ಮದುವೆಯಾಗಲು ಯುವತಿ ನಿರಾಕರಿಸಿದ್ದಕ್ಕೆ ಕೈ ಕುಯ್ದುಕೊಂಡ ಪ್ರೇಮಿ
ಮೈಸೂರು, ಅಕ್ಟೋಬರ್. 26: ಪ್ರೀತಿಸುತ್ತಿರುವ ಹುಡುಗಿ ತಿರಸ್ಕರಿಸಿದಳೆಂದು ಪಾಗಲ್ ಪ್ರೇಮಿಯೊಬ್ಬ ಕೈಯ್ಯನ್ನೇ ಬ್ಲೇಡ್ ನಲ್ಲಿ ಕತ್ತರಿಸಿಕೊಂಡು ರಕ್ತಸಿಕ್ತನಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡಿದ ಘಟನೆ ಬೆಳಕಿಗೆ ಬಂದಿದೆ.
ಹೌದು, ಪ್ರೀತಿಸಿದ ಯುವತಿ ಮದುವೆಯಾಗಲು ಒಲ್ಲೆ ಎಂದಿದ್ದಕ್ಕೆ ಪ್ರೇಮಿಯೊಬ್ಬ ಕೈ ಕುಯ್ದುಕೊಂಡ ಘಟನೆ ಮೈಸೂರಿನ ಜೆ.ಪಿ.ನಗರದ ರಿಂಗ್ ರಸ್ತೆಯಲ್ಲಿ ಸಂಭವಿಸಿದೆ.
ಘಟನೆಯ ವಿವರ
ಜೆ.ಪಿ.ನಗರ ನಿವಾಸಿ ಕಾಂತಾ (28) ಎಂಬಾತ ರಮಾಬಾಯಿನಗರದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ನಿನ್ನೆ ಗುರುವಾರ ಯಾವುದೋ ಕ್ಷುಲ್ಲಕ ಕಾರಣಕ್ಕೆ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಅದರಿಂದ ಬೇಸತ್ತ ಯುವತಿ ನಾನು ನಿನ್ನನ್ನು ವಿವಾಹವಾಗಲಾರೆ ಎಂದಿದ್ದಾಳೆ.

ಇದರಿಂದ ಮನನೊಂದ ಯುವಕ ಜೆ.ಪಿ.ನಗರ ರಿಂಗ್ ರಸ್ತೆಯ ಬಳಿ ಕೈ ಕುಯ್ದುಕೊಂಡು ಹುಚ್ಚಾಟ ಮೆರೆದಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ವಿದ್ಯಾರಣ್ಯಪುರಂ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications