ಬೀದಿನಾಯಿಗಳನ್ನು ಸಾಕಿ ನೆರೆಹೊರೆಯವರಿಗೆ ತೊಂದರೆಯಿತ್ತ ಮಹಾತಾಯಿ
ಬೀದಿನಾಯಿಗಳನ್ನು ಮನೆಯಲ್ಲಿ ಸಾಕಿ ಸುತ್ತಮುತ್ತಲ ಜನಕ್ಕೆ ತೊಂದರೆ ನೀಡುತ್ತಿದ್ದ ಮಹಾತಾಯಿಯ ಬಾಯಿಯನ್ನು ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ನಾಯಿಗಳಿಂದ ಆದ ತೊಂದರೆಗಳಿಂದ ಈಗ ಸುತ್ತಮುತ್ತಲ ಜನರು ಸ್ವಲ್ಪ ನೆಮ್ಮದಿಯನ್ನು ಕಾಣುತ್ತಿದ್ದಾರೆ.
ಮೈಸೂರು, ಫೆಬ್ರವರಿ 16 : ಬೀದಿ ನಾಯಿ ಅಂದರೆನೇ ಭಯಪಡೋ ಕಾಲ. ಯಾವಾಗ ಮೈಮೇಲೆ ಎರಗುತ್ತೋ ಹೇಳಕಾಗಲ್ಲ. ಅಂತಹುದರಲ್ಲಿ ಮಹಿಳೆಯೊಬ್ಬರು ಸುಮಾರು 8-10 ಬೀದಿನಾಯಿಗಳನ್ನು ಮನೆಯೊಳಗಿಟ್ಟುಕೊಂಡು ಅಕ್ಕಪಕ್ಕದವರ ನಿದ್ದೆಗೆಡಿಸಿ, ತಲೆನೋವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಇಲ್ಲಿನ ಉಮಾಟಾಕೀಸ್ ರಸ್ತೆಯ ಸಮೀಪ ವಾಸವಿರುವ ವರಲಕ್ಷ್ಮಿ ಎಂಬ ಮಹಿಳೆಯೆ ಬೀದಿ ನಾಯಿಗಳನ್ನು ಸಾಕಿದವರು. ಇವರು ಮನೆಯಲ್ಲಿಯೇ 8-10 ನಾಯಿಗಳನ್ನು ಇರಿಸಿಕೊಂಡಿರುವುದರಿಂದ ರಾತ್ರಿಯಾದರೆ ಸಾಕು ಅವುಗಳ ಆರ್ತನಾದ, ಬೊಗಳುವುದು, ಕಿರುಚುವುದು ಹೆಚ್ಚಾಗಿದ್ದು, ಸುತ್ತಮುತ್ತಲ ನಿವಾಸಿಗಲಿಗೆ ನಿದ್ರೆಯೇ ಇಲ್ಲದಂತಾಗಿದೆ.[ನಾಯಿಯ ಮೇಲೆ ಅತ್ಯಾಚಾರ ಮಾಡಿದ ವಿಕೃತಕಾಮಿ]

ನಾಯಿಗಳನ್ನು ಸ್ವಚ್ಛತೆಯಿಂದ ನೋಡಿಕೊಳ್ಳದೇ ಇರುವ ಕಾರಣ ಮಲ ಮೂತ್ರ ವಿಸರ್ಜನೆಯಿಂದ ಅವರ ಮನೆ ಕೊಳಕಾಗಿದೆ. ಅಲ್ಲದೆ ಮನೆಯ ಮುಂದೆಯೇ ಮುಸರೆ,ಪಾತ್ರೆ ತೊಳೆಯುತ್ತಿದ್ದು, ಹೊಲಸು ನೀರು ಬೀದಿಯಲ್ಲಿ ನಿಂತು ಸೊಳ್ಳೆಗಳು ಹೆಚ್ಚುತ್ತಿದೆ ಎನ್ನುತ್ತಾರೆ ಸ್ಥಳೀಯರು.[ನಾಯಿಗಾಗಿ ಮದುವೆ ಮುರಿದುಕೊಂಡ ಬೆಂಗಳೂರು ಹುಡುಗಿ]
ಇನ್ನು ಆಕೆಗೆ ಬುದ್ದಿ ಹೇಳಲು ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಳುಹಿಸುತ್ತಾಳೆ. ಇಲ್ಲಿನ ಲಷ್ಕರ್ ಠಾಣೆಯ ಪೊಲೀಸರು ಸ್ಥಳೀಯ ದೂರಿನ ಮೇರಿಗೆ ವಿಚಾರಿಸಲು ಬಂದರೆ ಅವರಿನ್ನೂ ನಿಂದಿಸಿದ್ದಾಳೆ. ಅಲ್ಲದೆ ನಾಯಿಗಳನ್ನು ನನ್ನ ರಕ್ಷಣೆಗೆ ಇರಿಸಿಕೊಂಡಿದ್ದೇನೆ ಎಂದಿದ್ದಾಳೆ.
ಅಕ್ಕಪಕ್ಕದವರು ರೋಗದ ಭೀತಿ ಎದುರಾಗಿದ್ದು ಮೈಸೂರು ಮಹಾನಗರ ಪಾಲಿಕೆಯವರು ಆಕೆ ಸಾಕಿದ್ದ ನಾಯಿಗಳನ್ನು ಎಳೆದೊಯ್ದಿದ್ದಾರೆ.












Click it and Unblock the Notifications