ಮೈಸೂರು ಸಿಲ್ಕ್ ಅಂಗಡಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು

ಮೈಸೂರು, ಸೆಪ್ಟೆಂಬರ್ 11: ಈ ಹಿಂದೆ ಕಡಿಮೆ ದರಕ್ಕೆ ರೇಷ್ಮೆ ಸೀರೆ ನೀಡುವುದಾಗಿ ಘೋಷಿಸಿ ಮುಂದೂಡಿದ್ದ ಸ್ಕೀಮ್ ಅನ್ನು ಇಂದು ಮಂಗಳವಾರ ಏಕಾಏಕಿ ನೀಡಿದ್ದರ ಪರಿಣಾಮ ಮೈಸೂರಿನ ಜನತೆ ಸೀರೆ ಕೊಳ್ಳಲು ಮುಗಿಬಿದ್ದರು.

ರಿಯಾಯಿತಿ ದರದಲ್ಲಿ ನೀಡಲಾಗುವ ಕೆಎಸ್ ಐಸಿ ರೇಷ್ಮೆ ಸೀರೆ ಖರೀದಿಗಾಗಿ ನೂಕುನುಗ್ಗಲು ಉಂಟಾಗಿದ್ದು, ಲಾಟರಿ ಮೂಲಕ ಸೀರೆ ನೀಡಲಾಗುತ್ತದೆ ಎಂಬುದನ್ನರಿತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮೃಗಾಲಯದ ಎದುರಿರುವ ಕೆಎಸ್ ಐಸಿ ಸಿಲ್ಕ್ ಮಳಿಗೆಯಲ್ಲಿ ನಡೆದಿದೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರದ ವತಿಯಿಂದ ಕಡಿಮೆ ದರದಲ್ಲಿ ರೇಷ್ಮೆ ಸೀರೆ ವಿತರಿಸಲಾಗುವುದು ಎಂದು ರೇಷ್ಮೆ ಸಚಿವ ಸಾರಾ ಮಹೇಶ್ ಹೇಳಿದ್ದರು. ಆದರೆ ಕೊಡಗು ಪ್ರವಾಹದಿಂದ ವಿತರಣೆ ಕುರಿತು ಹೆಚ್ಚು ಗಮನ ಹರಿಸಿರಲಿಲ್ಲ. ಹೀಗಾಗಿ ಈ ಉಡುಗೊರೆಯನ್ನು ಮಹಿಳೆಯರಿಗೆ ಗೌರಿಹಬ್ಬ ಗಣೇಶ ಹಬ್ಬಕ್ಕೆ ನೀಡಲು ಸರ್ಕಾರ ಮುಂದಾಯಿತು.

Women expressed outrage in Mysuru

ಈ ಹಿನ್ನೆಲೆಯಲ್ಲಿ ಏಕಾಏಕಿ ಮಾಹಿತಿಯನ್ನಾಧರಿಸಿ ಇಂದು ಬೆಳಗ್ಗೆ 7 ಗಂಟೆಯಿಂದಲೇ ಮಹಿಳೆಯರು ಮೃಗಾಲಯ ರಸ್ತೆಯಲ್ಲಿರುವ ಮೈಸೂರು ಸಿಲ್ಕ್ ಅಂಗಡಿಯಲ್ಲಿ ಕಡಿಮೆ ದರದಲ್ಲಿ ಸೀರೆ ಕೊಳ್ಳಲು ಸಾಲು ಗಟ್ಟಿ ನಿಂತಿದ್ದರು.

ಸೀರೆ ಪಡೆಯಲು ಆಧಾರ್ ಕಾರ್ಡ್ ಪಡೆದು ಲಾಟರಿ ಮುಖಾಂತರ ರೇಷ್ಮೆ ಸೀರೆಗೆ ಆಯ್ಕೆ ಮಾಡಲಾಗುತ್ತದೆ ಎಂದ ಹೇಳಿದ್ದಕ್ಕೆ ಮಹಿಳೆಯರು ಆಕ್ರೋಶಗೊಂಡು ಮೈಸೂರು ಸಿಲ್ಕ್ ಅಂಗಡಿಯ ಮಾಲೀಕರ ವಿರುದ್ಧ ಗಲಾಟೆಗಿಳಿದ ಘಟನೆಯೂ ಜರುಗಿತು.

ಗೌರಿ ಹಬ್ಬದ ಪ್ರಯುಕ್ತ ರಿಯಾಯತಿ ದರದಲ್ಲಿ ಕೆಎಸ್ ಐಸಿ ಯ ರಾಜ್ಯದಲ್ಲಿನ 18 ಬ್ರಾಂಚ್ ಗಳಲ್ಲಿ ಸೀರೆ ನೀಡಲಾಗುತ್ತಿದ್ದು, ಮೈಸೂರಿನಲ್ಲಿಯೂ ಕೆಎಸ್ ಐಸಿ ಮಳಿಗೆ ಸೀರೆ ನೀಡಲಾಗುತ್ತಿದೆ. 15 ಸಾವಿರ ರೂ. ಸೀರೆಯನ್ನು ನಾಲ್ಕೂವರೆ ರೂ.ಗೆ ನೀಡಲಾಗುತ್ತಿದ್ದು, ಸೀರೆ ಕೊಳ್ಳಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ.

Women expressed outrage in Mysuru

"ನಾವು ಬೆಳಗಿನ ಜಾವದಿಂದಲೇ ಇಲ್ಲಿಗೆ ಬಂದು ಕುಳಿತಿದ್ದೇವೆ. ನೀವು ಆಧಾರ್ ಸಂಖ್ಯೆ ನೋಂದಣಿ ಮಾಡಿಕೊಂಡು ಲಾಟರಿ ಮೂಲಕ ಅಯ್ಕೆ ಮಾಡಿ ಸೀರೆ ನೀಡಿದರೆ ನಮಗೆ ಅನ್ಯಾಯವಾಗಲಿದೆ. ಕಾದು ಕುಳಿತವರಿಗೆ ಬೆಲೆಯಿಲ್ಲವೇ" ಎಂದು ಮಹಿಳೆಯರು ಮ್ಯಾನೇಜರ್ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಸರ್ಕಾರದ ವಿರುದ್ಧ, ಮಳಿಗೆಯ ಮ್ಯಾನೇಜರ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆ ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+