10ನೇ ತರಗತಿ ವಿದ್ಯಾರ್ಥಿನಿಗೆ ಪಿಜ್ಜಾ ಆಸೆ ತೋರಿಸಿ ಸಾಮೂಹಿಕ ಅತ್ಯಾಚಾರ
ನವದೆಹಲಿ, ಅಕ್ಟೋಬರ್ 15: ಸರಕಾರಿ ಶಾಲೆಯಲ್ಲಿ ಓದುತ್ತಿರುವ ಹತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ನಾಲ್ವರು ಅತ್ಯಾಚಾರ ಎಸಗಿದ ಆರೋಪ ಮಾಡಲಾಗಿದೆ. ಭೂ ಮಾಲೀಕರೊಬ್ಬರ ಮಗನೂ ಸೇರಿದಂತೆ ನಾಲ್ಕು ಮಂದಿ ವಿರುದ್ಧ ಆರೋಪ ಕೇಳಿಬಂದಿದ್ದು, ಪಿಜ್ಜಾ ಕೊಡಿಸುವ ಆಮಿಷ ಒಡ್ಡಿ ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ಪೂರ್ವ ದೆಹಲಿಯ ಕಲ್ಯಾಣ್ ಪುರಿಯಲ್ಲಿ ಕಳೆದ ಶುಕ್ರವಾರ ನಡೆದಿದೆ. ಭೂ ಮಾಲೀಕರ ಮಗ ಬಾಲಕಿಗೆ ಪಿಜ್ಜಾ ಕೊಡಿಸುವುದಾಗಿ ಹೇಳಿ, ತನ್ನ ಕೋಣೆಗೆ ಕರೆದೊಯ್ದು, ಅಲ್ಲಿ ಇತರ ಮೂವರು ಸೇರಿ ಅತ್ಯಾಚಾರ ಎಸಗಿದ್ದಾರೆ. ಆ ವೇಳೆಯಲ್ಲಿ ಆರೋಪಿಗಳು ಮದ್ಯಪಾನ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಲಕಿಯ ತಾಯಿ ಮನೆಗೆ ಬಂದ ಮೇಲೆ ನಡೆದ ಘಟನೆ ಬಗ್ಗೆ ತಿಳಿಸಿದ್ದಾಳೆ. ಆ ನಂತರ ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ದೂರು ದಾಖಲಿಸಲಾಗಿದೆ. ಪೋಕ್ಸೊ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿ, ಅದೇ ದಿನ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಪೈಕಿ ಭೂ ಮಾಲೀಕರ ಮಗನಿಗೆ 28 ವರ್ಷ ವಯಸ್ಸು. ಆತ ವಿವಾಹಿತ. ಇನ್ನೊಬ್ಬ ಆರೋಪಿಗೆ 19 ವರ್ಷ ವಯಸ್ಸು. ಇನ್ನಿಬ್ಬರು ಆರೋಪಿಗಳು 30ರ ಹರೆಯದವರು.












Click it and Unblock the Notifications