ಮೈಸೂರಿನಲ್ಲಿ ಬರೋಬ್ಬರಿ 5 ಕೆ.ಜಿ.ತೂಕದ ಮಗುವಿಗೆ ಜನ್ಮ ಕೊಟ್ಟ ತಾಯಿ
ಮೈಸೂರು, ಡಿಸೆಂಬರ್ 8: ಬರೋಬ್ಬರಿ 5 ಕೆ.ಜಿ. 100 ಗ್ರಾಂ ತೂಕ ಹೊಂದಿರುವ ಮಗುವೊಂದು ಮೈಸೂರಿನಲ್ಲಿ ಜನಿಸಿದೆ.
ತಿಲಕ್ ನಗರದ ನಿವಾಸಿ ಸಿದ್ದರಾಜು ಅವರ ಪತ್ನಿ ರಾಜೇಶ್ವರಿ ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಅಪರೂಪದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ತೂಕ ಜಾಸ್ತಿಯಿದ್ದ ಕಾರಣ ವೈದ್ಯಾಧಿಕಾರಿಗಳು ಸಿಸೇರಿಯನ್ ಮೂಲಕ ಹೊರತೆಗೆದಿದ್ದಾರೆ.

ಇನ್ನು ಬಲ ಭೀಮನಿಗೆ ಜನ್ಮ ನೀಡಿದ ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದು, ತಾಯಿ-ಮಗುವಿನ ಜೀವವನ್ನು ಆಸ್ಪತ್ರೆಯ ವೈದ್ಯೆ ಡಾ. ವೀಣಾ ಜಾಗರೂಕತೆಯಿಂದ ಉಳಿಸಿದ್ದಾರೆ.

ಶುಕ್ರವಾರ (ಡಿಸೆಂಬರ್ 07) ಸಂಜೆ 6 ಗಂಟೆ ಸುಮಾರಿಗೆ ಮಗು ಜನಿಸಿದಾಗ ವೈದ್ಯರೂ ನೋಡಿ ಆಶ್ಚರ್ಯವ್ಯಕ್ತಪಡಿಸಿದರು. ಸಾಮಾನ್ಯವಾಗಿ ಆಗ ತಾನೇ ಜನಿಸಿದ ಮಗುವಿನ ತೂಕ 3.50 ಕೆ.ಜಿ. ಯೊಳಗೆ ಇರುತ್ತದೆ. ಆದರೆ ಈ ಮಗು 5 ಕೆಜಿ ಯಿರುವುದು ಎಲ್ಲರನ್ನು ದಂಗುಗೊಳಿಸುವಂತೆ ಮಾಡಿದೆ.












Click it and Unblock the Notifications