷ್ಟ್ರದ ರಾಜಧಾನಿಯಲ್ಲಿ ಉಚಿತ ವೈ-ಫೈ ಇಂಟರ್ನೆಟ್ ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಘೋಷಿಸಿದ್ದಾರೆ.

ಪ್ರತಿ ಬಳಕೆದಾರರಿಗೆ 15 ಜಿಬಿ ಡೇಟಾವನ್ನು ಉಚಿತವಾಗಿ ಪ್ರತಿ ತಿಂಗಳು 200 ಎಂಬಿಪಿಎಸ್ ವೇಗದಲ್ಲಿ ಇಂಟರ್ ನೆಟ್ ನೀಡಲಾಗುವುದು ಎಂದು ಹೇಳಿದರು.

ದೆಹಲಿ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಸಿಎಂ ಕೇಜ್ರಿವಾಲ್ ಈಗ ಜನಪ್ರಿಯ ಘೋಷಣೆಗಳ ಮೂಲಕ ಮತ್ತೊಮ್ಮೆ ಅಧಿಕಾರ ಹಿಡಿಯುವತ್ತ ಗಮನ ಹರಿಸಿದ್ದಾರೆ ಎನ್ನಲಾಗಿದೆ.

ಕೆಲವು ತಿಂಗಳ ಹಿಂದೆ ಅಷ್ಟೇ ಮಹಿಳೆಯರಿಗೆ ಉಚಿತ ಮೆಟ್ರೋ ಸೇವೆ ಒದಗಿಸುವ ಪ್ರಸ್ತಾವವನ್ನು ಇಟ್ಟಿದ್ದರು.

200 ಯೂನಿಟ್ಸ್‌ವರೆಗಿನ ವಿದ್ಯುತ್ ಬಳಕೆ ಉಚಿತ: ನಂತರ ಅರ್ಧ ಬೆಲೆ ಮಾತ್ರ

ಆದರೆ ಇದೆಲ್ಲವೂ ಅವರಿಗೆ ಚುನಾವಣೆಯಲ್ಲಿ ಎಷ್ಟು ಲಾಭವಾಗಲಿದೆ ಎನ್ನುವುದು ಪ್ರಶ್ನೆಯಾಗಿದೆ. ಈಗಾಗಲೇ ಆಮ್ ಆದ್ಮಿ ಪಕ್ಷವನ್ನು ಹಲವು ಹಿರಿಯ ನಾಯಕರು ತೊರೆದಿರುವುದರಿಂದ ಮುಂಬರುವ ಚುನಾವಣೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಮೊದಲ ಹಂತದ ಭಾಗವಾಗಿ ದೆಹಲಿಯಾದ್ಯಂತ 11,000 ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲಾಗುವುದು.ಈಗಾಗಲೇ ಉಚಿತ ವೈ-ಫೈ ಒದಗಿಸುವ ಕೆಲಸ ಪ್ರಾರಂಭವಾಗಿದೆ .ಈ ಯೋಜನೆ ಇನ್ನು ಮೂರು ನಾಲ್ಕು ತಿಂಗಳ ಅವಧಿಯ ಒಳಗೆ ಜಾರಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೊದಲ ಹಂತದ ಭಾಗವಾಗಿ ಒಟ್ಟು 11,000 ಹಾಟ್‌ಸ್ಪಾಟ್‌ಗಳಲ್ಲಿ 4,000 ಅನ್ನು ಬಸ್ ನಿಲ್ದಾಣಗಳಲ್ಲಿ ಸ್ಥಾಪಿಸಲಾಗುವುದು ಮತ್ತು ಉಳಿದ 7,000 ದೆಹಲಿಯಾದ್ಯಂತದ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಿದರು.

ಇತ್ತೀಚೆಗಷ್ಟೇ ಉಚಿತ ವಿದ್ಯುತ್ ಸೌಲಭ್ಯ ಕೂಡ ನೀಡುವುದಾಗಿ ಘೋಷಿಸಿದ್ದರು. ಅದಕ್ಕೂ ಮುನ್ನ ಮೆಟ್ರೋ ಹಾಗೂ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಾವಕಾಶ ಕಲ್ಪಿಸುವುದಾಗಿ ಕೂಡ ಹೇಳಿದ್ದರು.

201ರಿಂದ 400 ಯೂನಿಟ್‌ಗಳವರೆಗಿನ ವಿದ್ಯುತ್‌ ಬಳಕೆಗೆ ಅರ್ಧ ಬೆಲೆಯನ್ನು ವಿಧಿಸುವುದಾಗಿ ತಿಳಿಸಿದ್ದರು. ಅವರ ಪ್ರಕಾರ, ಬೇಸಿಗೆಯಲ್ಲಿ 200 ಯೂನಿಟ್ಸ್‌ಗಿಂತ ಕಡಿಮೆ ವಿದ್ಯುತ್‌ ಬಳಸುವ ದೆಹಲಿಯ ಸುಮಾರು ಶೇ. 33ರಷ್ಟು ಬಳಕೆದಾರರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಚಳಿಗಾಲದಲ್ಲಿ ಶೇ. 70ರಷ್ಟು ಜನರು 200 ಯೂನಿಟ್ಸ್‌ಗಿಂತಲೂ ಕಡಿಮೆ ವಿದ್ಯುತ್‌ ಅನ್ನು ಬಳಸುತ್ತಿದ್ದಾರೆ ಎಂದಿದ್ದಾರೆ.

English summary
Delhi CM Arvind Kejriwal says 11,000 hotspots will be installed across Delhi. The work to provide free WiFi has started in a way. Every user will be given 15 GB data free, every month. This is the first phase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X