ಆಸ್ಪತ್ರೆಯಲ್ಲಿ ಸ್ನಾನಕ್ಕೆ ಹೋಗಿ ಸರ ಕಳೆದುಕೊಂಡ ಮಹಿಳೆ
ಮೈಸೂರು, ಜನವರಿ 16: ಖಾಸಗಿ ಆಸ್ಪತ್ರೆಯ ಸ್ನಾನಗೃಹದಲ್ಲಿ ಮಹಿಳೆಯೊಬ್ಬರು ಮಾಂಗಲ್ಯ ಸರ ಕಳೆದುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೆ.ಆರ್.ನಗರ ತಾಲೂಕಿನ ಮಳೆನಾಯಕನ ಹಳ್ಳಿಯ ರಾಣಿ ಎಂಬುವರೇ 1.3 ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರ ಕಳೆದುಕೊಂಡವರು. ರಾಣಿಯ ಸಹೋದರನನ್ನು ಆರೋಗ್ಯ ಸರಿಯಿಲ್ಲವೆಂಬ ಕಾರಣಕ್ಕೆ ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ನೋಡಿಕೊಳ್ಳಲೆಂದು ರಾಣಿ ಅವರು ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದರು.

ಸೋಮವಾರ ಬೆಳಿಗ್ಗೆ ಸ್ನಾನಗೃಹಕ್ಕೆ ಹೋದಾಗ ಮಾಂಗಲ್ಯ ಸರವನ್ನು ಬಿಚ್ಚಿಟ್ಟು ಸ್ನಾನ ಮುಗಿಸಿ ವಾರ್ಡ್ ಗೆ ಬಂದಿದ್ದಾರೆ. ಸರವನ್ನು ಸ್ನಾನಗೃಹದಲ್ಲೇ ಬಿಟ್ಟಿರುವುದು ನೆನಪಾಗಿ ಮತ್ತೆ ಹೋಗಿ ನೋಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.












Click it and Unblock the Notifications