ಮೈಸೂರು ವಿವಿಯಲ್ಲಿ ಯದುವೀರ್ ಸ್ನಾತಕೋತ್ತರ ಅಧ್ಯಯನ?
ಮೈಸೂರು, ಮೇ 30 : ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಉನ್ನತ ವ್ಯಾಸಂಗವನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಅವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲಿದ್ದಾರೆ.[ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]
ಎರಡು ದಿನಗಳ ಪಟ್ಟಾಭಿಷೇಕ ಕಾರ್ಯಕ್ರಮ ಮುಗಿಸಿರುವ ಯದುವೀರ ಒಡೆಯರ್ ಅವರು ಮೈಸೂರಿನ ಅರಮನೆಯಲ್ಲಿದ್ದಾರೆ. ಮುಂದಿನ ಮೂರು ತಿಂಗಳ ಕಾಲ ಮೈಸೂರು ಅರಮನೆಯಲ್ಲಿಯೇ ಇದ್ದು ಇಲ್ಲಿನ ಸಂಪ್ರದಾಯಗಳನ್ನು ಕಲಿತುಕೊಳ್ಳಲಿದ್ದಾರೆ.[ಯದುವೀರ ಒಡೆಯರ್ ಭಾವಿ ಪತ್ನಿ ರಾಜಸ್ಥಾನಿ ಕುವರಿ]
ಪ್ರತಿದಿನ ಪುರೋಹಿತರಿಂದ ಮಂತ್ರಗಳನ್ನು ಕಲಿತುಕೊಳ್ಳಲಿದ್ದಾರೆ. ಈಗಾಗಲೇ ಅವರಿಗೆ ಕೆಲವು ಮಂತ್ರ ಹೇಳಿಕೊಡಲಾಗುತ್ತಿದ್ದು, ಶ್ರದ್ಧೆಯಿಂದ ಕಲಿಯುತ್ತಿದ್ದಾರೆ ಎಂದು ಅರ್ಚಕರಾದ ಸುಬ್ರಹ್ಮಣ್ಯ ಹಾಗೂ ಕುಮಾರ್ ಅವರು ಹೇಳಿದ್ದಾರೆ. [ಪಟ್ಟಾಭಿಷೇಕದ ಚಿತ್ರಗಳು]
ಅಮೆರಿಕಾದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಇಂಗ್ಲಿಶ್ ವಿಷಯದಲ್ಲಿ ಪದವಿ ಪಡೆದಿರುವ ಯದುವೀರ ಒಡೆಯರ್ ಅವರು ಸ್ನಾತಕೋತ್ತರ ಪದವಿ ಪಡೆಯಲು ನಿರ್ಧರಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿಯೇ ವ್ಯಾಸಂಗ ಮುಂದುವರೆಸಲು ಅವರು ನಿರ್ಧರಿಸಿದ್ದಾರೆ. [ಯುವರಾಜ ಯದುವೀರ್ ಪರಿಚಯ]
22 ವರ್ಷದ ಯದುವೀರ ಒಡೆಯರ್ ಅವರ ಪಟ್ಟಾಭಿಷೇಕ ಗುರುವಾರ ನಡೆದಿದೆ. ಸದ್ಯಕ್ಕೆ ಮೈಸೂರಿನಲ್ಲಿಯೇ ಇರುವ ಅವರು ಇಲ್ಲಿಯೇ ಸ್ನಾತಕೋತ್ತರ ಪದವಿ ಓದು ಮುಂದುವರೆಸುವ ಸಾಧ್ಯತೆ ಇದೆ.













Click it and Unblock the Notifications