ಪ್ರೀತಿಸಿ ಮೋಸಗೈದ ಹಿನ್ನೆಲೆ : ಆತ್ಯಹತ್ಯೆಗೆ ಯತ್ನಿಸಿದ ಯುವತಿ

ಮೈಸೂರು, ಜೂನ್ 24 : ಯುವಕನೊಬ್ಬ ಪ್ರೀತಿಸಿ ಮೋಸ ಮಾಡಿದ್ದರಿಂದ ಯುವತಿಯೊಬ್ಬಳು ವಿಷದ ಇಂಜಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕೊಳ್ಳೇಗಾಲ ಮೂಲದ ಮಂಜುಳಾ (ಹೆಸರು ಬದಲಿಸಲಾಗಿದೆ) ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಗಿರೀಶ್ ಮತ್ತು ಮಂಜಳಾ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಗಿರೀಶ್ ಮೈಸೂರು ತಾಲೂಕು ಇಲವಾಲ ಸಮೀಪ ಹೋಸಕೋಟೆ ಗ್ರಾಮದ ನಿವಾಸಿಯಾಗಿದ್ದು, ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ.

young woman tries to commit suicide for being cheated by boyfriend in Mysore

ಮಂಜುಳಾ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಗಿರೀಶ್ ಬೇರೊಂದು ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ ಎಂಬ ವಿಷಯ ತಿಳಿದು ಮಂಜುಳಾ ಆಘಾತಕ್ಕೊಳಗಾಗಿದ್ದಾಳೆ. ಬೇಸರಗೊಂಡ ಆಕೆ ಆಸ್ಪತ್ರೆಯಲ್ಲೇ ವಿಷದ ಇಂಜಕ್ಷನ್ ಪಡೆದಿದ್ದಾಳೆ. ಈಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮಂಜುಳಾ ಪೋಷಕರು ನೀಡಿದ ದೂರಿನ ಹಿನ್ನೆಲೆ, ಪೊಲೀಸರು ಆರೋಪಿ ಗಿರೀಶ್ ನನ್ನು ಬಂಧಿಸಿದ್ದಾರೆ. ನಜಾರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+